ಪೂವರಿ ಪತ್ರಿಕೆ ಏಳು ಸಂವತ್ಸರಗಳು ಪೂರೈಸಿ ಎಂಟನೇ ಸಂವತ್ಸರಕ್ಕೆ ಪಾದರ್ಪಣೆಗೈಯುತ್ತಿರುವ ಈ ಶುಭ ಸಂದರ್ಭದಲ್ಲಿ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಅಂಚೆಕಾರ್ಡಿನಲ್ಲಿ ತುಳು ಬರವುದ ಪಂತೊ (ಅಂಚೆಕಾರ್ಡಲ್ಲಿ ತುಳು ಬರಹ ಸ್ಪರ್ಧೆ) ಏರ್ಪಡಿಸಿದೆ
- ಅಂಚೆಕಾರ್ಡಲ್ಲಿ ಸಣ್ಣಕಥೆ, ಕವಿತೆ, ಹನಿಗವನಗಳು ಸೇರಿದಂತೆ ಯಾವುದೇ ಪ್ರಕಾರದ ತುಳು ಬರಹಗಳನ್ನು ಬರೆಯಬಹುದು.
- ಸ್ಪರ್ಧೆಗೆ ಬರಹ ಬರೆಯುವ ವಿದ್ಯಾರ್ಥಿಗಳ ಬರಹಗಳು ಒಂದೇ ಕಾರ್ಡಿಗೆ ಸೀಮಿತವಾಗಿರಲಿ.
- ಒಬ್ಬ ವಿದ್ಯಾರ್ಥಿಗೆ ಒಂದು ಬರಹ ಬರೆಯಲು ಮಾತ್ರ ಅವಕಾಶ. ಒಂದಕ್ಕಿಂತ ಹೆಚ್ಚು ಬರಹಗಳಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ.
- ಅಂಚೆಕಾರ್ಡಲ್ಲಿ ತುಳು ಬರಹಗಳನ್ನು ಬರೆಯುವ ಸ್ಪರ್ಧೆಯಲ್ಲಿ ಗೆದ್ದ ಬರಹಗಳಿಗೆ ಪ್ರಶಸ್ತಿ ನೀಡಲಾಗುವುದು.
- ಆಯ್ಕೆಯಾದ ಬರಹಗಳನ್ನು ಮುಂದಕ್ಕೆ ನಮ್ಮ ಪೂವರಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
- ಸ್ಪರ್ಧೆಗೆ ಬರಹಗಳನ್ನು ಬರೆಯುವ ವಿದ್ಯಾರ್ಥಿಗಳು ತಮ್ಮ ವಿಳಾಸದೊಂದಿಗೆ ಶಾಲೆ, ಕಾಲೇಜ್ ವಿವರದೊಂದಿಗೆ ಕಲಿಯುತ್ತಿರುವ ತರಗತಿಯ ವಿವರವನ್ನು ಬರೆಯುವುದು ಕಡ್ಡಾಯ. ತರಗತಿ ಮತ್ತು ಶಾಲಾ ವಿವರವಿಲ್ಲದ ಬರಹಗಳನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗುವುದಿಲ್ಲ.
- 2022 ಫೆಬ್ರವರಿ 15 ತಾರೀಕಿನೊಳಗೆ ಪೂವರಿ ತುಳು ಮಾಸಿಕ ಪತ್ರಿಕೆಯ ಕಚೇರಿಗೆ ತಲುಪುವಂತೆ ಕಳುಹಿಸಿಕೊಡಿ.
ವಿಳಾಸ : ಪೂವರಿ ತುಳು ಮಾಸಿಕ ಪತ್ರಿಕೆ, ಅಂಚೆ ಕಾರ್ಡ್ ಬರವುದ ಪಂತೊ ವಿಭಾಗ, ಅಂಚೆ ಪೆಟ್ಟಿಗೆ ನಂ: 28, ಪುತ್ತೂರು – 574201
ಮೇಲಿನ ಸಾಹಿತ್ಯ ಸ್ಪರ್ಧೆಯ ಮಾಹಿತಿಯನ್ನು ತಮ್ಮ ತಮ್ಮ ಶಾಲಾ – ಕಾಲೇಜುಗಳಲ್ಲಿ ಪ್ರಚಾರ ಮಾಡುವ ಮೂಲಕ ನಮ್ಮ ತುಳು ಭಾಷೆಯ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಸಾಹಿತ್ಯ ಅಭಿಮಾನ ಮೂಡಿಸುವ ಪೂವರಿ ಪತ್ರಿಕೆಯ ಪ್ರಯತ್ನವನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕೆಯ ಸಂಪಾದಕರಾಗಿರುವ ಶ್ರೀ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಭಂಡಾರಿ ವಾರ್ತೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
-ಭಂಡಾರಿ ವಾರ್ತೆ