November 23, 2024
WhatsApp Image 2022-01-04 at 08.56.03

ದ್ರಾವಿಡ ಭಾಷೆಗಳಲ್ಲಿ ತುಲು ಭಾಷೆಯೇ ಬಹು ಪ್ರಾಚೀನವಾದುದು.ತುಲು ಭಾಷೆಯಿಂದಲೇ ಇತರ ದ್ರಾವಿಡ ಭಾಷೆ ಗಳು ಹುಟ್ಟಿಕೊಂಡಿದೆ.ಹಿಂದೊಮ್ಮೆ ಅಂದಿನ ತುಲುನಾಡಲ್ಲಿಪ್ರಚಂಡ ಜಲ ಪ್ರಲಯ ಆಗಿತ್ತು.ತುಲುನಾಡು ಬದುಕಲು
ಯೋಗ್ಯವಾಗದೆ ಹೋಗುತ್ತದೆ.ಎಲ್ಲೆಡೆ ಕೊಳ(ಪಟ್ಲ)ಪ್ರದೇಶ ವಾಗುತ್ತದೆ.ಅಂದು ವಾಸ ಮಾಡುತ್ತಿದ್ದ ಆದಿ ದ್ರಾವಿಡ ನಿವಾಸಿಗಳು ತುಲುನಾಡು ತೊರೆದು ಕೇರಲ,ತಮಿಲ್ ನಾಡು,ಆಂಧ್ರ,ಸಿಂಹಲ,ತೆಲಂಗಾಣ,ಕಲಿಂಗ ರಾಜ್ಯಗಳಿಗೆ ವಲಸೆ ಹೋಗುವರು.

ಈಗಿನ ಕೇರಳ ಎಂಬ ಹೆಸರು ಆದಿ ಆರಂಭದಲ್ಲಿ ಇರಲಿಲ್ಲ.ಇದು ಇಲ್ಲಿಗೆ ಡಚ್ಚರು,ಪೋರ್ಚುಗೀಸರು,ಮತ್ತು ಬ್ರಿಟಿಷರು ಬಂದ ಬಳಿಕ ಈ ಹೆಸರು ಬಂದಿದೆ.ಇದರ ಹಿಂದೆ ಈಗಿನ ಕೇರಳ ರಾಜ್ಯವನ್ನು “ಮಲಬಾರ್”ದೇಶ ಪ್ರಾಂತ್ಯ ಎಂದು ಕರೆಯುತ್ತಿದ್ದರು.ಅಂದು ಜಲ ಪ್ರಲಯದಿಂದ ತುಲು ನಾಡ್ ತೊರೆದ ತುಲುವರು ಪಶ್ಚಿಮ ಘಟ್ಟದಿಂದ ಕೆಳಗಿಳಿದು ತಪ್ಪಲಿನಲ್ಲಿ ನೆಲೆ ಆಗುತ್ತಾರೆ.ಆ ಪ್ರದೇಶವನ್ನು “ಮಲೆತ್ತಬರೆ”(ಮಲೆಗಳ ಬುಡ)ಎಂದು ತುಲುವರು ಕರೆದಿದ್ದಾರೆ.

ಅದೇ ಮುಂದಕ್ಕೆ “ಮಲಬಾರ್”ಎಂದಾಯಿತು.  ಬರಹಗಾರರು “ಮಲ”ಪದವನ್ನು ಮಲಯ ಅಥವಾ ಮಲೆ ಎಂದು ಸರಿಯಾಗಿ ಅರ್ಥೈಸಿದ್ದಾರೆ.ಆದರೆ “ಬಾರ್” ಪದದ ಅರ್ಥವನ್ನು ಯಾರಿಂದಲೂ ಅರ್ಥೈಸಲು ಆಗಲಿಲ್ಲ.
“ಮಲೆ”ಪದದ ಅರ್ಥವು ತುಲು ಮತ್ತು ಮಲಿಯಾಲಿ ಭಾಷೆಯಲ್ಲಿ ಒಂದೇ ಆಗಿದೆ.”ಬರೆ” ಪದವು ತುಲು ಭಾಷೆಯದ್ದಾಗಿದ್ದರಿಂದ ಸರಿಯಾಗಿ “ಮಲಬಾರ್” ಪದದ ಪೂರ್ತಿ ಅರ್ಥ ಕೊಡಲು ಆಗಿರಲಿಲ್ಲ.ಮಲಬಾರ್ ಎಂಬ ಹೆಸರು ಪಕ್ಕಾತುಲು ಭಾಷೆ ಆಗಿದ್ದರೂ ತುಲು ಭಾಷೆಗೆ ಬೆಲೆ ಸಿಗಲೇ ಇಲ್ಲ.

ಮಲಬಾರ್ ಪಶ್ಚಿಮ ಘಟ್ಟದ ಸಾಲು

ತುಲುವರೇ ಹೆಸರನ್ನು ಇಟ್ಟ ಮಲಬಾರ್ ಜಿಲ್ಲೆಯನ್ನು 1957ರಲ್ಲಿ ವಿಭಜನೆ ಮಾಡಿ ಪಲಕ್ಕಾಡ್ (ಪೆಲಕ್ಕಾಯಿ – ಹಲಸು ಮರಗಳ ಕಾಡು),ಮಲಪ್ಪುರಂ(ಮಲೆಗಳ ಸಮೂಹ),ಕೋಝಿಕೋಡ್(ಕೋಳಿಕಾಡ್-ಕೋರಿಕೊಟ್ಟುಗಿಡಗಳು ಬೆಳೆದಿದ್ದ ಪ್ರದೇಶ),ವಾಯನಾಡ್(ವಾಯಿನಾಡ್-ಗಾಳಿ ಬೀಸುವ ಎತ್ತರದ ಗುಡ್ಡಗಳ ವಿಸ್ತಾರವಾದ ಪ್ರದೇಶ),ಕನ್ನೂರು (ತುಲುವ ವಿವಿಧ ಕೇನೆ[yam]ಬೆಳೆದ ಪ್ರದೇಶ), ಕಾಸರಗೋಡು(ಕಾಯೆರ್ ಕಾಡ್-ಕಾಸರ ಮರಗಳ ಕಾಡು)ಎಂಬ ಜಿಲ್ಲೆಗಳಾಗಿ ವಿಂಗಡಿಸುವರು.ಮಲಬಾರ್ ಎಂಬ ಪ್ರದೇಶದಲ್ಲಿ ಮೂಲ ತುಲುವರೇ ಇದ್ದರು ಎಂದು ಈ ಹೆಸರುಗಳಲ್ಲಿ ತಿಳಿಯುತ್ತದೆ.

     ಮಲಬಾರ್ ಜಿಲ್ಲೆಯನ್ನು ಮಲಯಾಲಂ ಜಿಲ್ಲೆ ಎಂತಲೂ ಅಂದು ಕರೆಯುತ್ತಿದ್ದರು.ಮಲೆ ಅಥವಾ ಮಲಯ ಮತ್ತುಅಲೆ ಎಂಬ ಎರಡು ಪದಗಳಿಂದ ಮಲಯಾಲಂ ಪದ ಹುಟ್ಟಿದೆ.ಮಲೆಯಲ್ಲಿ ಅಲೆಯುವವರು/ ಅಲೆಯುವವನು (ಅಲನ್ನು ತಿರುಯುನ್ನು/ಅಲನ್ನುತಿರುಯುನ್ನವನ್)ಎಂಬ ಅರ್ಥದಲ್ಲಿದೆ.ಮಲಯಾಲಂ(ಮಲಯಾಳಂ ತಪ್ಪು) ಎಂಬ ಪದವೂ ತುಲು ಭಾಷೆ ಆಗಿದೆ.ಮಲೆಟ್ಟ್ ಅಲೆಪುನು.ಅಂದ ರೆ ಮಲೆಗಳಲ್ಲಿ ಸುತ್ತುವವರು.

    ಮಲಯಾಲಂ ಜನರು ಊರು ಸುತ್ತುವವರು ಎಂಬ ಮಾತಿದೆ.ಇದರಲ್ಲಿ ತುಲುವರೂ ಸೇರಿದ್ದಾರೆ.ತುಲುವರೇ ತುಲು ಲಿಪಿಯನ್ನು ಕೇರಲದಲ್ಲಿ ಹುಟ್ಟು ಹಾಕಿರುವರು.
ತುಲು ಲಿಪಿಯೇ ಮಲಯಾಲಂ ಭಾಷೆ ಆಗುತ್ತದೆ.ಹೆಚ್ಚಿನ ತುಲುವರು ಮಲಯಾಲಂ ಭಾಷೆಯನ್ನು ಕಲಿತು ಅಲ್ಲೇ ಇದ್ದು ಮಲಿಯಾಲಿಗಳಾಗುತ್ತಾರೆ.ನಂತರದ ಕಾಲದಲ್ಲಿಕೆಲವು ತುಲುವರು ತಮ್ಮ ಪೂರ್ವಜರ ತುಲುಕಾಡಿಗೆ ಬಂದು ಕುಡು ಅರಿ ಎಸೆದು ತುಲುನಾಡು ಸೃಷ್ಟಿ ಮಾಡುವ ರು.ತುಲು ಭಾಷೆ ಮಾತಾಡಿ ಭಾಷೆಯನ್ನು ಉಳಿಸುವರು.
ತುಲುವರು ಅಲೆಯುವವರೇ ಆಗಿದ್ದರಿಂದ ಕೇರಳದಲ್ಲಿಮಲಿಯಾಲಿಗಳಾಗುತ್ತಾರೆ.ನಂತರದ ಕಾಲದಲ್ಲಿ ತುಲುವರು ಬೊಂಬಾಯಿಗೆ ಹೋಗಿ ಮರಾಠಿಗಳಾಗುತ್ತಾ ಇದ್ದಾರೆ.

   ತುಲುವರು ಊರುಗಳಿಗೆ ಹೆಸರನ್ನು ಇಡುವಾಗ ಅಲ್ಲಿನ ಹಿನ್ನಲೆ,ಅಲ್ಲಿನ ಪ್ರಾಕೃತಿಕ ಲಕ್ಷಣಗಳನ್ನು ನೋಡಿ ಹೆಸರನ್ನಿಟ್ಟುಕರೆಯುತ್ತಿದ್ದರು.ತುಲುನಾಡಿನ ಎಲ್ಲಾ ಹೆಸರುಗಳು ಅದರಂತೆ ಇದ್ದವು.ಈಗೀಗ ಬೇರೆ ಭಾಷೆಗಳ ಪ್ರಭಾವದಿಂದ
ಮತ್ತು ತುಲು ಭಾಷೆಯನ್ನು ಅರ್ಥೈಸಲು ಆಗದೆ ಹೊಸ ಹೆಸರುಗಳಿಂದ ಕರೆಯುತ್ತಾರೆ.ತುಲುವರು ಅಂದು ಕೇರಳದಲ್ಲಿ ಅಲ್ಲಿನ ಪ್ರಾಕೃತಿಕ ಲಕ್ಷಣಕ್ಕನುಸಾರವಾಗಿ ಊರುಗಳಿಗೆ ಹೆಸರನ್ನು ಇಟ್ಟಿರುತ್ತಾರೆ.

         ಕನ್ಯಾ ಕುಮಾರಿ ಪಶ್ಚಿಮ ಘಟ್ಟದ ಸಾಲು

ಅಂದಿನ ತುಲುನಾಡು ತೊರೆದ ತುಲುವ ಆದಿ ದ್ರಾವಿಡ ನಿವಾಸಿಗಳು ಗುಂಪು ಗುಂಪಾಗಿ ಬಂದು ಕೆಲವು ಗುಂಪುಗಳು ಮಲಬಾರ್ ಪ್ರಾಂತ್ಯದಲ್ಲಿ ನೆಲೆಸಿದರೆ ಇನ್ನುಕೆಲವು ಗುಂಪುಗಳು ಗಟ್ಟದ ಮೇಲಿಂದ ಸಾಗುತ್ತಾ ಈಗಿನ ತಮಿಲುನಾಡು ಪ್ರವೇಶ ಮಾಡುವರು.ದಟ್ಟ ಕಾಡುಗಳಲ್ಲಿ ಸಂಚರಿಸುತ್ತಿದ್ದ ತುಲುವ ಆದಿನಿವಾಸಿಗಳಿಗೆ ಒಮ್ಮೆಲೇ ಕುಮೇರ್ (ಮರ ಮಟ್ಟುಗಳಿಲ್ಲದ,ಹುಲ್ಲುಗಾವಲು)ಪ್ರದೇಶ ಗಳು ಸಿಗುತ್ತದೆ.ಯಾವುದೇ ಕೃಷಿ ವ್ಯವಸಾಯ ಮಾಡಿರದ ಜನ ವಸತಿ ಇಲ್ಲದ ವಿಸ್ತಾರವಾದ ಇಳಿಜಾರು ಪ್ರದೇಶ ಅದು.ಅಲ್ಲೇ ಅವರು ತಂಗುವರು.”ಕುಮೇರ್’ ಜಾಗ ಎಂದು ಜನರು ಕರೆದರು.ಆವರೆಗೂ ಯಾರೂ ಮುಟ್ಟಿರದ ಪ್ರದೇಶ ಅದಾಗಿತ್ತು.ಕ್ರಮೇಣ ಆ ಪ್ರದೇಶವನ್ನು “ಕನ್ಯಾ ಕುಮೇರ್” ಎಂದು ಕರೆಯುತ್ತಾರೆ.”ಕನ್ಯಾ”ಎಂದರೆ ಕೈ ಸೋಕದ ಸಮೃದ್ಧ ಪರಿಶುದ್ಧವಾದ ಪ್ರದೇಶ ಆಗಿದೆ.ಅಂದರೆ ಈ ತುಲುವರೇ ಈ ಸ್ಥಳದಲ್ಲಿ ಪ್ರಪ್ರಥಮವಾಗಿ ನೆಲೆಯಾಗಿ ಕೃಷಿ ಚಟುವಟಿಕೆ ಆರಂಭಿಸುವರು.ತುಲು ತಿಂಗಳುಗಳ ಹೆಸರುಗಳಲ್ಲಿ “ಕನ್ನಿಯೆ”(ಕನ್ಯಾ)ಎಂಬ ತಿಂಗಳು ಇದೆ.

ಆ ತಿಂಗಳಿನವರೆಗೆ ಕೈ ಸೋಕದೆ ಬೆಳೆದು ನಿಂತ ಪೈರು ತುಲುನಾಡಿನಾದ್ಯಂತ ಎಲ್ಲಾ ಗದ್ದೆಗಳಲ್ಲಿ ಕಟಾವು ಮಾಡಲು ಸಿದ್ಧವಾಗುವುದು.ಅದೇ ತಿಂಗಳಲ್ಲಿ ಕಟಾವು ಆ ಗಿ ನಾಟಿ ಆರಂಭವಾಗುವುದು.ಇಳಿಜಾರು ಕುಮೇರ್ ಪ್ರದೇಶದಲ್ಲಿ ತುಲುವರು ನೆಲೆಯಾಗಿ ಕ್ರಮೇಣ ಆ ಪ್ರದೇಶದ ಜನರೊಡನೆ ಬೆರೆಸುವರು.ತಮ್ಮ ಸಂಸ್ಕೃತಿಯನ್ನು ಅಲ್ಲಿ ಬಿತ್ತರಿಸುವರು.”ಕನ್ಯಾ ಕುಮೇರ್” ಕ್ರಮೇಣವಾಗಿ “ಕನ್ಯಾ ಕುಮಾರಿ” ಎಂದಾಯಿತು.

ಹಿಂದೂ ಮಹಾಸಾಗರ,ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರಗಳ ಕನ್ಯಾ ಕುಮಾರಿ ಸಂಗಮದಲ್ಲಿ ಅಲೆಗಳ ಅಬ್ಬರಕ್ಕೆ ಮೇಲೆ ಸುರಿಯುವ (ತಮೆಲ್)ನೀರು.

ಊರೂರು ಅಲೆಯುವವರೇ ಆಗಿರುವ ತುಲುವ ಆ ದಿ ದ್ರಾವಿಡ ವಾಸಿಗಳ ಕೆಲವು ಗುಂಪುಗಳು ಈಗ ಕರೆಯುವ ಕೇಪ್ ಕೊಮೊರಿನ್ ಸ್ಥಳಕ್ಕೆ ಬರುವರು.ಸೂರ್ಯ ಉದಯದ ಮತ್ತು ಹಸ್ತದ ದೃಶ್ಯ ಕಾಣುವರು.ಹಿಂದೂ ಮಹಾಸಾಗರ ಬಂಗಾಳ ಕೊಲ್ಲಿ,ಅರಬ್ಬಿ ಸಮುದ್ರ ಸೇರುವ ಸಂಗಮ ಸ್ಥಳ ಇದಾಗಿದುದರಿಂದ ಎಲ್ಲಡೆ ಕಡಲು ಈ ತುಲುವ ಆದಿ ದ್ರಾವಿಡ ವಾಸಿಗಳಿಗೆ ಕಾಣುತ್ತದೆ.ಕಡಲೆಂದರೆ ಭಯ ಪಡು ತಿದ್ದ ಈ ತುಲುವರಿಗೆ ತುಲುನಾಡಿನ ಅಂದಿನ ಜಲಪ್ರಲಯದ ನೆನಪು ಬರುತ್ತದೆ.ಇಲ್ಲಿನ ತೆರೆಗಳ ಅಬ್ಬರ ಎಂತಹವರನ್ನೂ ಭಯ ಹುಟ್ಟಿಸುವಂತೆ ಇತ್ತು.ತುಲುವರ ಕೆಲವು ಗುಂಪುಗಳು ಈಗ ಕರೆಯುವ ನಾಗರಕೊಯಿಲ್ ಪ್ರದೇಶದಲ್ಲಿನೆಲೆಯಾದರೆ ಇನ್ನು ಹಲವಾರು ಗುಂಪುಗಳು ತಮಗೆ ಬೇಕಾದ ನೆಲೆಯನ್ನು ಹುಡುಕುತ್ತಾ ಕಡಲಿನ ತೀರದಲ್ಲಿಅಲೆಯುತ್ತಾ ದುಡಿಯುತ್ತಾ ಈಗಿನ ತುಟಿಕೊರಿನ್ ದಾಟುವರು.ಈಗಿನ ರಾಮೇಶ್ವರಂ ಪ್ರದೇಶಕ್ಕೆ ತಲುಪುವರು.ಇಲ್ಲೇ ತುಲುವರು ಕಡಲಿನ ನೀರು ಅಲೆಗಳ ಮೂಲಕ ಭೂಮಿಗೆ ಸುರಿಯುವ ಕ್ರಿಯೆಯನ್ನು ಕಂಡು “ತಮೆಲ್”,”ತಮೆಲ್ಪು” ಎಂದಿದ್ದಾರೆ.ಈ ಪ್ರದೇಶವನ್ನು “ತಮೆಲೂರು”ಎಂದಿದ್ದಾರೆ.

ರಾಮೇಶ್ವರಂ ಇಲ್ಲಿನ ಆರ್ಭಟದ ಅತಿ ಎತ್ತರದಿಂದ ಬರುವ ಅಲೆಗಳು ಮತ್ತು ಅದು ತಂದು ಸುರಿಯುವ ನೀರಿನ ರಭಸ (ತಮೆಲುನು).

“ತಮೆಲ್”ಎಂದರೆ ತುಂಬಿ ಹರಿಯುವುದು,ಮಿತಿ ಮೀರಿ ಏರುವುದು,ಉಕ್ಕಿ ಹರಿಯುವುದು(Overflowing). “ತಮೆಲ್ಪು”ಎಂದರೆ ಕಡಲಿನ ನೀರನ್ನು ಹೊತ್ತು ತಂದು ಭೂಮಿಗೆ ಸುರಿಯುವುದು.ತುಲು ಭಾಷೆಯ “ತಮೆಲ್” ಪದದಿಂದಲೇ “ತಮೆಲೂರು” ಕೊನೆಗೆ “ತಮೆಲ್ ನಾಡು” ಎಂಬ ಹೆಸರು ಬಂದಿದೆ.ಇಲ್ಲಿ ಆಡುವ ಭಾಷೆ “ತಮಿಲ್” ಎಂದಾಯಿತು.ತಮೆಲ್ ಭಾಷೆಯ ಮೂಲ “ತುಲು”ಎಂದು
ಕೆಲವು ತಮಿಲ್ ಭಾಷೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತುಲುವರು ಒಂದು ಊರಿನ ಹಿನ್ನಲೆ,ಪ್ರಾಕೃತಿಕ ಲಕ್ಷಣಗಳನ್ನು ಕಂಡೇ ಊರುಗಳಿಗೆ ಹೆಸರನ್ನು ಇಟ್ಟಿದ್ದಾರೆ.ಅದರಂತೆ ತಮಿಲುನಾಡಿನ ವಿಸ್ತಾರವಾದ ಕಡಲ ಕಿನಾರೆ ,ಅಲೆಗಳಅಬ್ಬರ,ಇಲ್ಲಿನ ಸುಂಟರಗಾಳಿಯ ಮಳೆ ನೀರಿನ ದೃಶ್ಯಗಳನ್ನು ಕಣ್ಣಾರೆ ಕಂಡು “ತಮೆಲೂರು”ಎಂದಿದ್ದಾರೆ.ಇಲ್ಲಿನ ಭಾಷೆಯನ್ನು “ತಮೆಲ್”ಎಂದು ತುಲು ಭಾಷೆಯಿಂದ ಕರೆದಿದ್ದಾರೆ.ಕ್ರಮೇಣವಾಗಿ ತಮೆಲೂರು ಎಂಬ ಹೆಸರೇ ತಮೆಲ್ ನಾಡು,ತಮಿಲ್ ನಾಡು ಎಂದಾಗಿದೆ.ತಮಿಲ್ ನಾಡಿನ ಭಾಷೆಯೇ ತಮಿಲ್(ತಮಿಳು ತಪ್ಪು)ಎಂದಾಯಿತು.

   ಆ ಕಾಲದಲ್ಲಿ ಪಾಲ್ಕ್ ಜಲಸಂಧಿ ಮತ್ತು ಗಲ್ಫ್ ಆಫ್ ಮನ್ನಾರ್ ಮಧ್ಯೆ ಈಗಿನ ಭಾರತದ ರಾಮೇಶ್ವರಂ ದ್ವೀಪದಿಂದ ಶ್ರೀಲಂಕಾದ ಮನ್ನಾರ್ ದ್ವೀಪದವರೆಗೂ ಕಿರಿದಾದ ದ್ವೀಪ ಇತ್ತು.ಅದು ಪ್ರಕೃತಿ ನಿರ್ಮಿತವಾಗಿತ್ತು. ಅದು ಅಂಡಮಾನ್ ನಿಕೋಬಾರ್,ಲಕ್ಷದ್ವೀಪಗಳಂತೆ ಅಸ್ತಿತ್ವದಲ್ಲಿತ್ತು.ಅಂದಿನ ಆ ದ್ವೀಪವು ಮಾನವ ನಿರ್ಮಿತವಲ್ಲ.ಇಂದಿನ ತಮಿಲುನಾಡಿಗೂ ಶ್ರೀ ಲಂಕಕ್ಕೂ ನೇರವಾದ ಸಂಪರ್ಕ ಇತ್ತು.ಆ ಕಿರಿದಾದ ಉದ್ದವಾದ ದ್ವೀಪದಲ್ಲಿ ಜನ ವಸತಿ ಇತ್ತು.ಕ್ರಮೇಣ ಕಾಲದಿಂದ ಕಾಲಕ್ಕೆ ಪ್ರಚಂಡ ಅಲೆಗಳ ಹೊಡೆತಕ್ಕೆಅಲೆಗಳ ಹೊಡೆತಕ್ಕೆ ಆ ದ್ವೀಪವು ಕಡಲಿಗೆ ವಿಲೀನಗೊಂಡಿದೆ. ಈ ಪ್ರಕ್ರಿಯೆ ಸಮುದ್ರದಲ್ಲಿ ಹಿಂದೆಲ್ಲಾ ನಡೆದಿದೆ.ಮುಂದಕ್ಕೂ ನಡೆಯುತ್ತಾ ಇರುತ್ತದೆ.

ಒಂದು ಕಾಲದಲ್ಲಿ ತಮಿಲುನಾಡಿನಿಂದ ಶ್ರೀ ಲಂಕಾದವರೆಗೆ ಇದ್ದ ಕುದುರು(ದ್ವೀಪ)ಬಲವಾದ ಅಲೆಗಳು ಬಡಿದು ಬಡಿದು ಸಮುದ್ರಕ್ಕೆ ವಿಲೀನವಾಗಿದೆ.

   ತುಲುನಾಡು ತೊರೆದ ತುಲುವ ಆದಿ ದ್ರಾವಿಡ ಜನರ ಕೆಲವು ಗುಂಪುಗಳು  ಅಲೆಯುತ್ತಾ ತಮಗೆ ಇಷ್ಟವಾದ ಊರುಗಳಲ್ಲಿ ನೆಲೆ ಆಗುವರು.ಇನ್ನು ಕೆಲವು ಗುಂಪುಗಳು ತಮಗೆ ಬೇಕಾದ ಊರುಗಳನ್ನು ಹುಡುಕುತ್ತಾ ಅಲೆಯುವ ರು.ಅದರಂತೆಯೇ ಕೆಲವರು ತಮಿಲುನಾಡು ಮತ್ತು ಶ್ರೀ ಲಂಕಾ ಜೋಡಿಸುವ ಕುದುರು(ದ್ವೀಪ)ವಿನಲ್ಲಿ ಅಲೆಯುವರು.ಕುದುರುವಿನ ಇಕ್ಕಡೆಗಳಲ್ಲೂ ಕಡಲಿನ ಎತ್ತರದ ಅಲೆ ಗಳನ್ನು ಕಾಣುವರು.ಅಲೆಗಳು ಕಡಲಿನ ನೀರನ್ನು ಕುದುರುವಿನ ಮೇಲೆ ಸುರಿಯುವ ದೃಶ್ಯ ಕಾಣುವರು.ನೀರು “ಸಮೆಲುನು”(ಸುರಿಯುವುದು)ಎಂದಿದ್ದಾರೆ.ಇಂದಿನ ಶ್ರೀ ಲಂಕಾಸುತ್ತಿದ್ದಾರೆ.ಕಡಲಿನ ಮಧ್ಯೆ ಇರುವ ಕುದುರು(ದ್ವೀಪ)ವಿನಂತೆ ಕಂಡಿದೆ ಈ ದೇಶ.ದೇಶದ ಸುತ್ತಲೂ ಆವರಿಸಿದ್ದ ಕಡಲನ್ನು ಕಂಡಿದ್ದಾರೆ.ಕಡಲಿನ ನೀರನ್ನು ಬೃಹತ್ ಅಲೆಗಳು ಭೂಮಿ ಮೇಲೆ ಸುರಿಯುವ ಕ್ರಿಯೆಯನ್ನು ಇಲ್ಲೂ “ಸಮೆಲ್” (ತಮೆಲ್,ಸಮೆಲ್ ಎಂದರೆ ಸುರಿಯುವುದು)ಎಂದಿದ್ದಾರೆ.

    ತುಲುವರು ಊರುಗಳನ್ನು ಅಲ್ಲಿನ ಪ್ರಾಕೃತಿಕ ಲಕ್ಷಣಗಳ ಹಿನ್ನಲೆಯಲ್ಲಿ ಹೆಸರಿಟ್ಟು ಕರೆಯುತ್ತಿದ್ದರು.ಅದರಂತೆ ಈ ಊರನ್ನು “ಸಮೆಲ್” ಎಂದಿದ್ದಾರೆ.ಕ್ರಮೇಣವಾಗಿ ಅದು ಸಿಮೆಲ್,ಸಿಮಲ,ಸಿಮ್ಮಲ,ಸಿಂಹಲ(ಸಿಂಹಳ)ಎಂದಾಗಿದೆ.
ಸಿಂಹಳಕ್ಕೆ ಬಂದ ತುಲುವರು ನಂತರದ ಕಾಲದಲ್ಲಿ ತಮಿಲರಾಗಿ ಬೌದ್ಧ ಧರ್ಮ ಸೇರುವರು.ಶಾಶ್ವತವಾಗಿ ಇಲ್ಲೇ ನೆಲೆ ಆಗುವರು.ಪ್ರಚಂಡ ಪ್ರಲಯದ ಫಲವಾಗಿ ತುಲುನಾಡು ತೊರೆದ ತುಲುವರು ಇಂದಿನ ಕೇರಳ,ತಮಿಳುನಾಡು, ಆಂಧ್ರ,ತೆಲಂಗಾಣ,ಒಡಿಶಾ,ಶ್ರೀ ಲಂಕಾ ಪ್ರದೇಶಗಳಲ್ಲಿನೆಲೆ ಆಗುವರು.ನಂತರದ ಕಾಲದಲ್ಲಿ ಬೌದ್ಧ ಧರ್ಮದ ಅನುಯಾಯಿಗಳಾಗಿ ಇರುತ್ತಾರೆ.

ಯುರೋಪ್ ದೇಶಗಳು ಈಗಿನ ಶ್ರೀ ಲಂಕಾ ದೇಶ ವನ್ನು “ಸೀ (SEA)ಲೋನ್(LONE)”ಎಂದಿದ್ದಾರೆ.ಅಂದರೆ ಕಡಲಿನ ಒಳಗೆ ಅಡಗಿರುವ ಒಂಟಿ ದೇಶ ಎಂದಿದ್ದಾರೆ.ಕ್ರಮೇಣ “ಸಿಲೋನ್(CEYLON)ಎಂದು ಕರೆಯುವಂತಾಯಿತು.

          ನಂತರದ ಕಾಲದಲ್ಲಿ ಈಗಿನ ದಕ್ಷಿಣ ಭಾರತದಲ್ಲಿ ಅಸ್ಪೃಶ್ಯತೆ ಎಂಬ ಭೂತವು ತಾಂಡವ ಆಡುವುದು.ಪರಿಣಾಮವಾಗಿ ಮಲಬಾರ್ ಪ್ರಾಂತ್ಯದಲ್ಲಿ ನೆಲೆಸಿದ್ದ ಅನೇಕ ಆದಿ ದ್ರಾವಿಡ ತುಲುವರು ತಮ್ಮ ಪೂರ್ವಜರ ನೆಲವನ್ನು ಹುಡುಕುತ್ತಾ ತುಲುಕಾಡು ಪ್ರವೇಶಿಸುವರು.ಕುಡು ಅರಿ ಎಸೆದು ತುಲುನಾಡು ಸೃಷ್ಟಿ ಮಾಡುವರು.ನಾಗರಾಧನೆ,ಬೂತರಾಧನೆಯನ್ನು ಸ್ಥಾಪನೆ ಮಾಡುವರು.ತುಲುವರ ಈ ಆರಾಧನೆಯನ್ನು ಕೇರಲ,ತಮಿಲುನಾಡು,ಸಿಮ್ಮಲದಲ್ಲೂ ನೆಲೆಯಾಗಿದ್ದ ತುಲುವರು ದೈವಗಳನ್ನು ಆರಾಧಿಸುವರು.ಅದರಲ್ಲೂಶ್ರೀ ಲಂಕಾದಲ್ಲಿ ಆರಾಧಿಸುವ ಹೆಚ್ಚಿನ ಬೂತಗಳು ತುಲು ನಾಡಲ್ಲಿ ಆರಾಧಿಸುವ ಬೂತಗಳ ರೂಪದಲ್ಲಿ ಕಂಡುಬರುತ್ತದೆ.ಹುಲಿ(ಪಿಲ್ಚಂಡಿ),ಕೋಣ(ಮೈ ಸೈಂದಾಯ)ಹಂದಿ,(ಪಂಜುರ್ಲಿ)ಇತ್ಯಾದಿ ರೂಪದಲ್ಲಿದೆ.ಅಂದಿನ ಕಾಲದಲ್ಲಿ ತುಲುನಾಡಲ್ಲಿ ಜೀವನ ಸಾಗಿಸಲು ಕಷ್ಟವಾದಾಗ ಕೆಲವು ಮಂದಿ ಈಗಿನ ಶ್ರೀ ಲಂಕಾಕ್ಕೆ ಬಂದು ನೆಲೆಸಿದ್ದಾರೆ.ತುಲು ನಾಡಿಂದ ತಮ್ಮ ಬೂತಗಳನ್ನು ಒಯ್ದು ಅಲ್ಲಿ ನಂಬಿದ್ದಾರೆ.
ಅದರಂತೆ ತುಲುವರು ತುಲುನಾಡಿಗೆ ತಾಗಿರುವ ಗಟ್ಟದ (ಶಿವಮೊಗ್ಗ,ಚಿಕ್ಕಮಗಳೂರು,ಕೊಡಗು)ಊರುಗಳಿಗೆ ಕೆಲಸ ಹುಡುಕಿಕೊಂಡು ಹೋಗಿ ಅಲ್ಲಿ ನೆಲೆಸಿದ್ದರು.ಆಗ ತಮ್ಮ ಬೂತಗಳನ್ನೂ ಅಲ್ಲಿಗೆ ಹೊಯ್ದಿದ್ದಾರೆ.ಕ್ರಮೇಣ ಆ ಬೂತಗಳನ್ನು “ಗಟ್ಟದ ಬೂತ”ಎಂದು ತುಲುವರು ಕರೆಯುತ್ತಾರೆ.ತುಲುವರು ಹೋದೆಡೆ ತಮ್ಮ ಬೂತಗಳನ್ನುಒಯ್ಯುವುದು ಆದಿಯಿಂದಲೇ ಬಂದಿದೆ.ಈಗ ಮುಂಬೈ, ಬೆಂಗಳೂರು ನಗರಗಳಲ್ಲಿ ಬೂತಗಳನ್ನು ನಂಬಿರುವುದು ಕಂಡುಬರುತ್ತದೆ.ತುಲುನಾಡಿಂದಲೇ ಇತರ ಊರುಗಳಿಗೆ ತುಲುನಾಡ್ ಬೂತಗಳನ್ನು ತುಲುವರೇ ಒಯ್ದಿರುವರೇ ಹೊರತು ಬೇರೆ ಯಾವುದೇ ಬೂತಗಳು ತುಲುನಾಡಿಗೆ ಬಂದಿಲ್ಲ.ಅಲ್ಲದೆ ನಾಗರಾಧನೆಯೂ ಪ್ರಪ್ರಥಮವಾಗಿ ತುಲು ನಾಡಲ್ಲೇ ಆರಂಭವಾಗಿ ನಂತರ ಇತರ ಪ್ರದೇಶಗಳಲ್ಲಿ ಆರಂಭಗೊಂಡಿದೆ.

ತುಲುನಾಡಿನ ಲೆಕ್ಕೆಸಿರಿ ದೈವ(ಬೂತ).ಇವನು ಸಣಕಲು ಶರೀರದವನು. ಎತ್ತರದ ಮನುಷ್ಯ. ಇವನು ಎತ್ತರದವನು ಎಂದು ತೋರಿಸಲು ಬೂತ ಕೋಲದಲ್ಲಿ ನರ್ತಕರು ತಲೆಯ ಮೇಲೆ ಎತ್ತರದ ಹಾಳೆಯ ಸಲಕರಣೆಯನ್ನು ಧರಿಸುವರು. ಇದನ್ನು “ಅಂತರ್ಮುಡಿ”ಇಲ್ಲವೇ “ಮುಡಿ ಏರಾವುನು”ಎನ್ನುವರು. ಮತ್ತು ಇವನು ತುಲುನಾಡಲ್ಲಿ ನಾಗರಾಧನೆಯ ಸ್ಥಾಪಕ ಎಂಬುದನ್ನು ಈ “ಮುಡಿ”ಯಲ್ಲಿ ತೋರಿಸುವರು.

ತುಲುನಾಡಿನ ಪ್ರಪ್ರಥಮ ದೈವ(ಬೂತ)ವಾದ “ಲೆಕ್ಕೆಸಿರಿ”ಯನ್ನು ತುಲುನಾಡಿಂದ ಶ್ರೀಲಂಕಾದಲ್ಲಿ ನೆಲೆಸಿರುವ ತುಲುವರು ಒಯ್ದಿರುವರು.ತುಲುನಾಡಿನ ಸರ್ವ ಬೆಳವಣಿಗೆಗೆ ,ಸರ್ವ ಸಮೃದ್ಧಿಗೆ ಲೆಕ್ಕಾಚಾದಲ್ಲಿ ಶ್ರಮಪಟ್ಟಿರುವ ಒರ್ವ ಮಹಾನುಭಾವನನ್ನು ನಂತರದ ಪೀಳಿಗೆಯ ಜನರು ಅವನನ್ನು “ಲೆಕ್ಕೆಸಿರಿ”ಎಂಬ ಹೆಸರಲ್ಲಿ ಕಲ್ಲು ಹಾಕಿ ನಂಬಿದ್ದರು.ಇವನೇ ತುಲುನಾಡಲ್ಲಿ ನಾಗರಾಧನೆಯ ಸಂಸ್ಥಾಪಕ. ಅವನು “ಲೆಂಕಿರಿ”(ಸೀಮೆ ಕೋಲು.ಮುಳ್ಳು ಇಲ್ಲದ ಹಸುರು ಬಿದಿರು)ಯಂತೆ ಉದ್ದವಾಗಿ|ಎತ್ತರವಾಗಿ ಸಣ್ಣಗೆ ಸಪೂರವಾಗಿದ್ದ.ಬೂತ ಕೋಲ(ವೇಷ)ದಲ್ಲಿ ವೇಷಧಾರಿಗಳು ಎತ್ತರವಾದ ಕಾಣಲು “ಮುಡಿ” ಏರಿಸುವ ಒಂದು ಉದ್ದವಾದ ಹಾಳೆಯ ಸಲಕರಣೆಯನ್ನು ಧರಿಸುತ್ತಾರೆ.ಅದರಲ್ಲಿನಾಗರಹಾವಿನ ಚಿತ್ರಗಳನ್ನು ಬಿಂಬಿಸುವರು.ಇವನೇ ನಾಗ ರಾಧನೆಯ ಸೂತ್ರಧಾರಿ ಎಂದು ನಾಗನ ಚಿತ್ರಗಳನ್ನು ಈ “ಮುಡಿ”ಯಲ್ಲಿ ಚಿತ್ರಿಸುವರು.ಶ್ರೀಲಂಕಾದ ಬೂತವಾದ “ಯಕ್ಕ” ಇದರ “ಮುಡಿ” ಕವಚದಲ್ಲೂ ಹಾವುಗಳ ಬಿಂಬಗಳು ಇದೆ.”ಯಕ್ಕ” ಬೂತವು ತುಲುನಾಡಿನ “ಲೆಕ್ಕೆಸಿರಿ” ಬೂತವೇ ಆಗಿರಬಹುದು.

ಶ್ರೀ ಲಂಕಾದಲ್ಲಿ ಆರಾಧಿಸುವ “ಯಕ್ಕಾ” ಎಂಬ ಬೂತ(ದೈವ)ದ ಮತ್ತು ಮುಖವಾಡದ ಚಿತ್ರಣ. ಇದು
ತುಲುನಾಡಿನ “ಲೆಕ್ಕೆಸಿರಿ”ಬೂತದ ರೀತಿಯಲ್ಲಿ ಕಾಣುತ್ತದೆ.

ಈಗಿನ ಶ್ರೀ ಲಂಕಾದ ಎಲ್ಲೆಡೆ ಅಂದು ತುಲುವರು ಉದ್ದ ವಾಗಿ ಬೆಳೆದು ನಿಂತ “ಲೆಂಕಿರಿ”(ಸೀಮೆ ಕೋಲು)ಬಿದಿರು ಪೊದೆಗಳನ್ನು ಕಂಡಿದ್ದಾರೆ.ಶ್ರೀ ಲಂಕಾದಲ್ಲಿ ಈಗಲೂ ಈ ಮರಗಳು ಯಥೇಚ್ಛವಾಗಿ ಬೆಳೆದು ನಿಂತಿದೆ.ಇದರ ಉತ್ಪನ್ನಗಳಿಂದ ತುಂಬಾ ಜನರು ಉದ್ಯೋಗ ಮಾಡುತ್ತಿದ್ದಾರೆ.“ಲಂಕಾ”ಎಂಬ ಪದಕ್ಕೆ ಎಲ್ಲೂ  ಸರಿಯಾದ ಅರ್ಥ ಇಲ್ಲ.

ಶ್ರೀ ಲಂಕಾದಲ್ಲಿ ಸಮೃದ್ಧಿ ಆಗಿ ಬೆಳೆಯುವ ಲೆಂಕಿರಿ(ಸೀಮೆ ಕೋಲು-ಮುಳ್ಳುಗಳು ಇಲ್ಲದ ಬಿದಿರು)

ಸರಳವಾಗಿ “ಲಂಕಾ”ಎಂದರೆ “ದ್ವೀಪ”(Island)ಎಂದಿದ್ದಾರೆ. ಅಂದಿನ ಸಿಲೋನ್ ಸಿಮ್ಮಲ(ಸಿಂಹಳ)ದ ಸುತ್ತೆಲ್ಲಾ ತುಲುವರು “ಲೆಂಕಿರಿ” ಬಿದಿರುಗಳನ್ನು ಕಂಡು ಆ ಊರಿಗೆ “ಲೆಂಕ ಸಿರಿ”ಎಂದಿದ್ದಾರೆ.ಸಿರಿ ಎಂದರೆ ಚಿಗುರು|ಸಮೃದ್ಧಿ ಎಂಬುದಾಗಿದೆ.ಕ್ರಮೇಣವಾಗಿ ಲಂಕಾ ಸಿರಿ, ಸಿರಿ ಲಂಕ ಎಂದರು.
ಕೊನೆಗೆ “ಶ್ರೀಲಂಕಾ”ಎಂದಾಯಿತು.ತುಲು ಭಾಷೆಯ ಪದ ಗಳಾದ ಲೆಕ್ಕೆಸಿರಿ,ಲೆಂಕಿಣಿ ಶಬ್ಧಗಳಿಂದಲೇ “ಶ್ರೀ ಲಂಕಾ” ಎಂಬ ಹೆಸರು ಬಂದಿದೆ.

    ತುಲುನಾಡಿನ ರೀತಿಯಲ್ಲೇ ಶ್ರೀ ಲಂಕಾದಲ್ಲೂ ಹಂದಿ,ಕೋಣ,ಹುಲಿ ರೂಪಗಳಲ್ಲಿ ಬೂತರಾಧನೆ ಇದೆ.

ತುಂಬಾ ಪ್ರಾಚೀನ ತುಲು  ಭಾಷೆಯಿಂದಲೇ ಮಲಬಾ ರ್, ತಮಿಲುನಾಡು,ಕನ್ಯಾಕುಮಾರಿ,ಸಿಂಹಲ,ಶ್ರೀ ಲಂಕಾ, ತೆಲಂಗಾಣ,ಎಂಬ ಹೆಸರುಗಳು ಹುಟ್ಟಿದ್ದು ಸತ್ಯ.ಅಲ್ಲದೆ ಇಲ್ಲಿನ ದೈವ(ನಾಗ ಮತ್ತು ಬೂತಗಳು)ಆರಾಧನೆಗಳಿಗೆ ಪ್ರೇರಣೆ ಕೂಡಾ ತುಲುವರೇ ಆಗಿದ್ದಾರೆ.

✍️ ಐ.ಕೆ.ಗೋವಿಂದ ಭಂಡಾರಿ,ನಿವೃತ್ತ ಬ್ಯಾಂಕ್ ಮ್ಯಾನೇಜರ್, ಕಾರ್ಕಳ

Leave a Reply

Your email address will not be published. Required fields are marked *