ಹದಿಹರೆಯವು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬದಲಾವಣೆ ಅಥವಾ ಸ್ಥಿತ್ಯಂತರ ಹೊಂದುವ ಕಾಲ. ಇದು ಒಬ್ಬ ವ್ಯಕ್ತಿಯ ಜೀವನದಲ್ಲಿ ಸುಮಾರು 10 ರಿಂದ 19 ವಯಸ್ಸಿನ ಅವಧಿಯಲ್ಲಿ ಆಗುವ ಬದಲಾವಣೆ.
ಹದಿಹರೆಯವು ಹೆಣ್ಣು ಮಕ್ಕಳಲ್ಲಿ 10 ನೇ ವರ್ಷದಿಂದ ಪ್ರಾರಂಭವಾಗಿ 16 ವರ್ಷದವರೆಗೆ ಹಾಗೂ ಗಂಡು ಮಕ್ಕಳಲ್ಲಿ 13ನೇ ವರ್ಷದಿಂದ ಪ್ರಾರಂಭವಾಗಿ 17ನೇ ವರ್ಷದವರೆಗೆ ಬದಲಾವಣೆ ಕಾಣುತ್ತವೆ.
ಜನವರಿ 13 ರ ಬುಧವಾರದಂದು ಸುಮಾರು 2 ಗಂಟೆಗಳ ಕಾಲ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಹದಿಹರೆಯದ ತಲ್ಲಣಗಳು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ರೀತಿಯಲ್ಲಿ ಕಾಣಬಹುದು ಮುಖ್ಯವಾಗಿ ಈ ನಿಟ್ಟಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ವೈಯಕ್ತಿಕ ಸ್ವಚ್ಛತೆ, ಬೆಳವಣಿಗೆ ಆಗುತ್ತಿರುವ ಅಂಗಗಳ. ಋತುಚಕ್ರದ ರೀತಿ ಹಾಗೂ ಅದರಿಂದ ಆಗುವ ಮಾನಸಿಕ ಮತ್ತು ದೈಹಿಕ ಒತ್ತಡ, ಹಾಗೂ ಅದರ ಒಟ್ಟು ಬೆಳವಣಿಗೆ, ಹದಿಹರೆಯದಲ್ಲಿ ಎಚ್ಚರ ವಹಿಸಬೇಕಾದ ಆಯಾಮಗಳು, ಹದಿಹರೆಯದ ಮಕ್ಕಳಲ್ಲಿ ಇರಬೇಕಾದ ಜೀವನದ ಗುರಿಗಳು ಹಾಗೂ ಅದನ್ನು ತಲುಪಲು ಬೇಕಾದ ಬದ್ಧತೆ , ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಕಿರುಕುಳ ಮುಖ್ಯವಾಗಿ ಗುಡ್ ಟಚ್ , ಬ್ಯಾಡ್ ಟಚ್ , ಮಾದಕ ವ್ಯಸನದಿಂದ ಮುಂದಿನ ಜೀವನದಲ್ಲಾಗುವ ಪರಿಣಾಮಗಳು ಈ ಕುರಿತು ವಿಸ್ತಾರವಾದ ಮಾಹಿತಿಯನ್ನು ಶ್ರೀಮತಿ ವನಿತಾ ಅರುಣ್ ಭಂಡಾರಿಯವರು ನೀಡಿದರು .
ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆ ಬಜಪೆ ಯ 9ನೇ ತರಗತಿ ಮತ್ತು 10 ನೇ ತರಗತಿಯ ಒಟ್ಟು 70 ವಿದ್ಯಾರ್ಥಿನಿಯರು ಈ ಸಂವಾದದಲ್ಲಿ ಪಾಲ್ಗೊಂಡಿದ್ದು, ಸಂವಾದದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಹನಾಜ್ ಎಂ ಹಾಗೂ ತರಗತಿ ಶಿಕ್ಷಕಿ ಶ್ರೀಮತಿ ಸಾಧನಾ ಕೂಡಾ ಭಾಗವಹಿಸಿದ್ದರು.
ಭಂಡಾರಿ ವಾರ್ತೆ ಯ ಸುದ್ದಿ ಮತ್ತು ಇತರ ಲೇಖನ, ಕಥೆಗಳು ಕೇವಲ ನಮ್ಮ ಸಮಾಜ ಮಾತ್ರವಲ್ಲದೆ ,ಎಲ್ಲಾ ಸಮಾಜದ ಜನರಿಗೆ ತಲುಪುತ್ತಿರುವುದಕ್ಕೆ ಇದೊಂದು ನಿದರ್ಶನ.
ಭಂಡಾರಿ ವಾರ್ತೆ ಅನ್ಯ ಸಮಾಜದ ಜನರಿಗೆ ಕೂಡಾ ತಲುಪಿ ಅವರು ಓದಿ ತಮ್ಮ ಅನಿಸಿಕೆ ಪ್ರತಿಕ್ರಿಯೆ ಕೊಡುತ್ತಿರುವುದು ನಾವೆಲ್ಲಾ ಹೆಮ್ಮೆ ಪಡಬೇಕಾದ ವಿಷಯ.
ಸಮಾಜದ ವಿವಿಧ ಪ್ರತಿಭೆಗಳನ್ನು ಗುರುತಿಸಿ ಭಂಡಾರಿ ವಾರ್ತೆ ಮೂಲಕ ಪರಿಚಯಿಸಿ ಅವರ ಪ್ರತಿಭೆಗಳು ಸಮಾಜದ ಇತರರಿಗೂ ತಿಳಿಯುವಂತೆ ಮಾಡುವುದೇ ಭಂಡಾರಿ ವಾರ್ತೆಯ ಮುಖ್ಯ ಧ್ಯೇಯ..
ವನಿತಾ ಅರುಣ್ ಭಂಡಾರಿ ಬಜ್ಪೆ ಸ್ನಾತಕೋತ್ತರ ಪದವಿಯಲ್ಲಿ ಶಿಕ್ಷಣ ಪಡೆದಿದ್ದು ಸರಕಾರೇತರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸದಲ್ಲಿ ಇರುವಾಗ ಹದಿಹರೆಯದ ಶಿಕ್ಷಣದ ಬಗ್ಗೆ ತರಭೇತಿ ಪಡೆದಿದ್ದಾರೆ. ಸುಮಾರು 10 ರಿಂದ 12 ಶಿಬಿರಗಳನ್ನು ಹದಿಹರೆಯದ ಮಕ್ಕಳಿ ಗಾಗಿ ನಡೆಸಿದ್ದಾರೆ . ಅಲ್ಲದೆ 7 ವಿವಿಧ ಶಾಲಾ ಕಾಲೇಜು ಮಕ್ಕಳಿಗೆ ಹದಿಹರೆಯದ ಶಿಕ್ಷಣ ಕುರಿತು ಮಾಹಿತಿಯನ್ನು ನೀಡಿದ್ದಾರೆ.
ಮುಂದೆ ಇಂತಹ ಹಲವು ಶಿಕ್ಷಣ ಸಂಸ್ಥೆಗಳು , ಸಂಘ ಸಂಸ್ಥೆಗಳು ಶ್ರೀಮತಿ ವನಿತಾ ಅರುಣ್ ಭಂಡಾರಿಯವರಿಂದ ಮಾಹಿತಿಗಳನ್ನು ಕೊಡಿಸುವ ಮೂಲಕ ಸಮಾಜದ ಹದಿ ಹರೆಯದ ವಿದ್ಯಾರ್ಥಿನಿಗಳ ಭವಿಷ್ಯವನ್ನು ತಾವೇ ರೂಪಿಸುವಲ್ಲಿ ಸಹಕಾರಿಯಾಗಲಿ ಎಂದು ಭಂಡಾರಿ ವಾರ್ತೆ ಆಶಿಸುತ್ತಾ , ಶುಭಾಶಯವನ್ನು ಸಲ್ಲಿಸುತ್ತದೆ.
-ಭಂಡಾರಿ ವಾರ್ತೆ
Thank you Vanithakka 🙏🏻
Good job