ಆರೋಗ್ಯ: ದೇಹಕ್ಕೆ ಅತ್ಯಗತ್ಯವಾದ ಪ್ರೊಟೀನ್ ನ ಸಾಮರ್ಥ್ಯವೇನು?
ಪ್ರೋಟೀನ್ ದೇಹ ಶಕ್ತಿಯ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದ್ದು, ಇದು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ.
ಆದರೆ ನೀವು ಅದನ್ನು ಪ್ರಯತ್ನಿಸುವ ಮೊದಲು, ಅದು ನಿಮ್ಮ ಅಗತ್ಯಗಳ ಆಧಾರದ ಮೇಲೆ ಯಾವುದನ್ನು ತೆಗೆದುಕೊಳ್ಳಬೇಕು, ಹೇಗೆ ಮತ್ತು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯುವುದು ಮುಖ್ಯ ಎಂದು ಸೋನಿಪತ್ ಮೂಲದ ವೃತ್ತಿಪರ ಆಹಾರ ತಜ್ಞ ಹಾಗೂ ಬಾಡಿಬಿಲ್ಡರ್ ಸಂಜೀವ್ ಟೋಕಾಸ್ ಹೇಳಿದ್ದಾರೆ.
ಪ್ರೋಟೀನ್ ಎಂದರೇನು?
ಇದೊಂದು ಅವಶ್ಯಕ ಅಮೈನೋ ಆಮ್ಲವಾಗಿದ್ದು, ಮಾನವ ದೇಹದ ಅಂಗಾಶಗಳನ್ನು ರಚಿಸಲು ಮತ್ತು ಸವೆದ ಅಂಗಾಂಶಗಳನ್ನು ದುರಸ್ತಿಗೊಳಿಸಲು ಬಳಸಲ್ಪಡುವ ಮೂಲಧಾತುಗಳಾಗಿವೆ. ನಮ್ಮ ದೇಹದ ಮೂಳೆಗಳು, ಸ್ನಾಯುಗಳು, ಅಸ್ಥೆಮಜ್ಜೆ, ತ್ವಚೆ ಮತ್ತು ರಕ್ತ ಆರೋಗ್ಯಕರವಾಗಿರಲು ಪ್ರೋಟೀನ್ ಅಗತ್ಯವಾಗಿ ಬೇಕು. ಕಿಣ್ವ, ರಸದೂತಗಳು ಹಾಗೂ ಇತರ ಅಗತ್ಯ ರಾಸಾಯನಿಕಗಳ ತಯಾರಿಕೆಗೆ ಪ್ರೋಟೀನ್ ಅಗತ್ಯವಾಗಿ ಬೇಕು. ಮೊಟ್ಟೆ, ಮೊಸರು, ಮಾಂಸ ಹಾಗೂ ಮೀನುಗಳಲ್ಲಿ ಈ ಪ್ರೋಟೀನ್ ಸಮೃದ್ಧವಾಗಿರುತ್ತವೆ.
ಪ್ರೊಟೀನ್ ಇನ್-ಟೇಕ್ ಕುರಿತ ಸಂಜೀವ್ ಟೋಕಾಸ್ ಅವರ ಸಲಹೆಗಳು ಇಂತಿವೆ
ತೂಕ ಇಳಿಸಲು
ಉತ್ತಮ ಗುಣಮಟ್ಟದ ಪ್ರೋಟೀನ್ ಪುಡಿಯಲ್ಲಿ ವ್ಹೇ ಪ್ರೋಟೀನ್ ಇರುತ್ತದೆ. ಇದು ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ದೈನಂದಿನ ಪ್ರೋಟೀನ್ ಸೇವನೆಯ ಜೊತೆಗೇ ಸುಮಾರು 25-30 ಗ್ರಾಂನಷ್ಟು ಪ್ರೋಟೀನ್ ಪುಡಿಯನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ದೇಹದಾರ್ಢ್ಯತೆಯ ಗುರಿಗಳನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ಅಹಾರದ ಸಂತೃಪ್ತಿಯೂ ಲಭಿಸುತ್ತದೆ. ವ್ಯಾಯಾಮಶಾಲೆಯಲ್ಲಿ ನಿತ್ಯವೂ ವ್ಯಾಯಾಮ ಮಾಡುವವರಿಗೆ ಹೆಚ್ಚು ಫಲದಾಯಕವಾಗಿದೆ. ಸಾಮಾನ್ಯವಾಗಿ ಪ್ರೋಟೀನ್ ಮಾಂಸಾಹಾರದ ಮೂಲಕ ಹೆಚ್ಚು ಲಭಿಸುವ ಆಹಾರವಾಗಿದ್ದು ಇದುವರೆಗೆ ಮಿತವಾದ ಆಯ್ಕೆಗಳಿದ್ದ ಸಸ್ಯಾಹಾರಿಗಳಿಗೆ ಈ ಪೇಯ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಉತ್ತಮ ಅತ್ಯಾಧಿಕತೆ ಮತ್ತು ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ.
ಸ್ನಾಯು ಬಲಾಢ್ಯತೆಗೆ
ಹೆಚ್ಚಿನ ಜೈವಿಕ ಮೌಲ್ಯವನ್ನು ಹೊಂದಿರುವ ಪ್ರೊಟೀನ್ ಪುಡಿ (ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿರುತ್ತದೆ) ನಿಮ್ಮ ಮೊದಲ ಆಯ್ಕೆಯಾಗಿರಬೇಕು. ಇದು ನಿಮ್ಮ ದೇಹದ ಸ್ನಾಯು ಬಲಾಢ್ಯತೆಗೆ ನೆರವಾಗುತ್ತದೆ.
ಜೀರ್ಣಾಂಗವ್ಯೂಹದ ಸಮಸ್ಯೆಗಳ ನಿವಾರಣೆ
ಜೀರ್ಣಾಂಗವ್ಯೂಹದ ಸಮಸ್ಯೆಗಳ ನಿವಾರಣೆಗಾಗಿ ಲ್ಯಾಕ್ಟೋಸ್ ಸಕ್ಕರೆ, ಗ್ಲುಟನ್, ಕೃತಕ ಸಿಹಿಕಾರಕಗಳು ಅಥವಾ ಡೆಕ್ಸ್‌ಟ್ರಿನ್‌ಗಳು/ಮಾಲ್ಟೋಡೆಕ್ಸ್‌ಟ್ರಿನ್‌ಗಳೊಂದಿಗೆ ಪ್ರೊಟೀನ್ ಪುಡಿಗಳನ್ನು ಗಮನಿಸಿ ತೆಗೆದುಕೊಳ್ಳಿ,
ಮಧುಮೇಹಿಗಳಿಗೆ
ಕಡಿಮೆ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಫೈಬರ್ ಇರುವ ಪ್ರೊಟೀನ್ ಅನ್ನು ಆಯ್ಕೆಮಾಡಿ.
ಗರ್ಭಿಣಿಯರು
ಕ್ಯಾಸೀನ್ ಅಥವಾ ಲ್ಯಾಕ್ಟೋಸ್ ಹೊಂದಿರುವ ಪುಡಿಗಳನ್ನು ತಪ್ಪಿಸಿ. ಬಟಾಣಿ ಪ್ರೋಟೀನ್ ಅಥವಾ ಪೀ ಪ್ರೊಟೀನ್ ಪ್ರಯತ್ನಿಸಿದರೆ ಒಳ್ಳೆಯದು.
ವಿಶೇಷ ಸೂಚನೆ: ಯಾವುದೇ ಪ್ರೋಟೀನ್ ಪೂರಕವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಪಡೆಯುವುದು ಉತ್ತಮ.
ಸಂಗ್ರಹ : SB
ಮೂಲ: KP