September 20, 2024

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೆರಾಡಿಯ ಶ್ರೀ ಪ್ರವೀಣ್ ಭಂಡಾರಿ ಮತ್ತು ಶ್ರೀಮತಿ ಸುಜಯ ಭಂಡಾರಿ ದಂಪತಿಯ ಪುತ್ರಿ ಪಿ. ಸಂಚಿತಾ ಭಂಡಾರಿ ಇವರು 2021-22 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 598 ಅಂಕಗಳೊಂದಿಗೆ (95.68%) ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪಿ. ಸಂಚಿತಾ ಭಂಡಾರಿ ಇವರು ಗುರುಕೃಪ ಸೆಂಟ್ರಲ್ ಸ್ಕೂಲ್ ಬೊಲ್ಯೋಟ್ಟು ಹೊಸ್ಮಾರ್ ಶಾಲೆಯ ವಿದ್ಯಾರ್ಥಿನಿ. ಪಿ. ಸಂಚಿತಾ ಭಂಡಾರಿ ಇವರು ಶಿಕ್ಷಣದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *