ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ದಾವಣಗೆರೆಯಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಂತಿಮ ವರ್ಷದ ಬಿ.ಬಿ.ಎ.ವಿದ್ಯಾರ್ಥಿನಿ ಪಡುಬಿದ್ರೆಯ ಕು॥ ಯಶಸ್ವಿನಿ ಭಂಡಾರಿ ಒರಿಸ್ಸಾದ ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಯಶಸ್ವಿನಿ ಕಾಪು ಸವಿತಾ ಸಮಾಜದ ಅಧ್ಯಕ್ಷ ವಿನಯ ಭಂಡಾರಿ ಪಡುಬಿದ್ರೆ ಮತ್ತು ಸಂಧ್ಯಾ ಭಂಡಾರಿ ದಂಪತಿಯ ಪುತ್ರಿ.
ಕು॥ ಯಶಸ್ವಿನಿ ಭಂಡಾರಿ ತಮ್ಮ ಬಾಲ್ಯ ಜೀವನದಲ್ಲೇ ಅತ್ಯುತ್ತಮ ಕ್ರೀಡಾಪಟು ಪಡುಬಿದ್ರೆ ಸಾಗರ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ರಾಜ್ಯ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಆಗಿ ಮಿಂಚಿದ್ದಾರೆ. ರಾಜ್ಯಮಟ್ಟದ ಬೆಸ್ಟ್ ಆಲ್ ರೌಂಡರ್ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ ಮತ್ತು ತಂಡದ ಉಪ ನಾಯಕಿಯಾಗಿ ಕಬಡ್ಡಿ ತಂಡವನ್ನು ಮುನ್ನಡೆಸುತ್ತಿದ್ದರು. ಹಾಗೂ ಕರಾಟೆ ಸ್ಪರ್ಧೆಯಲ್ಲಿ ಕೂಡಾ ಬ್ರೌನ್ ಬೆಲ್ಟ್ ಪಡೆದಿರುತ್ತಾರೆ. ಇವರ ಕ್ರೀಡಾ ಸಾಧನೆಯನ್ನು ಗುರುತಿಸಿದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕ್ರೀಡಾ ಕೋಟಾದಡಿ ಕ್ರೀಡೆಯ ಜೊತೆಗೆ ಪಿ.ಯು. ಶಿಕ್ಷಣಕ್ಕೆ ಪ್ರೇರಣೆ ನೀಡಿತು.
ಪಿ.ಯು.ವ್ಯಾಸಂಗದ ಮಾಡುತ್ತಿರುವಾಗ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕೂಡಾ ರಾಜ್ಯ ಮತ್ತು ರಾಷ್ಟ್ರಮಟ್ಟದ ಅತ್ಯುತ್ತಮ ಪವರ್ ಲಿಫ್ಟರ್ ಪ್ರದರ್ಶನ ಮಾಡಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವೈಟ್ ಲಿಫ್ಟಿಂಗ್ ತರಬೇತುದಾರರಾದ ಪ್ರಮೋದ್ ಕುಮಾರ್ ಶೆಟ್ಟಿ ಇವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ವೈಟ್ ಲಿಫ್ಟಿಂಗ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಕು॥ ಯಶಸ್ವಿನಿ ಭಂಡಾರಿಯವರು ಕ್ರೀಡಾ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಶಸ್ತಿ ಪಡೆಯಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ