January 18, 2025
Nagarapanchami2
ತುಲುನಾಡಲ್ಲಿ “ನಾಗಗ್ ತನು ಮಯಿಪರೆ ಉಂಡು” (ನಾಗನ ಕಲ್ಲಿಗೆ ತಂಪು ಅಭಿಷೇಕ ಮಾಡಬೇಕು)ಅಂತಾರೆ ಕೆಲವರು. ಇನ್ನು ಕೆಲವರು“ನಾಗನಿಗೆ ಪೇರ್ ಮಯಿಪರೆ ಉಂಡು”(ನಾಗನ ಕಲ್ಲಿಗೆ ಹಾಲು ಅಭಿಷೇಕ ಮಾಡಬೇಕು) ಅಂತಾರೆ.ಇಲ್ಲಿ ನಾಗನಿಗೆ ಪೇರ್ ಮಯಿಪರೆ ಉಂಡು ಎಂಬುದು ಸರಿ.ಆದಿ ಅನಾದಿ ಕಾಲದಿಂದಲೇ ನಾಗನ ಕಲ್ಲಿಗೆ(ಆರಂಭದಲ್ಲಿ ನಾಗನ ಕಲ್ಲುಗಳಲ್ಲಿ ನಾಗಬಿಂಬ ಅಥವಾ ನಾಗ ಪ್ರತಿಮೆ ಇದ್ದಿರಲಿಲ್ಲ. ಬರೆ ಹಾಸಿದ ಆಯ ಮೂಲೆ ಇಲ್ಲದ ಹಾಸಿದ ಪಾದೆಕಲ್ಲು ಇರುತ್ತಿತ್ತು)ತುಲುವರು ನೀರು, ಹಾಲು, ಕಾಡು ಹೂಗಳನ್ನು ಅರ್ಪಿಸುತ್ತಾ ಬಂದರು.ಇದು ಅಂದಿನ ಸೂದ್ರರ ಆರಾಧನೆಯ ಶೈಲಿ ಆಗಿತ್ತು. ಈಗ ವೈಷ್ಣವರ ಶೈಲಿ.ನೀರು ಹಾಲಿನ ಜೊತೆಗೆ ತುಪ್ಪ,ಜೇನುತುಪ್ಪ, ಎಳನೀರುಗಳ ಅಭಿಷೇಕ ಮಾಡುವರು. ನಾಗನಿಗೆ ತಂಪುಣಿಸುವ ನಂಬಿಕೆ. ಅಂದು ಸೂದ್ರರು ಮರಣ ಹೊಂದಿದ ನಾಗಗಳನ್ನು ನಾಗಬನದಲ್ಲಿ ದಫನ ಮಾಡಿ ಕಲ್ಲು ಹಾಕಿ ನಾಗನನ್ನು ಕಲ್ಲಿನಲ್ಲಿ ನಂಬುತ್ತಿದ್ದರು. ಕಲ್ಲಿಗೆ ಹಾಲು ಎರೆದು ನಾಗಾತ್ಮಗಳಿಗೆ ಶಾಂತಿ ಮಾಡುತ್ತಿದ್ದರು.ನಂತರದ ಕಾಲದಲ್ಲಿ ಜೈನರು ನಾಗಬನ ರಚಿಸಿ ನಾಗನಿಗೆ ಮುರಕಲ್ಲಿನ ಗೋರಿ ಗುಂಡಗಳ ನ್ನು ನಿರ್ಮಿಸಿ ಸರಳವಾಗಿ ಸೂದ್ರರ ರೀತಿಯಲ್ಲೇ ಆರಾಧಿಸುವರು.

ಚಿತ್ರ1:ಆಯಮೂಲ ಇಲ್ಲದ ಕಲ್ಲನ್ನು ಹಾಸಿ ಆದಿ ಆರಂಭದಲ್ಲಿ ಸೂದ್ರರು ಬನದಲ್ಲಿ ನಾಗನನ್ನು ನಂಬಿದರು. ವೈಷ್ಣವರು ತುಲುನಾಡಿಗೆ ಆಗಮಿಸಿದ ಬಳಿಕ ಇದೇ ಬನದಲ್ಲಿ ನಾಗನ ಪ್ರತಿಮೆಯನ್ನು ಪ್ರತಿಷ್ಟೆ ಮಾಡಿದ್ದಾರೆ.

ನಾಗ ದೇವರ ಕಲ್ಲಿಗೆ ಹಾಲು ಎರೆದ ನಂತರ ತಂಬಿಲ ಸೇವೆ ನಡೆಯುತ್ತದೆ. ಇದಕ್ಕೆ ಬೇಕಾದ ವಸ್ತುಗಳೆಂದರೆ ವೀಳ್ಯದ ಎಲೆ, ಅಡಿಕೆ, ಫಲವಸ್ತುಗಳು, ಹರಸಿನ, ಕುಂಕುಮ, ತೆಂಗಿನ ಕಾಯಿ ಮತ್ತು ಪಾವಲಿ ದುಡ್ಡು. ಈ ವಸ್ತುಗಳೆಲ್ಲ ಕನ್ನಡದಲ್ಲಿ ಕರೆಯುವ “ತಾಂಬೂಲ”ದಲ್ಲಿದೆ.ಅದೇ ರೀತಿಯಲ್ಲಿ ಕರೆಯುವ ತೆಲುಗು, ತಮಿಲ್,ಮಲಯಾಲಂ ಭಾಷೆಗಳಲ್ಲಿ ಕರೆಯುವ “ತಾಂಬೂಲಂ”ನಲ್ಲಿರುತ್ತದೆ. ತಾಂಬೂಲ ಅಥವಾ ತಾಂಬೂಲಂ ಎಂಬ ಪದವನ್ನು ತುಲು ಭಾಷೆಯಲ್ಲಿ“ತಂಬಿಲ”ಎನ್ನುವರು. “ತಂಬಿಲ”ಎಂಬ ಅಂದದ ಚಂದದ ಪದವು ಅಪ್ಪಟ ತುಲು ಶಬ್ಧವಾಗಿದ್ದು ತಾಂಬೂಲವೇ ತಂಬಿಲ ಆಗಿರುತ್ತದೆ.
ಚಿತ್ರ2 : ಇಲ್ಲಿ ಯಾವುದೇ ನಾಗ ಪ್ರತಿಮೆ ಇಲ್ಲ. ಬರೇ ಕಲ್ಲಿನಲ್ಲಿಸೂದ್ರರಿಂದ ನಾಗಬನಧಲ್ಲಿ ಕಲ್ಲು ಹಾಸಿ ನಾಗನನ್ನು ನಂಬಿದ್ದಾರೆ.
ದಕ್ಷಿಣ ಭಾರತದಲ್ಲಿ ಎಲೆ ಅಡಿಕೆಯು ಧಾರ್ಮಿಕ ಮಹತ್ವ ಹೊಂದಿದೆ. ಮದುವೆ, ನಿಶ್ಚಿತಾರ್ಥ ಕಾರ್ಯಕ್ರಮಗಳಲ್ಲಿ ತಾಂಬೂಲ(ತಂಬಿಲ)ವನ್ನು ಅದಲು ಬದಲು ಮಾಡಿ ಒಪ್ಪಂದಕ್ಕೆ ಬರುತ್ತಾರೆ. ಕೊಟ್ಟ ಮಾತು ತಪ್ಪೊಲ್ಲ ಎನ್ನುವ ಸತ್ಯತೆ. ತಂಬಿಲಕ್ಕೆ ಅಷ್ಟೊಂದು ಮಹತ್ವದ ಬೆಲೆ ಇದೆ. ಈ ಕಾರಣದಿಂದಲೇ ನಾಗದೇವರಿಗೆ ತಂಬಿಲವು ಅತಿ ಪ್ರಿಯವಾದ ಸೇವೆ ಆಗಿರುತ್ತದೆ.ಹಾಲೆರೆದು ತಂಬಿಲ ಇಟ್ಟು ತುಲು ಭಾಷೆಯಲ್ಲಿ ನಾಲ್ಕು ಮಾತುಗಳನ್ನು ಆಡಿ ಪ್ರಾರ್ಥಿಸಿಕೊಂಡರೆ ನಾಗದೇವರು ಪ್ರಸನ್ನರಾಗಿ ಒಲಿಯುತ್ತಾರೆ. ಅಂದಿನ ಕಾಲದಲ್ಲಿ ಸೂದ್ರರು ಈ ರೀತಿಯಲ್ಲಿ ಸರಳವಾಗಿ ನಾಗನನ್ನು ಆರಾಧಿಸಿ ಕೊಂಡು ಇರುತ್ತಿದ್ದರು.

ಚಿತ್ರ 3 :ಸೂದ್ರರು ಆದಿ ಮೂಲದಲ್ಲಿ ಬರೇ ಕಲ್ಲು ಹಾಕಿ ನಾಗನನ್ನು ನಂಬಿದರು. ಅದೇ ನಾಗಬನದಲ್ಲಿ ಜೈನರು ಮುರಕಲ್ಲಿನ ಸಣ್ಣ ಗೋರಿ ನಿರ್ಮಿಸಿ ನಾಗ ಆರಾಧನೆ ಮಾಡಿದರು.ಅದೇ ಬನದಲ್ಲಿ ವೈಷ್ಣವರು ನಾಗನ ಪ್ರತಿಮೆಯನ್ನು ಇಟ್ಟು ನಾಗನ ಆರಾಧನೆ ಮಾಡಿದರು.

ತುಲುನಾಡಲ್ಲಿ ದೇವರಾಧನೆ ಆರಂಭವಾದ ಬಳಿಕ ನಾಗನ ಕಲ್ಲಿನ ಮೇಲೆ ನಾಗನ ಪ್ರತಿಮೆ ಇಡುವ ಪದ್ಧತಿ ಬಂತು. ನಾಗನ ಬಿಂಬಕ್ಕೆ ಅರಸಿನ ಪುಡಿಯ ಅಭಿಷೇಕ ಮಾಡಲು ಆರಂಭ ಆಯಿತು. ಅರಸಿನ ಪುಡಿಯಿಂದ ನಾಗನ ಬಿಂಬ ಎದ್ದು ಕಾಣಿಸುತ್ತದೆ. ಅಲ್ಲದೆ ಬಿಂಬದ ಕೊಳೆ ಹೋಗಿ ಶುದ್ಧವಾಗುತ್ತದೆ. ಆದಿ ಆರಂಭದಲ್ಲಿ ನಾಗಬನದ ಮಣ್ಣೇ ಗಂಧ ಪ್ರಸಾದ ಆಗಿತ್ತು. ಅದನ್ನೇ ಹಣೆಗೆ ಹಚ್ಚಿಕೊಳ್ಳುತ್ತಿದ್ದರು. ನಂತರದಲ್ಲಿ ಅರಸಿನ ಪುಡಿಯೇ ನಾಗನ ಗಂಧ ಪ್ರಸಾದ ಆಯಿತು. ತಂಬಿಲ ಎಂದರೆ ತಾಂಬೂಲಂ(ಬಚ್ಚಿರೆ-ಬಜ್ಜೇಯಿ-ಬೂಳ್ಯ)ಎಂದು ತುಲುವರು ಅರಿಯಬೇಕು.
ಚಿತ್ರ 4)ಮೇಲಿನ ಬನವನ್ನು ಜೀರ್ಣೋದ್ಧಾರ ಮಾಡಲಾಗಿದೆ.
ತಂಬಿಲಕ್ಕೆ ಬೇಕಾದ ವಸ್ತುಗಳೊಡನೆ ಪನಿಯಾರದ ವಸ್ತುಗಳನ್ನು ನಾಗ ಸೇವೆಗೆ ಒಯ್ಯುವರು ಭಕ್ತರು. ಅವಲಕ್ಕಿ, ಪೊದ್ದೊಲು(ಅರಲು),ಕಾಯಿ, ಬೆಲ್ಲ, ಹಣ್ಣು ಇವುಗಳು ಪನಿಯಾರಕ್ಕೆ ಬೇಕಾದ ಅಗತ್ಯ ವಸ್ತುಗಳು. ಇವುಗಳನ್ನೆಲ್ಲ ಬೆರಕೆ ಮಾಡಿ ಎಲೆಯಲ್ಲಿ ಇರಿಸಿ ನಾಗದೇವರ ಕಲ್ಲಿನ ಎದುರಲ್ಲಿ ಇಡುವರು. ಪ್ರಾರ್ಥನೆ ಆದ ಮೇಲೆ ಇದನ್ನು ಪನಿಹಾರ(ಲಘ ಆಹಾರ)ದ ರೂಪದಲ್ಲಿ ಹಂಚುವರು. ದೇವರ ಪುರ್ಸಾದ(ಪ್ರಸಾದ)ಪದಕ್ಕೆ ” ಪನಿಹಾರ” ಎಂದು ಕರೆದರು.ನಾಗನ ಆರಾಧನೆ ಆದ ಬಳಿಕ ಪನೀತ್ (ಲಘು-ಸ್ವಲ್ಪ)ಆಹಾರ ನೀಡುವ ಪದ್ಧತಿಯನ್ನು ಜೈನರು ತಂದರು.ನಂತರದ ಕಾಲದಲ್ಲಿ ಬೂತೊಗಳಿಗೂ ತಂಬಿಲ, ಪನಿಯಾರ ಸೇವೆಗಳು ನಡೆಯುತ್ತದೆ. ಇವೆರಡೂ ದೈವರಾಧಾನೆಯಲ್ಲಿ ಬರುತ್ತದೆ. ಆದಿ ಆರಂಭದಲ್ಲಿ ಇವುಗಳಿಗೆ ಬತ್ತಿಯಿಂದ ಆರತಿ ಇದ್ದಿರಲಿಲ್ಲ. ಧೂಪದ ಆರತಿ ನಡೆಯುತ್ತಿತ್ತು. ಈಗಲೂ ಬೂತೊಗಳಿಗೆ ಈ ಧೂಪ(ಪುಗೆ ಪತ್ತುನಿ)ದ ಕ್ರಮ ಇದೆ. ಇಂತಹ ವಿಚಾರಗಳನ್ನು ತಿಳಿದು ಅರ್ಥೈಸಿಕೊಂಡರೆ ನಮ್ಮ ಹಿರಿಯರು ಆರಂಭಿಸಿದ ಆರಾಧನೆಯ ಒಳ ತಿರುಳನ್ನು ಅರಿಯಬಹುದು. ತಂದೆ ಮಾಡುತ್ತಿದ್ದರೆಂದು ಮಗನು ಕಣ್ಣು ಮುಚ್ಚಿಕೊಂಡು ಮಾಡಿದರೆ ಅರ್ಥ ಇಲ್ಲ. ನಮ್ಮ ತುಲುವರ ಪ್ರತಿಯೊಂದು ಆಚರಣೆಯ ಹಿಂದೆ ಒಂದೊಂದು ಒಳ್ಳೆಯ ಅರ್ಥಗಳು ಇರುತ್ತದೆ. ಮೊದಲಾಗಿ ಅವುಗಳನ್ನು ಅರಿತು ನಂತರ ಆಚರಣೆ ಮಾಡಬೇಕು. ಆಗ ಸಿಗುವ ತೃಪ್ತಿ ಬೇರೆ ಆಗಿರುತ್ತದೆ ಅಲ್ಲವೇ?

ಚಿತ್ರ 5: ಜೈನರು ಪ್ರಥಮವಾಗಿ ನಾಗನನ್ನು ದಫನ ಮಾಡಿ ಮುರಕಲ್ಲಿನಲ್ಲಿ ಗೋರಿ ಕಟ್ಟಿ ನಾಗನನ್ನು ನಂಬಿದ್ದರು. ನಂತರದ ಕಾಲದಲ್ಲಿ ಆದೇ ಗೋರಿಗೆ  ವೈಷ್ಣವರು ನಾಗನ ಪ್ರತಿಮೆಯನ್ನು ಇಟ್ಟು ಆರಾಧಿಸಲಾಯಿತು.

  “ತಂಬಿಲವೇ ತಾಂಬೂಲಂ” ಎಂದರೆ ಬಚ್ಚಿರೆ(ವೀಳ್ಯದೆಲೆ)ಬಜ್ಜೇಯಿ(ಅಡಿಕೆ)ಯನ್ನು ನಾಗನ ಕಲ್ಲಿಗೆ ಇಟ್ಟು ನೀರು, ಹಾಲು ಹಾಕಿ ಕಾಡು ಹೂವುಗಳನ್ನು ಕಲ್ಲಿಗೆ ಆರ್ಪಿಸುವುದು .ನಾಗನ ಆತ್ಮಗಳನ್ನು ಸಂತೃಪ್ತಿಗೊಳಿಸುವುದು.ಇದು ಆದಿ ಮೂಲದಲ್ಲಿ ದ್ರಾವಿಡ ಸೂದ್ರರ ನಾಗರಾಧನೆ ಆಗಿತ್ತು.       ಜೈನರ ಆಗಮನದ ಬಳಿಕ ತುಲುನಾಡಲ್ಲಿ ನಾಗರಾಧನೆ ಇನ್ನಷ್ಟು ವೃದ್ಧಿ ಆಗುತ್ತದೆ.ಸೂದ್ರರು ಅನುಸರಿಸಿ ಕೊಂಡು ಬಂದ ರೀತಿಯಲ್ಲಿ ನಾಗರಾಧನೆ ನಡೆಯುತ್ತದೆ.ಬಂದ ಭಕ್ತರಿಗೆ “ಪನಿಯಾರ”(ಪನೀತ್ ಆಹಾರ)ವನ್ನು ಕೊಡುವ ಕ್ರಮವ ನ್ನು ಜೈನರು ತಂದರು.  ನಂತರದ ಕಾಲದಲ್ಲಿ ತುಲುನಾಡಿಗೆ ಬುದ್ಧರು,ಲಿಂಗಾಯತರು ಬರುವರು.ಇವರು ಬಂದವರು ದೈವರಾಧನೆಯ ನ್ನು ಮುಟ್ಟಲು ಹೋಗುವುದಿಲ್ಲ.ಅವರ ಧರ್ಮವನ್ನು ಪ್ರಸಾರ ಮಾಡುವರು.ಬಹಳಷ್ಟು ಸೂದ್ರರು ಬುದ್ಧ ಧರ್ಮ ಸೇರುವರು.ಲಿಂಗಾಯತರು ಶಿವಾಲಯ(ಆಲಡೆ)ಸ್ಥಾಪಿಸುವರು.ಸೂದ್ರರು ದೈವರಾಧನೆ ಒಡನೆ ಬೌದ್ಧ ಧರ್ಮವನ್ನುಅನುಸರಿಸುವರು.ಜೈನರು ಜಿನ ಧರ್ಮದೊಡನೆ ದೈವರಾಧ ನೆಯನ್ನೂ ಮಾಡುವರು.  

 ಚಿತ್ರ 6)ನಾಗಬನದಲ್ಲಿ ನಾಗನನ್ನು ಆರಾಧಿಸಲು ಹರಕೆ ರೂಪದಲ್ಲಿ ಕಟ್ಟಿದ ನಾಗನ ಗುಂಡ ಜೈನರಿಂದ. ಹತ್ತಿರದಲ್ಲೇ ಇನ್ನೊಂದು ನಾಶವಾದ ನಾಗನ ಗುಂಡದ ಅವಶೇಷ ಕಾಣಬಹುದು.
ಕೊನೆಗೆ ವೈಷ್ಣವರು ತುಲುನಾಡಿಗೆ ಕಾಲಿಡುವರು.ದೇವರಾಧನೆಯನ್ನು ಸ್ಥಾಪನೆ ಮಾಡುವರು.ಪರಿಣಾಮವಾಗಿ ಬೌದ್ಧ ಮತ್ತು ಲಿಂಗಾಯತ ಧರ್ಮಗಳು ತುಲುನಾಡು ತೊರೆಯುವುದು.ಬೌದ್ಧ ಧರ್ಮ ಸೇರಿದ್ದ ಸೂದ್ರರನ್ನು ವೈಷ್ಣವರು ಹಿಂದೂ ಧರ್ಮಕ್ಕೆ ಸೇರಿಸುವರು.ಇದೇ ಬುದ್ಧಧರ್ಮದ  ಅನುಯಾಯಿಗಳನ್ನು ಶಾಶ್ವತವಾಗಿ ” ಬೌದ್ದೆರ್”; “ಬೈದ್ದೆರ್” ಎಂದು ಜನರು ಕರೆದರು. ಈ ಸೂದ್ರರು ಸ್ಥಾಪಿಸಿದ್ದ ದೈವರಾಧನೆ(ನಾಗ ಮತ್ತುಬೂತೊಲು)ಯ ಪಾರುಪತ್ಯವೂ ವೈಷ್ಣವರ ಪಾಲಾಗುತ್ತದೆ. ಬೇರೆ ಬೇರೆ ದೇವರ ಹಬ್ಬಗಳನ್ನು ಆಚರಿಸುವ ಆಚರಣೆಗ ಳಂತೆ ನಾಗದೇವರನ್ನು ಆಚರಿಸಲು ಒಂದು ದಿನವನ್ನುವೈಷ್ಣವರು ನಿಗದಿ ಮಾಡುತ್ತಾರೆ.ಅದೇ “ನಾಗರ ಪಂಚಮಿ” ತುಲುನಾಡಿಗೆ ದೊಡ್ಡದಾಗಿ ಮೆರೆಯುತ್ತದೆ.“ನಾಗ ತಂಬಿಲ” ಎಂಬ ತುಲು ಪದವನ್ನು ವೈಷ್ಣವರು ಉಳಿಸಿ ಕೊಂಡು ಬಂದರು.ಭಕ್ತರಿಗೆ ಕೊಡುವ “ಪನಿಯಾರ”(ಪನಿ.ಚೂರು ಆಹಾರ)ದ ವಸ್ತುಗಳನ್ನು ತಂಬಿಲದ ವಸ್ತುಗಳೊಡನೆ ಸೇರಿಸಿ ನಾಗ ತಂಬಿಲವನ್ನು  ನಡೆಸುತ್ತಾ ಬಂದರು.
-ಇಗೋ.ಭಂಡಾರಿ ಕಾರ್ಕಳ.

Leave a Reply

Your email address will not be published. Required fields are marked *