ನುಗ್ಗೆಕಾಯಿ ಸೂಪ್
ಬೇಕಾಗುವ ಪದಾರ್ಥಗಳು
- ನುಗ್ಗೆಕಾಯಿ- 2-3
- ಟೊಮೆಟೋ- 1
- ಶುಂಠಿ- ಸ್ವಲ್ಪ
- ಬೆಳ್ಳುಳ್ಳಿ-ಸ್ವಲ್ಪ
- ಈರುಳ್ಳಿ-1
- ಉಪ್ಪು-ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ- ಅರ್ಧ ಚಮಚ
- ಜೀರಿಗೆ ಪುಡಿ- 1 ಚಮಚ
- ಕಾಳುಮೆಣಸಿನ ಪುಡಿ- 1 ಚಮಚ
- ಕೊತ್ತಂಬರಿ ಸೊಪ್ಪು-ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
ಮಾಡುವ ವಿಧಾನ…
- ನಾರು ತೆಗೆದು ಚೆನ್ನಾಗಿ ತೊಳೆದು ಕತ್ತರಿಸಿದ ನುಗ್ಗೆಕಾಯಿಗಳನ್ನು ಕುಕ್ಕರ್’ಗೆ ಹಾಕಿ, ಮೇಲಿನ ಎಲ್ಲಾ ಪದಾರ್ಥಗಳನ್ನೂ ಹಾಕಿ 3 ಕೂಗು ಕುಗಿಸಿಕೊಳ್ಳಿ
- ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾಯಿ ತಿರುಳನ್ನು ಸಿಪ್ಪೆಯಿಂದ ತೆಗೆಯಿರಿ. ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ರುಚಿಕರವಾದ ನುಗ್ಗೆಕಾಯಿ ಸೂಪ್ ಸವಿಯಲು ಸಿದ್ಧ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಕೆ ಪಿ