“ಎನ್ನ ಕೊಡಿ ನಾಲಾಯಿದ ಮದಿಪು “ ಅತ್ತೆ ಅಸ್ರನ್ನೆರೆ?(ನನ್ನ ತುದಿ ನಾಲಿಗೆಯ ಮಾತು.ಅಲ್ಲವೇ ಅಸ್ರನ್ನರವರೇ).ಎನ್ನುತ್ತವೆ ತುಲುನಾಡ್ ಬೂತೊಗಳು(ದೈವಗಳು).ಬೂತ ಕೋಲದಲ್ಲಿ ಬೂತ ತನ್ನ ನಾಲಿಗೆ ತುದಿಯನ್ನು ಮುಟ್ಟಿ ಈ ರೀತಿ ಹೇಳುತ್ತದೆ.ಅಂದರೆ ನಾಲಗೆಯನ್ನು ಅಡ್ಡ ಹಾಕಿ ಇಲ್ಲವೇ ಮಡಚಿ ಮಾತಾಡುವ ಭಾಷೆ ನನ್ನದಲ್ಲ. ನನ್ನ ಭಾಷೆ ತುದಿ ನಾಲಿಗೆಯಲ್ಲಿ ಮಾತಾಡುವ ಭಾಷೆ ಎನ್ನುತ್ತದೆ.
ಅಂದರೆ ನನ್ನ ಭಾಷೆ “ತುಲು”.ತುಳು ಅಲ್ಲ ಎನ್ನುತ್ತದೆ.ಇದು ಆದಿ ಆರಂಭದ ನಾಗ ಕೋಲದಿಂದ ಹೇಳುತ್ತಾ ಬಂದ ದೈವಗಳ ಸತ್ಯ ನುಡಿಗಳು. ಮತ್ತೇಗೆ ‘ತುಲು’ ಪದ ‘ತುಳು’ ಎಂದಾಯಿತು? ‘ತುಳು’ ಎಂಬುದು ತಪ್ಪಲ್ಲವೇ? ಇಲ್ಲಿ “ಮದಿಪು” ಎಂದರೆ ಬೂತದ ಮಾತು.ಭಕ್ತರ ಪ್ರಾರ್ಥನೆಗೆ ಬೂತೊ ತನ್ನ ತುದಿ ನಾಲಿಗೆಯಲ್ಲಿ ಮಾತಾಡುವ ಭಾಷೆ ತುಲುವಿನಲ್ಲಿ ಅಭಯದ ಮಾತುಗಳನ್ನು ನುಡಿಯುತ್ತದೆ.
ಭಾರತಾದ್ಯಂತ ಸಂಸ್ಕೃತ ಭಾಷೆಯ ‘ಳ’ ಎಂಬ ಅಕ್ಷರವನ್ನು ಇತರ ಎಲ್ಲಾ ಭಾಷೆಗಳ ಅಕ್ಷರ ಮಾಲೆಯ ಕೊನೆಯಲ್ಲಿ ಸೇರಿಸಲಾಗಿದೆ. ಇದರಿಂದಾಗಿ ತಮಿಲು-ತಮಿಳು, ಮಲಯಾಲಂ-ಮಲಯಾಳಂ(ಮಲಯ+ಅಲೆ. ಅಂದರೆ ಮಲೆಯಲ್ಲಿ ವಾಸ ಮಾಡುತ್ತಿದ್ದವರು) ಆಗಿದೆ.
ಮಲಯಾಲಂ ಪದದ ಮಲಯ ಎಂಬುದು ಮಳಯ ಎಂದಾಗಿಲ್ಲ.ಅದೇ ರೀತಿ ತೆಲುಗು ಪದವು ತೆಳುಗು ಎಂದಾಗಿಲ್ಲ. ಇದರ ಎರಡನೆಯ ಅಕ್ಷರ ‘ಲು’ ಎಂಬುದು ‘ಳು’ಎಂದಾಗಿಲ್ಲ. ತುಲು ಭಾಷೆಯ ಎರಡನೆಯ ಅಕ್ಷರ ‘ಲು’ ಎಂಬುದು ‘ಳು’ ಆಗಿದೆ. ಇದು ತಪ್ಪಲ್ಲವೇ? ತುಳು ತಪ್ಪು. ತುಲುವೇ ಸರಿ ಎಂದು ಅಂದು ಮನಷ್ಯರಾಗಿ ಹುಟ್ಟಿ ತುಲುನಾಡಿಗೆ ಶ್ರಮಿಸಿದ ಆ ಬೂತೊಗಳೇ ಹೇಳುತ್ತಾ ಬಂದಿದ್ದಾರೆ. ತುಲುವೇ ಸತ್ಯ.
ತುಲುವೇ ಸರಿ.
‘ತುಳು’ ಎನ್ನುವಾಗ ನಾಲಿಗೆಯನ್ನು ಅಡ್ಡ ಇಲ್ಲವೇ ಮಡಚಿ ಉಚ್ಛಾರ ಮಾಡಬೇಕು. ಆದರೆ ‘ತುಲು’ ಎನ್ನಲು ಬಲು ಸುಲಭ.
“ತುಲು”ಎಂಬ ಪದವು ‘ತಲ'(ಕೆಳಗಿನ)ಎಂಬ ಪದದಿಂದ ಹುಟ್ಟಿದೆ. ಗಟ್ಟದ ಮೇಲಿನವರು ತಲ ಪ್ರದೇಶವನ್ನು ‘ತಲನಾಡ್’ ಎಂದಿದ್ದಾರೆ. ಕ್ರಮೇಣ ‘ತುಲುನಾಡ್‘ ಆಯಿತು. ತಲನಾಡ್ ನವರು ಮೇಲಿನ
ಪ್ರದೇಶವನ್ನು’ಮಲೆನಾಡ್'(ನಂತರ ಗಟ್ಟ-ಗಾಟ್ಸ್)ಎಂದರು.ತುಲುನಾಡ್ ರಾಜ ಪಾಂಡಿಯನನ್ನು
ಮೇಲಿನವರು ಬೂತಾಲ(ಅವರಿಗೆ ಭೂಮಿಯ ತಲದ ನಾಡು)ಪಾಂಡ್ಯ ಎಂದು ಕರೆದಿದ್ದಾರೆ.
ದ್ರಾವಿಡ ಭಾಷೆಗಳಲ್ಲಿ ತುಲು ಭಾಷೆಯೇ ಬಲು ಪ್ರಾಚೀನವಾದುದು.ತಮಿಲ್ ಭಾಷೆಯು ತುಲು ಭಾಷೆಯಿಂದ ಹುಟ್ಟಿದೆ . ತಮಿಲು ಭಾಷೆಯಲ್ಲಿ ಮಹಾಪ್ರಾಣ ಅಕ್ಷಗಳು ಇಲ್ಲ.ತುಲು ಭಾಷೆ ಮಾತಾಡಲು ಮಹಾಪ್ರಾಣದ ಅಗತ್ಯವಿಲ್ಲ.ತುಲು ಭಾಷೆಯಿಂದ ತಮಿಲ್ ಹುಟ್ಟಿದೆ ಎನ್ನುವರು ತಮಿಲು ಸಂಶೋಧಕರು. ತಮಿಲು ಭಾಷೆಯಲ್ಲಿ 13 ಸ್ವರಾಕ್ಷರಗಳು ಇದ್ದರೆ ವ್ಯಂಜನಾಕ್ಷರಗಳು
ಬರೇ 23 ಇದೆ.ಒಟ್ಟು 36 ಅಕ್ಷರಗಳಲ್ಲಿ ತಮಿಲು ಭಾಷೆ ಇದ್ದರೆ ಮಲಯಾಲಂ ಭಾಷೆಯಲ್ಲಿ ಒಟ್ಟು 52 ಅಕ್ಷರಗಳಿವೆ. ಬರೇ 32 ಅಕ್ಷರಗಳಲ್ಲಿ ತುಲು ಭಾಷೆಯನ್ನು ಬರೆಯ ಬಹುದು ಮತ್ತು ಓದಬಹುದು. ಆದಿ ಆರಂಭದಲ್ಲಿ ತುಲು ಭಾಷೆಯು ಹುಟ್ಟುವ ಕಾಲದಲ್ಲಿ ಬರೇ 32 ರಿಂದ 36 ಅಕ್ಷರಗಳು ಮಾತ್ರ ತುಲು ಭಾಷೆಯಲ್ಲಿ ಇದ್ದಿರಬೇಕು.ತುಲು ಲಿಪಿಗಳ ಆಧಾರದಿಂದ ತಮಿಲು ಲಿಪಿಗಳನ್ನು ರಚಿಸುವಾಗ
ಅದರ ಸಂಖ್ಯೆಯನ್ನು ತುಲುವಿನಷ್ಟೆ ರಚಿಸಿರಬೇಕು.
ಹಿಂದೊಮ್ಮೆ ಅಂದಿನ ತುಲುನಾಡ್ ಇಲ್ಲಿ ಪ್ರಲಯ ಆಗಿತ್ತು.ಇಲ್ಲಿ ಬದುಕಲು ಆಗದೆ ಊರು ಬಿಟ್ಟು ಪಶ್ಚಿಮ ಘಟ್ಟ ಹತ್ತಿ ಸಂಚರಿಸುತ್ತಾ ಕೇರಲದ ಮಲಬಾರ್ ತಪ್ಪಲು ಪ್ರದೇಶದಲ್ಲಿ ನೆಲೆಯಾಗುತ್ತಾರೆ ತುಲುವ ದ್ರಾವಿಡ ಸೂದ್ರರು. ಆಗಿನ ತುಲುನಾಡ್ ತುಲುಕಾಡ್ ಆಗಿ ಪರಿವರ್ತನೆ ಆಗುತ್ತದೆ. ಇಲ್ಲಿಂದ ಒಯ್ದ ತುಲು ಲಿಪಿಗಳನ್ನು ಸೂದ್ರರು ಕೇರಲದಲ್ಲಿ ಪ್ರಯೋಗ ಮಾಡುವರು. ಆವರೆಗೆ ಕೇರಲದಲ್ಲಿ ಮಲಯಾಲ ಭಾಷೆಗೆ ಲಿಪಿ ಇರಲಿಲ್ಲ. ನಂತರದ ಕಾಲದಲ್ಲಿ ತುಲು ಲಿಪಿಯನ್ನು ತಮ್ಮದೇ ಎಂದು ಹೇಳಿದರು ಮತ್ತು ಅದು ಅಲ್ಲಿ ಮಲಯಾಲ ಲಿಪಿ ಎಂದು ಶಾಶ್ವತವಾಗಿ ಉಳಿಯುತ್ತದೆ. ನಂತರದ ಕಾಲದಲ್ಲಿ ತುಲುವ ದ್ರಾವಿಡ ಸೂದ್ರರು ವಾಪಸ್ ತಮ್ಮ ನಾಡಿಗೆ
ಬರುವರು. ಇಲ್ಲಿನ ತುಲುಕಾಡನ್ನು ಪುನಃ ತುಲುನಾಡ್ ಆಗಿ ಪರಿವರ್ತನೆ ಮಾಡುವರು. ಕುಡರಿ ಎಸೆದು ತುಲುಕಾಡನ್ನು ತುಲುನಾಡನ್ನಾಗಿ ಪರಿವರ್ತನೆ ಮಾಡುವರು. ಆದರೆ ತಾವು ಒಯ್ದ ತುಲು ಲಿಪಿಯನ್ನು ಅಲ್ಲೇ ಬಿಟ್ಟು ಬರೆ ಕೈಯಲ್ಲಿ ಬರುತ್ತಾರೆ. ಅಲ್ಲಿ ತುಲು ಲಿಪಿಯೇ ಮಲಯಾಲಂ ಲಿಪಿಯಾಗಿ ಬೆಳೆಯಿತು.
ತುಲುವರು ನಿತ್ಯ ಬಳಸುವ ಪದಗಳಲ್ಲಿ ‘ಲ’ ಕಾರ ಹೊಂದಿರುವ ಪದಗಳೇ ಹೆಚ್ಚಾಗಿ ಕಂಡುಬರುತ್ತದೆ. ಉದಾ: ಲಕ್ಕ್, ಬಲ್ಲ,ಕುಲ್ಲು,ಪೋಲ,ಬೇಲೆ,ಅಟಿಲ್,ಅಕು
ತುಲಿಪು, ತೆಲ್ಲವು, ಕಲಿ ಗಂಗಸರ, ಕಲಂಕ್,ತಲ್ಲ್,ಅಲಂಕುನ , ಲಂಕುನ,ತಮೆಲುನು,ಉಗ್ಗೆಲ್,ಒಡಿಲ್,
ತಂಬಿಲ, ನಾಗಮೂಲ,ಆಲಡೆ,ಬಲಿ,ದಕ್ಕೆ ಬಲಿ,ಬೂತೊಲು, ಮೇಲ, ಸೇಲೆ, ಒಪ್ಪಸಾಲೆ,ಇಲ್ಲ್,ಜಾಲ್,ಜೋಕುಲು, ಬಾಲೆಲು,ಕಂಟಲ್ದೆ,ಬಲ್ಲ,ಕಲಸೆ,ಮೆಗ್
ಮರ್ಮಲ್,ಪರ್ಮಲ, ಪುರಲ್,ತೆಲಿಕೆ, ನಲಿಕೆ, ಬುಲಿಪು, ಆಲ್,ಮೋಲು,ಉಲ್ಲಲ್,ಉಲ್ಲೆರ್,ಅಜಲ್,
ಕುಲೆ,ಪಗೆಲ್,ಮದ್ಮಲ್,ಮಲೆ,ನಾಲ್,ಏಲ್
ತುಲುನಾಡ್ ಊರುಗಳ ಹೆಚ್ಚಿನ ಹೆಸರುಗಳಲ್ಲಿ’ಲ’ ಕಾರ ಜೋಡಣೆ ಆಗಿದೆ. ಉದಾಹರಣೆಗೆ ಕಾರ್ಲ,ಕುಡ್ಲ, ಬಂಟ್ಟಾಲ,ದರ್ಮತಲ(ಜೈನ ಧರ್ಮ ತಲವೂರಿದ ಸ್ಥಳ) ಮನಿಪಾಲ(ಮನ್ನ್ ಪಲ್ಲ),ಕಟೀಲ್,ಕೊಲ್ಲೂರು, ಕುದ್ರೋಲಿ, ಮೂಲ್ಕಿ, ಮಲ್ಪೆ,ಅಲೆವೂರು,ಜಾರ್ಲ, ಪರ್ಕಲ,ಬೊಲ್ವಾಯಿ
,ಬೋಲಾರ್,ಬೊಲ್ವಾರ್,ಬೋಲ್ತೇರ್,ಆಲದಂ
ತುಲುನಾಡಲ್ಲಿ ದೇವರಾಧನೆ ಆರಂಭ ಆದ ನಂತರ ರ ಚಿತ ತುಲು ಪಾಡ್ದನ, ಸಂದಿ,ಬೀರ,ಬೂತೊಗಳ ನುಡಿಕಟ್ಟು, ತುಲುವರ ಕಟ್ಟ್ ಕಟ್ಲೆಗಳಲ್ಲಿ ‘ಲ’ಕಾರದಲ್ಲಿದೆ.ತುಲುನಾಡಿನ
ಪ್ರಥಮ ಬೂತ ಲೆಕ್ಕೆಸಿರಿ ಇವನ ಹೆಸರೇ ‘ಲ’ ಕಾರದಿಂದ ಇದೆ ಎಂದ ಮೇಲೆ ‘ತುಲು’ಪದವೇ ಸರಿ ಎಂದು ದೈವಗಳು ಹೇಳುತ್ತವೆ.ಇದಲ್ಲದೆ ಕಲ್ಲುರ್ಟಿ,ಪಂಜುರ್ಲಿ, ಕಲ್ಕುಡ, ಬಲಾಂಡಿ,ಮಲೆರಾಯೆ,ಮೇಲಾಂಟ, ಸಾರಲ ಜುಮಾದಿ, ಮಾಯಾಂದಾಲ್,ಗುಲಿಗ,ಪಿಲ್ಚಂಡಿ…ಹೀ
ಮೇಲ್ಜಾತಿಯ ಜನರನ್ನು ಕೆಲವು ಪಂಗಡದವರು ದೊಕ್ಕುಲು,ಉಲ್ಲಯ,ಬೊಲಯ, ಮೇಲಂಟ..ಇತ್ಯಾದಿ ಹೆಸರುಗಳಲ್ಲಿ ‘ಲ’ ಅಕ್ಷರ ಬರುತ್ತದೆ. ಪೆಲಕಾಯಿ,ನಾನಿಲ್, ಕುಂಟಲ್,ತಾರೊಲು, ನೇರೊಲು,ಕೈರೊಲು,ಲತ್ತಂಡೆ,ಬಾಲೆ ,ಮನೊಲಿ,ಪಟ್ಲಕಾಯಿ, ಬಾಪೆಲು,ಲಟಪಟಕ್,ಲಡಾಯಿ,
ಲತ್ತ್,ಲಪ್ಪು,ಲವುಡಿ ಮಗೆ,ಲಾಂಟನ್,ಲಾಚರ್,ಲಾಟ್, ಲಾತ್,ಲಾಯಿಕ್,ಲುಂಬು,ಲೆಂಕಿರಿ,ಲಚ್
ವರ್ಷದಿಂದ ವರ್ಷಕ್ಕೆ ಪದಗಳಲ್ಲಿರುವ ‘ಲ’ಅಕ್ಷರಗಳು ಮಾಯವಾಗಿ ‘ಳ ‘ ಅಕ್ಷರಗಳು ಪ್ರತ್ಯಕ್ಷ ಆಗುತ್ತಲೇ ಇದೆ. ಮಹಾಲಕ್ಷ್ಮಿ ಕೂರುವ ತಾವರೆಯಂತಿರುವ ‘ಲು’ ಅಕ್ಷರಕ್ಕೆ ಹೆಚ್ಚಿನ ಮಹತ್ವ ಕೊಟ್ಟು, ಒತ್ತು ಕೊಟ್ಟು ತುಲುವರು ನಮ್ಮ ಭಾಷೆ “ತುಳು ಅಲ್ಲ ತುಲು “ ಎಂದು ಒಪ್ಪ ಬೇಕು. ತುಲು
ಭಾಷೆಗೆ ನಾವು ವಂಚಿಸ ಕೂಡದು.
” ಳ ” ಅಕ್ಷರದಿಂದ ಆರಂಭವಾಗುವ ಯಾವುದೇ ಪದಗಳು ತುಲು ಭಾಷೆಯಲ್ಲಿ ಇಲ್ಲ.ಹಾಗಿರುವಾಗ ‘ತುಳು’ ಪದವು ತಪ್ಪಲ್ಲವೇ? ‘ ತುಲು ‘ಎಂಬುದೇ ಸರಿ ಮತ್ತು ಸತ್ಯ. ತುಲು,ತುಲುವೆರ್,ತುಲುನಾಡ್ಎಂಬುದೇ ಸತ್ಯ,ಸತ್ಯ, ಸತ್ಯ.
✍ ಐ.ಜಿ.ಭಂಡಾರಿ ,ಕಾರ್ಕಳ, ನಿವೃತ್ತ ಬ್ಬಾಂಕ್ ಮ್ಯಾನೇಜರ್