Home Remedies: ಬಾಯಿಯ ದುರ್ವಾಸನೆ ತಡೆಯಲು ಸುಲಭ ಟಿಪ್ಸ್ ಇಲ್ಲಿದೆ ನೋಡಿ
ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಮತ್ತು ಪಾನೀಯದ ಕಾರಣದಿಂದಲೂ ಸಹ ಬಾಯಿ ದುರ್ವಾಸನೆ ಉಂಟಾಗುತ್ತದೆ. ನಿಮ್ಮ ಬಾಯಿಯಲ್ಲಿ ಆಹಾರದ ಕಣಗಳು ಹೆಚ್ಚು ಕಾಲ ಉಳಿಯುವುದು. ಮತ್ತು ಹೆಚ್ಚು ಬ್ಯಾಕ್ಟೀರಿಯಾಗಳು ಅಲ್ಲಿ ಬೆಳೆಯುತ್ತವೆ. ಇದು ಕೆಟ್ಟ ವಾಸನೆ ಉಂಟು ಮಾಡುತ್ತದೆ.
ರಾತ್ರಿ (Night) ವೇಳೆ ಹಲ್ಲುಜ್ಜಿದ (Brush) ನಂತರ ಮಲಗುವುದು (Sleeping) ಮೂಲಭೂತ ನೈರ್ಮಲ್ಯದ ಒಂದು ಭಾಗ (Part) ಆಗಿದೆ. ಎಲ್ಲರೂ ಬೆಳಗ್ಗೆ (Morning) ಹಲ್ಲುಜ್ಜುತ್ತಾರೆ. ಆದರೆ ರಾತ್ರಿಯೂ ಸಹ ಹಲ್ಲುಜ್ಜುವುದು ತುಂಬಾ ಮುಖ್ಯ. ಆದರೆ ಅನೇಕ ಜನರು ರಾತ್ರಿ ಹಲ್ಲುಜ್ಜಿ ಶುಚಿಯಾದರೂ ಬೆಳಗ್ಗೆ ಎದ್ದಾಗ ಅವರ ಬಾಯಿಯಿಂದ ದುರ್ಗಂಧ ಬರುತ್ತದೆ. ರಾತ್ರಿ ಮಲಗಿ ಬೆಳಿಗ್ಗೆ ಎಚ್ಚರಗೊಂಡಾಗ ಅನೇಕ ಜನರಿಗೆ ಬಾಯಿಯ ದುರ್ವಾಸನೆ ಅಥವಾ ಕೆಟ್ಟ ವಾಸನೆ ಇರುತ್ತದೆ. ಇದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಹೀಗೆ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಬಾಯಿಯ ದುರ್ನಾತ ಬೀರುವ ಮೊದಲ ವ್ಯಕ್ತಿ ನೀವಲ್ಲ.
ಬಾಯಿಯ ದುರ್ಗಂಧ
ಯಾಕೆಂದರೆ ಈ ಸಮಸ್ಯೆ ತುಂಬಾ ಜನರಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಮತ್ತು ಪಾನೀಯದ ಕಾರಣದಿಂದಲೂ ಸಹ ಬಾಯಿ ದುರ್ವಾಸನೆ ಉಂಟಾಗುತ್ತದೆ. ನಿಮ್ಮ ಬಾಯಿಯಲ್ಲಿ ಆಹಾರದ ಕಣಗಳು ಹೆಚ್ಚು ಕಾಲ ಉಳಿಯುವುದು. ಮತ್ತು ಹೆಚ್ಚು ಬ್ಯಾಕ್ಟೀರಿಯಾಗಳು ಅಲ್ಲಿ ಬೆಳೆಯುತ್ತವೆ. ಇದು ಕೆಟ್ಟ ವಾಸನೆ ಉಂಟು ಮಾಡುತ್ತದೆ.
ಉತ್ತಮ ಮೌಖಿಕ ದಿನಚರಿ ಕಾಪಾಡುವುದು
ಕೆಲವೊಮ್ಮೆ ಬೆಳಿಗ್ಗೆ ಬಾಯಿಯ ದುರ್ವಾಸನೆಯು ಬಾಯಿಯ ನೈರ್ಮಲ್ಯದ ಬಗ್ಗೆ ಕಡಿಮೆ ಗಮನ ಹರಿಸುವುದರಿಂದ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಕೆಟ್ಟ ಉಸಿರಾಟವನ್ನು ತಡೆಗಟ್ಟುವ ಅತ್ಯುತ್ತಮ ಮಾರ್ಗವಾಗಿದೆ.
ಬಾಯಿಯಿಂದ ಆಹಾರದ ಕಣಗಳನ್ನು ತೆಗೆದು ಹಾಕಲು, ಹಲ್ಲುಗಳ ನಡುವೆ ಫ್ಲೋಸ್ ಮಾಡಿ ಮತ್ತು ಕನಿಷ್ಠ ಎರಡು ನಿಮಿಷಗಳ ಕಾಲ ಹಲ್ಲುಗಳನ್ನು ಬ್ರಷ್ ಮಾಡಿ. ಒಸಡು, ನಾಲಿಗೆ ಮತ್ತು ನಿಮ್ಮ ಕೆನ್ನೆಯ ಒಳಭಾಗವನ್ನು ಮೃದುವಾಗಿ ಬ್ರಷ್ ಮಾಡಿ.
ಸದಾ ದೇಹವನ್ನು ಹೈಡ್ರೀಕರಿಸಿ
ರಾತ್ರಿ ಎಂಟು ಗಂಟೆಗಳ ನಿದ್ದೆಯಿಂದ ಎದ್ದಾಗ ನಿಮ್ಮ ಬಾಯಿ ಒಣಗಿರುತ್ತದೆ. ಯಾರೊಬ್ಬರ ಬಾಯಿಯಲ್ಲಿ ಲಾಲಾರಸ ಇದ್ದರೆ, ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ. ಈಗ ಯಾರಿಗಾದರೂ ಬಾಯಿ ಒಣಗಿದ್ದರೆ ಬ್ಯಾಕ್ಟೀರಿಯಾಗಳು ಪ್ರವರ್ಧಮಾನಕ್ಕೆ ಬರುತ್ತವೆ. ಮತ್ತು ಅವು ಬಾಯಿಯ ದುರ್ವಾಸನೆ ಉಂಟು ಮಾಡಬಹುದು.
ಆದಾಗ್ಯೂ, ನಾವು ಮಲಗಿದಾಗ ಲಾಲಾರಸದ ಉತ್ಪಾದನೆ ಕಡಿಮೆಯಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಎದ್ದ ತಕ್ಷಣ ನಮಗೆ ಬಾಯಾರಿಕೆ ಆಗುತ್ತದೆ. ಯಾವಾಗಲೂ ನಿಮ್ಮನ್ನು ಚೆನ್ನಾಗಿ ಹೈಡ್ರೀಕರಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ.
ಬಲವಾದ ವಾಸನೆಯುಕ್ತ ಆಹಾರ ಸೇವನೆ ಕಡಿಮೆ ಮಾಡಿ
ನೀವು ಸಂಜೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಲು ಬಯಸಿದರೆ, ಮರುದಿನ ಬೆಳಿಗ್ಗೆ ಅವು ಬಾಯಿಯ ದುರ್ವಾಸನೆ ಉಂಟು ಮಾಡಬಹುದು. ರಾತ್ರಿಯಲ್ಲಿ ಯಾವಾಗಲೂ ಸಮತೋಲಿತ ಆಹಾರ ಸೇವಿಸಿ. ಇದು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
ಪ್ರತಿದಿನ ಕಿತ್ತಳೆ ತಿನ್ನಿರಿ
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇದೆ. ಇದು ಹಲ್ಲು ಬಿಳಿಯಾಗಲು ಉತ್ತೇಜಿಸುತ್ತದೆ. ವಿಟಮಿನ್ ಸಿ ಲಾಲಾರಸದ ಉತ್ಪಾದನೆ ಹೆಚ್ಚಿಸುತ್ತದೆ. ಮತ್ತು ಬಾಯಿಯ ದುರ್ವಾಸನೆ ತಡೆಯಲು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಭರಿತ ಮೊಸರು ಸೇವನೆ
ಮೊಸರು ಲ್ಯಾಕ್ಟೋಬ್ಯಾಸಿಲಸ್ ಎಂಬ ಆರೋಗ್ಯಕರ ಬ್ಯಾಕ್ಟೀರಿಯಾ ಹೊಂದಿದೆ. ಇದು ನಿಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸಿ ಮತ್ತು ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತದೆ. ಸುವಾಸನೆಯ ಮೊಸರಿನ ಬದಲು ಸಾದಾ, ಕ್ಯಾಲ್ಸಿಯಂ-ಸಮೃದ್ಧ, ಕೊಬ್ಬು ರಹಿತ ಮೊಸರು ತಿನ್ನಿರಿ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: N 18