ವಿದ್ಯಾರ್ಥಿಗಳಿಗೆ ಅಕ್ಷರ ಮಾಲೆಗಳ ಪರಿಚಯಿಸಿ,ಕೈ ಹಿಡಿದು ಓದಲು ಬರೆಯಲು ಕಲಿಸಿ, ಮನಸ್ಸನ್ನು ತಿದ್ದಿ ತೀಡಿ ಪೋಷಿಸಿ,ಎಲ್ಲಕ್ಕಿಂತ ಹೆಚ್ಚಾಗಿ ವಿವೇಕ, ಪ್ರೀತಿ, ತಾಳ್ಮೆ,ಕರುಣೆ,ಶಿಸ್ತು, ದೂರದೃಷ್ಟಿ,ಮಾನವೀಯತೆ, ಸಂಸ್ಕಾರ,ಎಡವಿದಾಗ ದಂಡಿಸಿ ಅವರನ್ನು ಸಮಾಜದಲ್ಲಿ ಒಂದು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುವ ಪವಿತ್ರ ಕಾಯಕದಲ್ಲಿ ತೊಡಗಿಸಿರುವ ಶಿಕ್ಷಕರು ನಿಸ್ವಾರ್ಥ ಮನದಿಂದ ಮಕ್ಕಳಲ್ಲಿ ಜಯ ಕಾಣಲು ಬಯಸುವ ದೇವರು.
ಶಿಕ್ಷಕರ ದಿನದಂದು ಪ್ರತಿಯೊಂದು ಶಾಲೆಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ಮಾತನಾಡುವರು, ಉಡುಗೊರೆಗಳನ್ನು ಕೊಟ್ಟು, ಅವರಿಗಾಗಿ ಹಾಡು ನೃತ್ಯಗಳನ್ನು ಮಾಡುತ್ತ ಅವರನ್ನು ರಂಜಿಸುವರು.ಆದರೆ ಕಳೆದ ವರ್ಷ ಕಾಣಿಸಿಕೊಂಡ ಕೊರೋನ ಎಂಬ ಖಾಯಿಲೆಯಿಂದಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಒಡನಾಟಕ್ಕೆ ಕಡಿವಾಣ ಹಾಕಿದಂತೆ ಆಗಿದೆ. ಆದಷ್ಟು ಬೇಗ ಇದರಿಂದ ಮುಕ್ತಿ ಪಡೆದು ಜನಜೀವನ ಮುಂಚಿನಂತಾಗಲಿ ಎಂದು ಬೇಡುತ್ತ ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
✍️ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ