ಬಂಟ್ವಾಳ ತಾಲ್ಲೂಕು ಮಂಚಿ ದಿವಂಗತ ರಾಮ ಭಂಡಾರಿ ಮತ್ತು ದಿವಂಗತ ಪುತ್ತು ಹೆಂಗ್ಸ ದಂಪತಿಯ ಪುತ್ರ ಕನ್ಯಾನ ಗ್ರಾಮದ ಪರಕ್ಕಾಜೆ ಪೂವಪ್ಪ ಭಂಡಾರಿ (85 ವರ್ಷ ) ಏಪ್ರಿಲ್ 11 ನೇ ಸೋಮವಾರ ಮುಸ್ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಹೋಮಿಯೋಪತಿ ಔಷಧಿ ನೀಡಿ ಹೆಸರುವಾಸಿಯಾಗಿದ್ದು ಕೃಷಿಕರಾಗಿ ಮತ್ತು ಸಣ್ಣ ವ್ಯಾಪಾರಸ್ಥರಾಗಿದ್ದ ಇವರು ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ ಸತತ 25 ವರ್ಷ ಕಾಲ ಸದಸ್ಯರಾಗಿ ಜನ ಮೆಚ್ಚುಗೆ ಕಾರ್ಯ ಮಾಡಿದ್ದಾರೆ.
ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ರಾಗಿ ಸಂಘದ ಸಂಘಟನೆ ಮತ್ತು ಏಳಿಗಾಗಿ ಶಕ್ತಿಮೀರಿ ಶ್ರಮಿಸಿರುತ್ತಾರೆ. ಕಾಂಗ್ರೆಸ್ ಪಕ್ಷದ ಕನ್ಯಾನ ವಲಯದ ಅಧ್ಯಕ್ಷರಾಗಿಯೂ ಪಕ್ಷಕ್ಕೆ ನಿಷ್ಠರಾಗಿ ಸೇವೆ ಮಾಡಿರುತ್ತಾರೆ.
ಕನ್ಯಾನ ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಮೃತರು ಪತ್ನಿ ರಮಣಿ
ಮತ್ತು ಪುತ್ರರಾದ ಸತೀಶ್ ಭಂಡಾರಿ ಪರಕ್ಕಾಜೆ , ಕ್ಯಾಂಪ್ಕೋ ಸಂಸ್ಥೆಯ ಉದ್ಯೋಗಿ ಅಶೋಕ್ ಭಂಡಾರಿ , ಪುತ್ರಿಯರಾದ ಶ್ರೀಮತಿ ವಿಜಯ ಶಿವಯ್ಯ ಭಂಡಾರಿ ಬೆಳ್ಳಿಪಾಡಿ ಕೈಪ , ಶ್ರೀಮತಿ ಹೇಮಲತಾ ಕಿಶೋರ್ ಮುಲ್ಕಿ ಪ್ರೇಮಲತಾ ಶ್ರೀನಿವಾಸ ತುಂಬೆ ಬಂಟ್ವಾಳ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಿ ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯ ಶಕ್ತಿಯನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.