November 25, 2024
1

ಈ ಸೋರೆಕಾಯಿ ಜ್ಯೂಸ್‌‌ ಸಕ್ಕರೆ ಕಾಯಿಲೆ ಕಂಟ್ರೋಲ್ ಮಾಡುವ ಟಾನಿಕ್ ಇದ್ದ ಹಾಗೆ!

ತನ್ನಲ್ಲಿ ಅಧಿಕ ಪ್ರಮಾಣದ ನೀರಿನಂಶವನ್ನು ಒಳಗೊಂಡಿರುವ ಈ ಸೋರೆಕಾಯಿ, ಹಲವಾರು ಔಷಧೀಯ ಗುಣಗಳನ್ನು ಒಳಗೊಂಡಿರುವ ಜೊತೆಗೆ ಸಕ್ಕರೆ ಕಾಯಿಲೆ ರೋಗಿಗಳಿಗೆ ಹೇಳಿ ಮಾಡಿಸಿದ.

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಆಹಾರ ಪದ್ಧತಿಯ ವಿಷ್ಯಕ್ಕೆ ಬರುವುದಾದರೆ, ಎಷ್ಟು ಎಚ್ಚರಿಕೆ ವಹಿಸುತ್ತಾರೋ ಅಷ್ಟು ಒಳ್ಳೆಯದು. ಮುಖ್ಯವಾಗಿ ಸಕ್ಕರೆ ಅಂಶ ಕಡಿಮೆ ಇರುವ ಆಹಾರಗಳ ಜೊತೆಗೆ ನೀರಿನಾಂಶ ಹೆಚ್ಚಿರುವ ಆಹಾರಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ವೈದ್ಯರು ಕೂಡ ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳನ್ನು, ಹಣ್ಣುಗಳನ್ನು ಮಧುಮೇಹ ಇರುವವರು ಹೆಚ್ಚಾಗಿ ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಅದು ನೀರಿನಾಂಶ ಹೆಚ್ಚಿರುವ ಸೋರೆಕಾಯಿ!

ಹೌದು ಬಳ್ಳಿಯಲ್ಲಿ ಬೆಳೆಯುವ ಸೋರೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಅದರಲ್ಲೂತನ್ನಲ್ಲಿ ಅಧಿಕ ಪ್ರಮಾಣದ ನೀರಿನಂಶವನ್ನು ಒಳ ಗೊಂಡಿರುವ ಈ ತರಕಾರಿ ಮಧುಮೇಹಿಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಸಕ್ಕರೆಕಾಯಿಲೆ ಇರುವವರು ಪ್ರತಿದಿನ ಬೆಳಗ್ಗೆ ಸೋರೆಕಾಯಿಯ ಜ್ಯೂಸ್‌ಗೆ ಸ್ವಲ್ಪ ಜೀರಿಗೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ರಕ್ತದಲ್ಲಿ ಸಕ್ಕರೆ ಮಟ್ಟ ಕೂಡ ನಿಯಂತ್ರಣಕ್ಕೆ ಬರುತ್ತದೆ.. ಮುಂದೆ ಓದಿ

ಈ ಸೋರೆಕಾಯಿಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ.

  • ನೋಡಲು ದೊಣ್ಣೆಯಾಕಾರದಲ್ಲಿರುವ ಈ ಸೋರೆಕಾಯಿ, ತನ್ನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕ ಸತ್ವ ಗಳನ್ನು ಒಳಗೊಂಡಿರುವ ಜೊತೆಗೆ ನೀರಿನಾಂಶದ ಪ್ರಮಾಣ ಕೂಡ ಯಥೇಚ್ಛವಾಗಿ ಈ ತರಕಾರಿ ಯಲ್ಲಿ ಕಂಡು ಬರುತ್ತದೆ. ಅಷ್ಟೇ ಯಾಕೆ ತನ್ನಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳನ್ನು ಒಳಗೊಂಡಿರುವುದರಿಂದ ದೇಹದ ತೂಕ ಇಳಿಸುವಲ್ಲಿಯೂ ಕೂಡ ಸಹಾಯಕ್ಕೆ ಬರುತ್ತದೆ
  • ಇನ್ನು ಈ ತರಕಾರಿಯಲ್ಲಿ ನೀರಿನಾಂಶ ಹೆಚ್ಚಿರುವ ಜೊತೆಗೆ ನಾರಿನಾಂಶ ಕೂಡ, ಯಥೇಚ್ಛವಾಗಿ ಸಿಗುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆಯನ್ನು ಕೂಡ ಕೂಡ ದೂರ ಮಾಡುತ್ತದೆ
  • ಇನ್ನು ಈ ತರಕಾರಿಯಲ್ಲಿ ಆರೋಗ್ಯಕ್ಕೆ ಪ್ರಮುಖವಾಗಿ ಬೇಕಾಗಿರುವ ಅಂಶಗಳಾದ ಸೋಡಿಯಂ ಮತ್ತು ಪೊಟಾಶಿಯಮ್ ಅಂಶ ಹೇರಳವಾಗಿ ಸಿಗುವುದರಿಂದ, ರಕ್ತದಲ್ಲಿ ಏರುಪೇರಾಗದಂತೆ ನೋಡಿಕೊಂಡು, ಆರೋಗ್ಯದಲ್ಲಿ ಕಂಡು ಬರುವ ನಿಶ್ಯಕ್ತಿಯನ್ನು ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.

ವಿಟಮಿನ್‍ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ

  • ವಿಟಮಿನ್‍ ಸಿ ಹೆಚ್ಚಿರುವ ಆಹಾರ ಪದಾರ್ಥಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಅಂತೆಯೇ ಈ ಸೋರೆಕಾಯಿಯಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಬಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಅಷ್ಟೇ ಅಲ್ಲದೆ ಕಬ್ಬಿಣಾಂಶ ಹಾಗೂ ಪೊಟ್ಯಾಶಿಯಮ್ ಅಂಶ ಕೂಡ ಯಥೇಚ್ಛವಾಗಿ ಕಂಡು ಬರುವು ದರಿಂದ ದೇಹದಲ್ಲಿ ರಕ್ತಹೀನತೆ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆ ಕಡಿಮೆ ಆಗುವುದರ ಜೊತೆಗೆ,ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು, ಮಧುಮೇಹ ಸಮಸ್ಯೆ ಕಂಟ್ರೋಲ್‌ಗೆ ಬರುತ್ತದೆ.

ಇನ್ನು ಸಕ್ಕರೆಕಾಯಿಲೆ ನಿಯಂತ್ರಣ ಮಾಡುವ ವಿಷ್ಯಕ್ಕೆ ಬರುವುದಾದರೆ

  • ನಮಗೆಲ್ಲಾ ಗೊತ್ತೇ ಇರುವ ಹಾಗೆ, ಹಲವಾರು ಹಸಿರೆಲೆ ತರಕಾರಿಗಳು, ತನ್ನಲ್ಲಿ ಹಲವಾರು ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವುದರಿಂದ ಇದು ಅನಾರೋಗ್ಯವನ್ನು ದೂರವಿಡುವಲ್ಲಿ ತುಂಬಾ ಸಹಕಾರಿ ಆಗಿದೆ. ಅಂತಹ ತರಕಾರಿಗಳಲ್ಲಿ ಬಳ್ಳಿಯಲ್ಲಿ ಬೆಳೆಯುವ ಈ ಸೋರೆಕಾಯಿ ಕೂಡ ಒಂದು.
  • ಹೌದು ಸಕ್ಕರೆಕಾಯಿಲೆ ಇರುವವರು ಈ ತರಕಾರಿಯ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ರಕ್ತದಲ್ಲಿ ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಸಕ್ಕರೆ ಕಾಯಿಲೆ ಕೂಡ ನಿಯಂತ್ರಣದಲ್ಲಿರುತ್ತದೆ.

ಸಕ್ಕರೆಕಾಯಿಲೆ ಇರುವವರು ಸೋರೆಕಾಯಿ ಸೇವಿಸುವ ವಿಧಾನ ಹೇಗೆ?

ಸಕ್ಕರೆಕಾಯಿಲೆ ಇರುವವರು ಸೋರೆಕಾಯಿಯನ್ನು ನಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವ ವಿಧಾನ ಹೇಗೆ ಎಂದರೆ, ವಾರಕ್ಕೆ ಒಂದೆರಡು ಬಾರಿ ಇದರ ಆದರೂ ಪಲ್ಯ ಅಥವಾ ಸಾಂಬರ್ ಮಾಡಿ ಕೊಂಡರೆ ಒಳ್ಳೆಯದು. ಅಷ್ಟೇ ಅಲ್ಲದೆ ಪ್ರತಿದಿನ ಇದರ ಜ್ಯೂಸ್ ಮಾಡಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *