September 20, 2024

ಉಡುಪಿ ಜಿಲ್ಲೆಯ ಕಾರ್ಕಳ ಕಾಬೆಟ್ಟು ಸೌರಭ ನಿವಾಸದ ಶ್ರೀ ಹರೀಶ್ ಕುಮಾರ್ ಭಂಡಾರಿ ಮತ್ತು ಶ್ರೀಮತಿ ಸುಪ್ರಿಯಾ ಭಂಡಾರಿ ದಂಪತಿಯ ಪುತ್ರ ಪ್ರಥಮ್ ಕುಮಾರ್ ಭಂಡಾರಿ ಇವರು 2021-22 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 574 (91.84%) ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರಥಮ್ ಕುಮಾರ್ ಇವರು ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ. ಪ್ರಥಮ್ ಕುಮಾರ್ ಭಂಡಾರಿ ಇವರು ಶಿಕ್ಷಣದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಅಭಿನಂದನೆ ಸಲ್ಲಿಸುತ್ತದೆ.

Leave a Reply

Your email address will not be published. Required fields are marked *