ಇಂದು ವಿಶ್ವ ಪರಿಸರ ದಿನ, ಜಗತ್ತಿನಾದ್ಯಂತ ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಛತಾ ಅಭಿಯಾನ, ಗಿಡ ನೆಡುವುದು ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ.
ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ಅವಕಾಶಗಳು.. ಅಂದರೆ ನೆಲ ಜಲ ಗಾಳಿ ಗಿಡ ಮರ ಇತ್ಯಾದಿ.
ಹದಗೆಡಲು ದಿನೇ ದಿನೇ ಸುಂದರ ಪರಿಸರ
ಜೀವರಾಶಿಗೆ ತಗಲುತ್ತಿದೆ ರೋಗ ತರ ತರ
ಮುಂದೊಂದು ದಿನ ಬರಲಿದೆ ಎಲ್ಲದಕ್ಕೂ ಬರ
ಇದ ತಡೆಯಲು ಜೋಡಿಸಬೇಕಿದೆಲ್ಲರೂ ಕರ
ಈ ಸುಂದರ ಪರಿಸರವು ಹದಗೆಡಲು ಬುದ್ಧಿವಂತ ಪ್ರಾಣಿ ಅಂದರೆ..ಮನುಷ್ಯ ಮುಖ್ಯ ಕಾರಣ. ತನ್ನ ಉಳಿವಿಗಾಗಿ ಸಸ್ಯ ಸಂಕುಲದ ಅಳಿವನ್ನು ಬಯಸುತ್ತಿದ್ದಾನೆ. ಕಾಡುಗಳೆಲ್ಲ ನಾಡಗಿ ಪರಿವರ್ತನೆಯಾಗಿವೆ. ಸ್ವಚ್ಛ ನೀರೊಳಗೆ ಮಾನವ ನಿರ್ಮಿತ ತ್ಯಾಜ್ಯಾ ಸೇರಿ ಅಶುದ್ಧವಾಗಿವೆ , ಶುದ್ಧ ಪ್ರಾಣ ವಾಯುವಿನೊಂದಿಗೆ ವಾಹನ ಕಾರ್ಖಾನೆಗಳ ವಿಷಾನಿಲ ಸೇರಿಕೊಂಡಿದೆ. ಇದರಿಂದಾಗಿ ಹೊಸ ಹೊಸ ರೋಗಗಳ ಸೃಷ್ಟಿಯಾಗಿವೆ. ಪರಿಸರ ಮಾಲಿನ್ಯ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಉಸಿರಾಡಲು ಸ್ವಚ್ಛ ಗಾಳಿ, ಕುಡಿಯಲು ಶುದ್ಧ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗುವುದಲ್ಲಿ ಸಂಶಯವೇ ಇಲ್ಲ. ಪರಿಸ್ಥಿತಿ ಹದಗೆಡುವ ಮೊದಲು ಮನುಕುಲ ಏಚ್ಚೆತ್ತು ಕೊಳ್ಳಬೇಕಿದೆ.
ಪರಿಸರವನ್ನು ರಕ್ಷಿಸುವ ಕುರಿತಾದ ಪರಿಜ್ಞಾನ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇರಬೇಕು.
ಮಕ್ಕಳಿಗೆ ಪರಿಸರ ಮಾಲಿನ್ಯದ ಕುರಿತು ಹೆಚ್ಚಿನ ಮಾಹಿತಿ ಮನೆಯಿಂದಲೇ ಆರಂಭವಾಗಬೇಕಿದೆ. ಮಕ್ಕಳಿಗೆ ಗಿಡಮರ,ನೆಲ, ಜಲ, ಗಾಳಿ, ಪ್ರಾಣಿ ಪಕ್ಷಿ, ಹೂವು ಹಣ್ಣುಗಳ ಬಗ್ಗೆ ಒಲವು ಮೂಡಿಸಬೇಕು. ಅವುಗಳ ಉಳಿವಿನ ಬಗ್ಗೆ ಜಾಗೃತಿ ಭರಿಸಬೇಕು. ಮಕ್ಕಳಿಗೆ ಹಿರಿಯರು ಪ್ರೇರಣೆಯಾಗಿರಬೇಕು. ಮಕ್ಕಳು ಹಿರಿಯರು ಏನು ಹೇಳುತ್ತಾರೋ ಅದನ್ನು ಮಡುವುದಕ್ಕಿಂತ.. ಹಿರಿಯರು ಏನು ಮಾಡುತ್ತಾರೋ ಅದನ್ನೇ ಅನುಕರಿಸುವುದೇ ಹೆಚ್ಚು. ಮನೆಯ ಸುತ್ತಮುತ್ತ, ರಸ್ತೆಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ತೊಟ್ಟಿಗೆ ಹಾಕುವ ಹವ್ಯಾಸ, ಕಸ ವಿಲೇವಾರಿ ಬಗ್ಗೆ ಮಾಹಿತಿ, ಗಿಡಮರಗಳ ಪೋಷಣೆ, ಸಾಲುಮರ ತಿಮ್ಮಕ್ಕನಂತಹ ಪರಿಸರ ಪ್ರೇಮಿಗಳ ಶ್ರಮವನ್ನು ದೊಡ್ಡವರಾದ ನಾವೂ ಅರಿತು ಮಕ್ಕಳಿಗೆ ತಿಳಿಹೇಳಬೇಕು.
ಒಟ್ಟಿನಲ್ಲಿ ಹೇಳಬೇಕೆಂದರೆ ವಿಶ್ವ ಪರಿಸರ ದಿನ ಒಂದು ದಿನಕ್ಕೆ ಸೀಮಿತವಾಗಿರಬಾರದು,ಬದಲಾಗಿ ಪರಿಸರದ ರಕ್ಷಣೆ ನಿರಂತರ ನಡೆಯುತ್ತಿರಬೇಕು.
✍️ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ
Awesome information