ಪೈನಾಪಲ್ ಹಲ್ವಾ
ಬೇಕಾಗುವ ಪದಾರ್ಥಗಳು
- ಪೈನಾಪಲ್- 1
- ಕಾರ್ನ್ ಫ್ಲೋರ್ – 1 ಬಟ್ಟಲು
- ಸಕ್ಕರೆ- 2 ಬಟ್ಟಲು
- ದ್ರಾಕ್ಷಿ- ಸ್ವಲ್ಪ
- ಗೋಡಂಬಿ- ಸ್ವಲ್ಪ
- ಬಾದಾಮಿ- ಸ್ವಲ್ಪ
- ಕೇಸರಿ ದಳ ಅಥವಾ ಫುಡ್ ಕಲರ್ – ಸ್ವಲ್ಪ
- ತುಪ್ಪ- 1 ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
ಮಾಡುವ ವಿಧಾನ…
- ಮೊದಲಿಗೆ ಪೈನಾಪಲ್ ತೆಗೆದುಕೊಂಡು ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸಿ ಜಾರ್’ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಪೈನಾಪಲ್ ನ್ನು ಉಂಡೆಗಳಿಲ್ಲದಂತೆ ಸೋಸಿಕೊಳ್ಳಿ.
- ನಂತರ ಇದಕ್ಕೆ ಕಾರ್ನ್ ಫ್ಲೋರ್ ಹಾಕಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ. ಬಳಿಕ ಒಂದು ಬಟ್ಟಲು ನೀರು ಹಾಕಿ ಮಿಶ್ರಣ ಮಾಡಿ.
- ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ಒಂದು ಸಣ್ಣಬಟ್ಟಲು ನೀರು ಹಾಕಿ ಸಕ್ಕರೆ ಕರಗಲು ಬಿಡಿ. ನಂತರ ಒಂದು ನಿಮಿಷ ಕುದಿಸಿಕೊಂಡು ಪೈನಾಪಲ್-ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿಟ್ಟು ಸ್ಫೂನ್ ನಲ್ಲಿ ಕೈಯಾಡಿಸುತ್ತಲೇ ಇರಿ.
- ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಕೇಸರಿ ದಳ ಅಥವಾ ಫುಡ್ ಕಲರ್, ಏಲಕ್ಕಿ ಪುಡಿ ಹಾಕಿ ಕಲಸಿಕೊಳ್ಳಿ. ನಿಧಾನಗತಿಯಲ್ಲಿ ತುಪ್ಪವನ್ನು ಸ್ವಲ್ಪ, ಸ್ವಲ್ಪವೇ ಹಾಕಿ ಮಿಶ್ರಣ ಮಾಡಿಕೊಳ್ಳಿ.
- ಕೊನೆಯಲ್ಲಿ ಸಣ್ಣಗೆ ಕತ್ತರಿಸಿಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿ ಚೂರುಗಳನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪೈನಾಪಲ್ ಹಲ್ವಾ ಸವಿಯಲು ಸಿದ್ಧ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಕೆ ಪಿ