ಮಶ್ರೂಮ್ ಮಸಾಲಾ
ರುಚಿಕರವಾದ ಮಶ್ರೂಮ್ ಮಸಾಲಾ ಮಾಡುವ ವಿಧಾನ…
ಬೇಕಾಗುವ ಪದಾರ್ಥಗಳು
- ಅಣಬೆ- 200 ಗ್ರಾಂ
- ಗಸಗಸೆ- 1 ಚಮಚ
- ಗೋಡಂಬಿ- 6-7
- ಹಸಿಮೆಣಸಿನ ಕಾಯಿ-3
- ಕಾಯಿ ತುರಿ- ಅರ್ಧ ಬಟ್ಟಲು
- ಎಣ್ಣೆ- 3 ಚಮಚ
- ಚಕ್ಕ, ಲವಂಗ-ಸ್ವಲ್ಪ
- ಪಲಾವ್ ಎಲೆ- 2
- ಜೀರಿಗೆ – 1 ಚಮಚ
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಬಟ್ಟಲು
- ಅರಿಶಿಣದ ಪುಡಿ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ದನಿಯಾ ಪುಡಿ- ಅರ್ಧ ಚಮಚ
- ಖಾರದ ಪುಡಿ – 1 ಚಮಚ
- ಜೀರಿಗೆ ಪುಡಿ – ಕಾಲು ಚಮಚ
- ತುಪ್ಪ- 2 ಚಮಚ
- ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
- ಗರಂ ಮಸಾಲಾ ಪುಡಿ – ಅರ್ಧ ಚಮಚ
ಮಾಡುವ ವಿಧಾನ…
- ಮೊದಲಿಗೆ ಮಿಕ್ಸಿ ಜಾರ್’ಗೆ ಗಸಗಸೆ, ಗೋಡಂಬಿ, ಹಸಿಮೆಣಸಿನ ಕಾಯಿ ಹಾಗೂ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
- ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಜೀರಿಗೆ ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಟೊಮೆಟೋವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
- ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣದ ಪುಡಿ, ಉಪ್ಪು, ದನಿಯಾ ಪುಡಿ, ಖಾರದ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಕುದಿಯಲು ಬಿಡಿ.
- ನಂತರ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಅಣಬೆ ಹಾಗೂ ರುಬ್ಬಿಕೊಂಡ ಮಿಶ್ರಣ ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ 10-15 ನಿಮಿಷ ನೀರು ಹಾಕಿ ಕುದಿಯಲು ಬಿಡಿ.
- ಪ್ಯಾನ್ ಒಂದಕ್ಕೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ಗರಂ ಮಸಾಲಾ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ಇದನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಶ್ರೂಮ್ ಮಾಸಾಲಾ ಸವಿಯಲು ಸಿದ್ಧ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಕೆ ಪಿ