January 18, 2025
Wishes

ಆದಿ ಪೂಜಿತ ಗಣಪನಿಗೆ ವಂದಿಸುತ್ತಾ ಸರ್ವ ರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು…..ಗೌರಿ ಮಡಿಲ ತುಂಬಿದ ಮೃಣ್ಮಯಿ ರೂಪಿ ಬೆನಕ ಗಂಗೆಯ ಒಡಲ ತುಂಬುತ್ತಾ….ಲೋಕ ಕಂಟಕವಾದ ಮಹಾ ಮಾರಿ ಯನ್ನು ನಾಶಮಾಡಲಿ ಎಂಬ ಸದಾಶಯದೊಂದಿಗೆ …..

“ಮರಳಿ ಬಂದ ಗಣಪ “

ಓಂಕಾರ ರೂಪಿ ಏಕದಂತ ಮರಳಿ ಬಂದನು
ಜಗದ ತಮವ ಕಳೆಯಲೆಂದು ಬೆಳಕ ತಂದನು…

ಅನಂಗಪೂಜಿತ ಮೂಷಿಕ ವಾಹನ ಲಂಬೋದರನು
ಬಾದ್ರಪದ ಚೌತಿಯಿಂದು ಶುಭವ ತಂದನು

ಚಂದ್ರ ಗರ್ವ ಮುರಿದ ವೀರ ವಕ್ರತುಂಡನು
ಆನೆ ಮೊಗದ ಅಂದಗಾರ ಗೆಲುವ ತಂದನು

ವ್ಯಾಸ ವಂದಿತ ಭರತ ಚರಿತ ಗೌರಿ ಸುತ ಅಮೇಯನು ನೂರೊಂದು ಹವನ ಭಕ್ತಿಯಲಿ ಮಿಂದು ಎದ್ದನು….

ಸುಮುಖ ವರದ ಗಜಕರ್ಣ ರತ್ನ ಕಿರೀಟಿ ಶ್ರೀನಂದನನು
ಮನದ ದುಗುಡ ಕಳೆಯಲೆಂದು ನಗುವ ತಂದನು

ಗರಿಕೆ ಪ್ರಿಯ ಅಕ್ಷರ ಗಣಪ ಆದಿಪೂಜಿತ‌ ಅಚಿಂತ್ಯನು
ಜಗದ ರೋಗ ಕಳೆಯಲೆಂದು ಮರಳಿ ಬಂದನು
✍🏻 ಎ.ಆರ್ ಭಂಡಾರಿ ವಿಟ್ಲ….

Leave a Reply

Your email address will not be published. Required fields are marked *