September 20, 2024

ಕೆಲವು ನವಜಾತ ಶಿಶುಗಳಲ್ಲಿ ಜಾಂಡೀಸ್ ಇರುತ್ತದೆ. ಇದನ್ನು ಫೋಟೋ ಥೆರಪಿಯನ್ನು ನೀಡುವ ಮೂಲಕ ಗುಣಪಡಿಸಲಾಗುತ್ತದೆ. ಈ ಕಾಮಾಲೆಯು ಎದೆಹಾಲು ಕುಡಿಯುವ ನವಜಾತ ಶಿಶುಗಳಲ್ಲಿ ಕಂಡುಬರುವುದು.

ನವಜಾತ ಶಿಶುಗಳಲ್ಲಿ ಕಾಮಾಲೆ ಅಥವಾ ಜಾಂಡೀಸ್‌ ಕಾಯಿಲೆಯ ಬಗ್ಗೆ ನೀವು ಕೇಳಿರಬಹುದು. ಅದಕ್ಕಾಗಿ ಕೆಲವರು ಮಗುವನ್ನು ಸ್ವಲ್ಪ ಹೊತ್ತು ಬೆಳಗ್ಗಿನ ಬಿಸಿಲಿಗೆ ಹಿಡಿಯುತ್ತಾರೆ. ನವಜಾತ ಶಿಶುವಿನ ಕಾಮಾಲೆ, ಅಧಿಕ ಬೈಲಿರುಬಿನ್ ಮಟ್ಟಗಳ ಸಂಕೇತವಾಗಿದೆ. ಇದು ಸಾಮಾನ್ಯವಾಗಿ ಮೊದಲ ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಪ್ರಸವಪೂರ್ವ ಅಥವಾ ತಡವಾಗಿ ಜನಿಸಿದ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಎದೆಹಾಲು ಕಾಮಾಲೆ ಎಂಬುದು ಒಂದು ರೀತಿಯ ಕಾಮಾಲೆಯಾಗಿದ್ದು ಅದು ಸ್ತನ್ಯಪಾನ ಮಾಡುವಾಗ ಶಿಶುಗಳಲ್ಲಿ ಕಂಡುಬರುತ್ತದೆ. ಮಕ್ಕಳಲ್ಲಿ ಯಕೃತ್(ಲಿವರ್) ಸರಿಯಾಗಿ ಬೆಳವಣಿಗೆ ಆಗದೆ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ .ಸ್ತನ್ಯಪಾನವನ್ನು ನಿಲ್ಲಿಸದೆಯೇ ಅದನ್ನು ಪರಿಹರಿಸಬಹುದು. 60% ರಿಂದ 80% ರಷ್ಟು ಶಿಶುಗಳು ಜಾಂಡೀಸ್ ಅನ್ನು ಹೊಂದಿರಬಹುದು.

ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳಲು ಕಾರಣಗಳು

  • ವಯಸ್ಕರಿಗೆ ಹೋಲಿಸಿದರೆ ಕೆಂಪು ರಕ್ತ ಕಣಗಳ ಕಡಿಮೆ ಜೀವಿತಾವಧಿ ಮತ್ತು ಹೆಚ್ಚಿನ ಕೆಂಪು ರಕ್ತ ಕಣಗಳ ಸಾಂದ್ರತೆಯ ಕಾರಣದಿಂದಾಗಿ ನವಜಾತ ಶಿಶುಗಳು ಬಿಲಿರುಬಿನ್ ಉತ್ಪಾದನೆಯ ಹೆಚ್ಚಿನ ಪ್ರಮಾಣವನ್ನು ಹೊಂದಿರುತ್ತವೆ.
  • ನವಜಾತ ಶಿಶುಗಳು ಅಪಕ್ವವಾದ ಯಕೃತ್ತಿನ ಕಾರ್ಯವನ್ನು ಹೊಂದಿದ್ದು, ಬೈಲಿರುಬಿನ್‌ನ ನಿಧಾನ ಚಯಾಪಚಯಕ್ಕೆ ಕಾರಣವಾಗುತ್ತದೆ.
  • ನವಜಾತ ಶಿಶುಗಳು ಮೆಕೊನಿಯಮ್ ಅಂಗೀಕಾರದಲ್ಲಿ ವಿಳಂಬವನ್ನು ಹೊಂದಿರಬಹುದು. ಇದು ಕರುಳಿನಲ್ಲಿ ಬೈಲಿರುಬಿನ್ ಅನ್ನು ಮರುಹೀರಿಕೆಗೆ ಕಾರಣವಾಗುತ್ತದೆ.
  • ಹೆಚ್ಚಿನ ನವಜಾತ ಶಿಶುಗಳಲ್ಲಿ, ಕಾಮಾಲೆಯನ್ನು “ಶಾರೀರಿಕ ಕಾಮಾಲೆ” ಎಂದು ಕರೆಯಲಾಗುತ್ತದೆ ಮತ್ತು ನಿರುಪದ್ರವವೆಂದು ಪರಿಗಣಿಸಲಾಗುತ್ತದೆ.

ಎದೆ ಹಾಲು ಕಾಮಾಲೆ

ಎದೆ ಹಾಲಿನ ಕಾಮಾಲೆಗೆ ಕಾರಣವಾಗುವ ನಿಖರವಾದ ಕಾರಣಗಳು ತಿಳಿದಿಲ್ಲವಾದರೂ, ತಾಯಿಯ ಹಾಲಿನಲ್ಲಿರುವ ವಸ್ತುಗಳು ಬಿಲಿರುಬಿನ್ ಅನ್ನು ಪ್ರಕ್ರಿಯೆಗೊಳಿಸಲು ಶಿಶುವಿನ ಯಕೃತ್ತಿನ ಸಾಮರ್ಥ್ಯವನ್ನು ಪ್ರತಿಬಂಧಿಸುತ್ತದೆ ಎಂದು ನಂಬಲಾಗಿದೆ.

ಜಾಂಡೀಸ್ ಇರುವ ಮಗುವಿಗೆ ಎದೆಹಾಲುಣಿಸಬಹುದೇ?

ಎದೆಹಾಲು ಮಗುವಿಗೆ ಕ್ಯಾಲೊರಿಗಳನ್ನು ಮತ್ತು ಜಲಸಂಚಯನವನ್ನು ಒದಗಿಸುತ್ತದೆ. ಇದು ತಾಯಿಯ ಹಾಲು ಪೂರೈಕೆಯನ್ನು ಸುಧಾರಿಸುತ್ತದೆ. ಜಲಸಂಚಯನವು ಮಗುವಿನ ದೇಹದಲ್ಲಿ ಬಿಲಿರುಬಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರರ್ಥ ಕಾಮಾಲೆ ಹೊಂದಿರುವ ಮಗುವಿಗೆ ಇದು ಪ್ರಯೋಜನಕಾರಿಯಾಗಿದೆ. ಕೆಲವು ಸಂದರ್ಭಗಳಲ್ಲಿ ಎದೆ ಹಾಲಿನ ಕಾಮಾಲೆ ರೋಗನಿರ್ಣಯವನ್ನು ಪತ್ತೆಹಚ್ಚಲು 12 ರಿಂದ 48 ಗಂಟೆಗಳ ಕಾಲ ಮಗುವಿಗೆ ಎದೆಹಾಲುಣಿಸುವುದನ್ನುನಿಲ್ಲಿಸಲಾಗುತ್ತದೆ.

ಸೈಕಲಾಜಿಕಲ್ ಜಾಂಡೀಸ್ ಮತ್ತು ಪೆಥಲಾಜಿಕಲ್ ಜಾಂಡೀಸ್

ಎರಡು ವಿಧದ ಕಾಮಾಲೆಯು ನವಜಾತ ಶಿಶುಗಳಲ್ಲಿ ಕಂಡುಬರುವುದು. ಇದರಲ್ಲಿ ಸೈಕಲಾಜಿಕಲ್ ಜಾಂಡೀಸ್ ಮತ್ತು ಪೆಥಲಾಜಿಕಲ್ ಜಾಂಡೀಸ್. ಇದರಲ್ಲಿ ಪೆಥಲಾಜಿಕಲ್ ಜಾಂಡೀಸ್ ನಲ್ಲಿ ಯಕೃತ್ ನಲ್ಲಿ ಯಾವುದಾದರೂ ಸೋಂಕು ಅಥವಾ ಯಾವುದೇ ಚಯಾಪಚಯ ಪರಿಸ್ಥಿತಿಯಲ್ಲಿ ತೊಂದರೆ ಇರಬಹುದು. ಪೆಥಲಾಜಿಕಲ್ ಜಾಂಡೀಸ್ ಆಗಿದ್ದರೆ ಚಿಂತಿಸಬೇಕಾಗುತ್ತದೆ.

ಫೋಟೊಥೆರಪಿ ಚಿಕಿತ್ಸೆ

  • ನಿಮ್ಮ ಮಗುವಿಗೆ ಸಾಕಷ್ಟು ಹಾಲು ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಮೊದಲ ದಿನದಿಂದ ಪ್ರಾರಂಭಿಸಿ ಪ್ರತಿ ದಿನ ಸುಮಾರು 10 ರಿಂದ 12 ಬಾರಿ ಮಗುವಿಗೆ ಹಾಲುಣಿಸಿ. ಮಗುವು ಎಚ್ಚರವಾದಾಗ, ಬೆರಳನ್ನು ಬಾಯಿಗೆ ಹಾಕುವುದು, ನಾಲಗೆಯನ್ನು ಚಪ್ಪರಿಸಿದಾಗ ಮಗುವಿಗೆ ಹಸಿವಾಗಿದೆ ಎಂದರ್ಥ. ಆಗ ಮಗುವಿಗೆ ಹಾಲನ್ನು ನೀಡಿ.
  • ಕಾಮಾಲೆಗೆ ಫೋಟೊಥೆರಪಿ ಸಾಮಾನ್ಯ ಚಿಕಿತ್ಸೆಯಾಗಿದೆ. ಫೋಟೋಥೆರಪಿ ನೀಡುವ ಮೂಲಕ ಮಗುವಿನ ಕಾಮಾಲೆಗೆ ಚಿಕಿತ್ಸೆ ನೀಡಲಾಗುತ್ತದೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *