September 20, 2024

ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರಿನ ಶ್ರೀ ದಿವಾಕರ ಭಂಡಾರಿ ಮತ್ತು ಶ್ರೀಮತಿ ನಮನ ದಿವಾಕರ ಭಂಡಾರಿ ದಂಪತಿಯ ಪುತ್ರಿ ರಿಷಿಕಾ ಇವರು 2021-22 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 566 ಅಂಕಗಳೊಂದಿಗೆ (91%) ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರಿಷಿಕಾ. ಡಿ . ಭಂಡಾರಿ ಇವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ ಶಂಭೂರು ಇಲ್ಲಿಯ ವಿದ್ಯಾರ್ಥಿನಿ. ರಿಷಿಕಾ. ಡಿ. ಭಂಡಾರಿ ಇವರು ಶಿಕ್ಷಣದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *