ಸಾಧಿಸುವ ಛಲ ಒಂದಿದ್ದರೆ ಏನನ್ನೂ ಸಾಧಿಸಬಹುದು ಮತ್ತು ಎಂತಹ ಅಡ್ಡಿ ಆತಂಕಗಳೂ ನಮ್ಮನ್ನು ಕುಗ್ಗಿಸುವುದಿಲ್ಲ ಎನ್ನುವುದಕ್ಕೆ ನೇರ ನಿದರ್ಶನವಾಗಿ ಇಂದು ಗೋಲ್ಡ್ ಮೆಡಲ್ ಪಡೆದು ಸಾಧಿಸಿದ ಪಲ್ಲವಿ ಭಂಡಾರಿಯವರು ನಮ್ಮ ಮುಂದಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಗದಗ ( Karnataka state rural development and panchayat Raj University Gadag) ಇದರಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ( MPH ) ವಿಭಾಗದಲ್ಲಿ 82 % ನೊಂದಿಗೆ ಪ್ರಥಮ ರ಼್ಯಾಂಕ್ ಪಡೆದು ಚಿನ್ನದ ಪದಕವನ್ನು ಸಾಧಿಸಿದ್ದಾರೆ.
ವಿಶ್ವ ವಿದ್ಯಾನಿಲಯದ ಎರಡನೆ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಪದವಿ ಪ್ರಧಾನ ಮಾಡಿದರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ನೆಡೆಸಿ ಎಸ್, ಎಸ್, ಎಲ್, ಸಿ, ಯಲ್ಲಿ 84 % ಅಂಕಗಳನ್ನು ಪಡೆದು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ, ವಿದ್ಯಾರತ್ನ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಬಿ.ಎಸ್.ಸಿ. ನರ್ಸಿಂಗ್ ಪದವಿ ಪಡೆದು ಕೆಲಸ ನಿರ್ವಹಿಸುತ್ತಿದ್ದರೂ ಹೆಚ್ಚಿನ ವಿದ್ಯಾಭ್ಯಾಸದ ತುಡಿತ ಮಾತ್ರ ಹಾಗೆಯೇ ಇತ್ತು. ಕೆಲವು ಹೊಣೆಗಾರಿಕೆಗಳು ಮತ್ತು ಸಂಕಷ್ಟಗಳು ಉನ್ನತ ವ್ಯಾಸಾಂಗಕ್ಕೆ ಅವಕಾಶ ಕೊಡದೇ ಇದ್ದ ಸಂದರ್ಭದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಕುಟುಂಬದ ಸಹಕಾರದೊಂದಿಗೆ ಸಲಹೆ ಮತ್ತು ಸಹಕಾರದೊಂದಿಗೆ ಕನಸಿನ ಚಿಗುರಿಗೆ ನೀರೆರೆದು ಪೋಷಿಸಿ ಮಾರ್ಗದರ್ಶನದ ನೀಡಿದ್ದು ಪ್ರಸ್ತುತ ಕಳಸದ ಆರೋಗ್ಯಕೇಂದ್ರದಲ್ಲಿ ಶುಶ್ರೂಷಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಜ್ಯೋತಿ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಳ್ಕೆಬೈಲ್ ರಾಜೀವ ಭಂಡಾರಿ ಮತ್ತು ಕುಸುಮಾ ಭಂಡಾರಿಯವರ ಪುತ್ರಿಯಾಗಿದ್ದಾರೆ. ಪ್ರಮೋದ ಭಂಡಾರಿಯವರ ಸಹೋದರಿ. ಪಲ್ಲವಿ ಭಂಡಾರಿಯವರು ಪ್ರಸ್ತುತ ಕೆ. ಎಮ್. ಸಿ. ಮಣಿಪಾಲ ಇದರಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ Covid 19 project, community medicine department ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭಹಾರೈಕೆಗಳು.
ವರದಿ : ಪ್ರಮೋದ್ ಭಂಡಾರಿ ಕೊಳ್ಕೆಬೈಲ್