ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಂಚಾಯತ್ ಉಪಾಧ್ಯಕ್ಷರಾಗಿದ್ದ ದಿ.ಕೆ ಮುದ್ದು ಭಂಡಾರಿ ಮತ್ತು ದಿ.ಕಮಲಮ್ಮನವರ ಪುತ್ರಿ ಶ್ರೀಮತಿ ಶಕುಂತಲಾ.ಡಾ.ಚಂದ್ರಕಾಂತ್ ಕೋರೆಯವರು ಉತ್ತರ ಕರ್ನಾಟಕದ ಪ್ರಸಿದ್ದ ವೈದ್ಯಕೀಯ ಕಾಲೇಜಿನ ನರ್ಸಿಂಗ್ ವಿಭಾಗದ ಸೂಪರಿಂಟೆಂಡೆಂಟ್ ಪದವಿಗೆ (superintendent) ಆಯ್ಕೆಯಾಗಿದ್ದಾರೆ.
ಶ್ರೀಮತಿ ಶಕುಂತಲಾರವರು ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ಸಮಿತಿಯ ಉಪಾಧ್ಯಕ್ಷರು ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಹೊಸನಗರ ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷರು ರಿಪ್ಪನ್ ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ರಿಪ್ಪನ್ ಪೇಟೆ ಪಂಚಾಯತ್ ಉಪಾಧ್ಯಕ್ಷರು ಆಗಿದ್ದ ದಿ.ಕೆ ಮುದ್ದು ಭಂಡಾರಿಯವರ ಪುತ್ರಿ.
ರಿಪ್ಪನ್ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಶ್ರೀಮತಿ ಶಕುಂತಲಾ , ಹೆಚ್ಚಿನ ಶುಶ್ರೂಷ ಅಧಿಕಾರಿ ತರಬೇತಿಯನ್ನು ಬೆಳಗಾವಿಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆದಿರುತ್ತಾರೆ. ನಂತರದಲ್ಲಿ ಬೆಂಗಳೂರಿನ ಸೇಂಟ್ ಜಾನ್ ಮೆಡಿಕಲ್ ಕಾಲೇಜು ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಉದ್ಯೋಗ ಮಾಡಿದ್ದಾರೆ. ಆ ಬಳಿಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಊರಿನ ಶರಣ ಸಂಸ್ಕೃತಿಯ ಪ್ರತಿಪಾದಕರು, ದೊಡ್ಡ ಭೂ ಹಿಡುವಳಿದಾರರು, ಕೆ ಎಲ್ ಈ ಸೊಸೈಟಿಯ ಮತ್ತು ಸಹಕಾರಿ ಸಂಘದ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಆಗಿದ್ದ ದಿ. ಟಿ . ಡಿ ಕೋರೆ ಯವರ ಸುಪುತ್ರ ಡಾ.ಚಂದ್ರಕಾಂತ್ ಟಿ ಕೋರೆ ಯವರೊಂದಿಗೆ ವಿವಾಹವಾಗಿ ಹಾಲಿ ಈಗ ಬೆಳಗಾವಿಯಲ್ಲಿನೆಲೆಸಿದ್ದು ಉತ್ತರಕರ್ನಾಟಕದ ಸುಪ್ರಸಿದ್ಧ ಕೆ ಎಲ್ ಈ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ದಂಪತಿಗಳಿಬ್ಬರೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಈರ್ವರು ಪುತ್ರರಿದ್ದು ಅವರಲ್ಲಿ ಓರ್ವ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಇನ್ನೋರ್ವ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಮಲೆನಾಡಿನ ಭಂಡಾರಿ ಕುಟುಂಬದಲ್ಲಿ ಜನಿಸಿರುವ ದಕ್ಷಿಣ ಕರ್ನಾಟಕದ ಹೆಣ್ಣು ಮಗಳು ಉತ್ತರ ಕರ್ನಾಟಕದ ಸುಪ್ರಸಿದ್ಧ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ನರ್ಸಿಂಗ್ ಸುಪರಿಂಟೆಂಡೆಂಟ್ ಆಗಿ ನೇಮಕ ಹೊಂದಿರುವುದು ನಮ್ಮ ಸಮಾಜಕ್ಕೊಂದು ಹೆಮ್ಮೆಯ ಸಂಗತಿ.
ಶ್ರೀಮತಿ ಶಕುಂತಲಾರವರು ತನ್ನ ಸೇವಾವಧಿಯಲ್ಲಿ ಇನ್ನೂ ಹೆಚ್ಚಿನ ಪದೋನ್ನತಿ ಹೊಂದಲಿ, ಸಮಾಜಕ್ಕೆ ಕೀರ್ತಿಯನ್ನು ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಾ ಅಭಿನಂದನೆ ಸಲ್ಲಿಸುತ್ತದೆ.
ಮಾಹಿತಿ :ಮಂಜುನಾಥ ಭಂಡಾರಿ, ರಿಪ್ಪನಪೇಟೆ
– ಭಂಡಾರಿ ವಾರ್ತೆ