November 22, 2024
ravi bidanuru

ಹೊಸನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ರವಿ ಬಿದನೂರು ಆಯ್ಕೆಯಾದರು .
ರಾಜ್ಯ ನಿರ್ದೇಶಕ ಏನ್ ರವಿಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.


ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದವರು. ನಗರದ ಐತಿಹಾಸಿಕ ಹೆಸರು “ಬಿದನೂರು” ಆಗಿರುವುದರಿಂದ, ತಮ್ಮ ಹೆಸರಿನೊಂದಿಗೆ ಬಿದನೂರು ಸೇರಿಸಿಕೊಂಡು ರವಿಬಿದನೂರು ಎಂದೇ ಹೆಸರಾದರು. ಪೆರ್ಡೂರು ಭೋಜಭಂಡಾರಿ ಮತ್ತು ಸೀತಮ್ಮ ದಂಪತಿಗಳ ಮಗನಾದ ಇವರ ಪತ್ನಿ ಶ್ರೀಮತಿ ಕುಮುದಾ ಬನ್ನಂಜೆಯವರು. ಕುಮಾರಿ ಸಮೃದ್ಧಿ ಬಿದನೂರು ಇವರ ಮುದ್ದಿನ ಮಗಳು.

ಕಾಲೇಜು ದಿನಗಳಲ್ಲಿ ಹವ್ಯಾಸಿ ಬರಹಗಾರರಾಗಿ ಪ್ರಜಾವಾಣಿ, ಉದಯವಾಣಿ,ತರಂಗ,ಸುಧಾ ಹೀಗೆ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾ ಮಾಧ್ಯಮ ಲೋಕಕ್ಕೆ ಪ್ರವೇಶಿಸಿದ ಇವರು ನಂತರ ಜನವಾಹಿನಿ ಪತ್ರಿಕೆಗೆ ಹೊಸನಗರ ತಾಲೂಕಿನ ವರದಿಗಾರರಾಗಿ, ನಮ್ಮ ನಾಡು,ನಾವಿಕ,ಕರುನಾಡು ಸಂಜೆ ಪತ್ರಿಕೆಗಳಿಗೆ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದರು.ರಾಜ್ಯ ಮಟ್ಟದ ಪತ್ರಿಕೆ ಕನ್ನಡ ಫ್ರಭ ದಲ್ಲಿ ಹತ್ತು ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದರು.ಬಳಿಕ ಉಡುಪಿಯ ಸ್ಪಂದನ ಚಾನಲ್ ನಲ್ಲಿ ಕೆಲಕಾಲ ತೊಡಗಿಸಿಕೊಂಡಿದ್ದವರು, ಕೆಲವು ಕಾಲ ಸಮಯ ಟಿವಿ ಯಲ್ಲಿ ಕೂಡ ದುಡಿದಿದ್ದಾರೆ

ರವಿ ಬಿದನೂರು ಪ್ರಸ್ತುತ ವಿಜಯವಾಣಿ ಕನ್ನಡ ಪತ್ರಿಕೆಯ ವರದಿಗಾರ.

ಹಲವಾರು ಸಂಘ ಸಂಸ್ಥೆಗಳು, ಲಯನ್ಸ್ ಕ್ಲಬ್ ಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ.ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.2011ರಲ್ಲಿ ನವದೆಹಲಿಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೊಲಿದಿತ್ತು.

ರಾಜ್ಯ ಸರಕಾರ ಮಾಧ್ಯಮ ಮಿತ್ರರಿಗೆ ನೀಡುವ ಅತೀ ಶ್ರೇಷ್ಠ ಪ್ರಶಸ್ತಿಯಾದ ಕರ್ನಾಟಕ ರಾಜ್ಯದ ಮಾಧ್ಯಮ ಅಕಾಡೆಮಿ ಪ್ರಶಸ್ತಿ-2017ನೇ ಸಾಲಿನ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ಕೂಡಾ ರವಿ ಬಿದನೂರು ಭಾಜನರಾಗಿದ್ದಾರೆ.

ಗುಡ್ ಮಾರ್ನಿಂಗ್ ಕರ್ನಾಟಕ ಎಂಬ ಫೇಸ್ ಬುಕ್ ಪೇಜ್ ಮೂಲಕ ಶಿವಮೊಗ್ಗ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ರವಿ ಬಿದನೂರು ಮಾಡುತ್ತಿದ್ದಾರೆ.

ಶ್ರೀಯುತ ರವಿ ಬಿದನೂರು ರವರು ಭಂಡಾರಿ ವಾರ್ತೆಯ ಸ್ಥಾಪಕ ಸದಸ್ಯ ಎನ್ನಲು ನಮಗೆ ಹೆಮ್ಮೆಯಾಗುತ್ತದೆ.


ಹೊಸನಗರ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡ ರವಿ ಬಿದನೂರು ರವರಿಗೆ ಕರೆಮಾಡಿದ ಭಂಡಾರಿವಾರ್ತೆ ಯೊಂದಿಗೆ ರವಿ  ತಮ್ಮ ಸಂತಸವನ್ನು ಹಂಚಿಕೊಂಡರು.

ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರಲಿ,ಮಾಧ್ಯಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ,ಅವರ ಅಕ್ಷರಸೇವೆ ನಿರಂತರವಾಗಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶ್ರೀ ರವಿಬಿದನೂರು ಅವರಿಗೆ ಶುಭ ಹಾರೈಸುತ್ತದೆ.

1 thought on “ಹೊಸನಗರ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ರವಿ ಬಿದನೂರು ಆಯ್ಕೆ

Leave a Reply

Your email address will not be published. Required fields are marked *