November 21, 2024
70-300x250

              ನ್ನು ಕೆಲ ದಿನಗಳ ಕಾಲ ನಾಡಿನಾದ್ಯಂತ ದಸರಾ ಸಂಭ್ರಮ ಗರಿಗೆದರಲಿದ್ದು, ಇದಕ್ಕೆ ಮಂಗಳೂರು ನಗರವೂ ಪೂರ್ಣ ರೀತಿಯಲ್ಲಿ ಸಜ್ಜುಗೊಂಡಿದೆ. ಮೈಸೂರು ದಸರಾದಂತೆ ಮಂಗಳೂರು ದಸರಾವೂ ಖ್ಯಾತಿಯನ್ನು ಗಳಿಸಿದ್ದು, ನಗರದಾದ್ಯಂತ ಕಂಗೊಳಿಸುವ ವಿದ್ಯುತ್ ದೀಪಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಲಿದೆ..

         ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಸೇರಿದಂತೆ ನಗರದ ಬಹುತೇಕ ದೇವಾಲಯಗಳಲ್ಲಿ ನವರಾತ್ರಿ ಉತ್ಸವ ಅತ್ಯಂತ ವೈಭವದಿಂದ ಜರಗಲಿದೆ. ವಿವಿಧ ವಿಶೇಷ ಪೂಜೆಗಳು, ವೈದಿಕ ವಿಧಿವಿಧಾನಗಳು ಭಕ್ತ ಜನಮಾನಸದ ಇಷ್ಟದಂತೆ ನೆರವೇರಲಿದೆ. ಸಾಂಸ್ಕೃತಿಕ ವೈಭವಗಳು ಕಲಾರಸಿಕರ ಮನಗೆಲ್ಲಲಿದೆ..
 
ವೇಷಗಳ ವೈಭವ
         ನವರಾತ್ರಿ ಎಂದರೆ ನಮಗೆ ಮುಖ್ಯವಾಗಿ ನೆನಪಾಗುವುದು ವಿವಿಧ ವೇಷಗಳು ಸಹಿತ ಹುಲಿ ಕುಣಿತ ಸಹಿತ ತಾಸೆ-ಡೋಲಿನ ಸದ್ದುಗದ್ದಲ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಈಪದ್ಧತಿಯು ಪ್ರಸ್ತುತ ಆಧುನಿಕ ಸ್ಪರ್ಶವನ್ನು ಪಡೆದಿದ್ದರೂ ತನ್ನ ಮೂಲ ಉದ್ದೇಶದೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ನಡೆಯುವುದು ಹೆಮ್ಮೆಯ ವಿಚಾರವಾಗಿದೆ.
    ಈ ನಿಟ್ಟಿನಲ್ಲಿ ಮಂಗಳೂರು ನಗರವೂ ಸೇರಿದಂತೆ ಎಲ್ಲಡೆ ಹುಲಿ ವೇಷಗಳ ಜತೆಗೆ ಇತರ ಸಣ್ಣಪುಟ್ಟ ವೇಷಗಳು ತಮ್ಮ ಕರಾಮತ್ತು ಪ್ರದರ್ಶಿಸಲಿವೆ. ಹುಲಿವೇಷಗಳ ಸಾಹಜಮಯ ಪ್ರದರ್ಶನ, ಮೈನವಿರೇಳಿಸುವ ಕುಣಿತಗಳು ನೋಡುಗರನ್ನು ಆಕರ್ಷಿಸಲಿದೆ.
         ಮಂಗಳೂರು ದಸರಾದ‌ ಅಂಗವಾಗಿ ವಿವಿಧ ಸಂಘಟನೆಗಳಿಂದ ಹುಲಿವೇಷ ಪ್ರದರ್ಶನ, ಹುಲಿವೇಷ ಸ್ಪರ್ಧೆಯೂ ಆಯೋಜನೆಗೊಂಡಿದೆ. ದಸರಾ ಶೋಭಾಯಾತ್ರೆಯ ಸಂದರ್ಭದಲ್ಲಿ ಹುಲಿವೇಷಗಳ ಸ್ತಬ್ದಚಿತ್ರಗಳು ನೋಡುಗರಿಗೆ ಮೆರುಗನ್ನು ನೀಡಲಿದೆ.
 
ಕುದ್ರೋಳಿ ಕ್ಷೇತ್ರ
         ದಸರಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಕುದ್ರೋಳಿ ಕ್ಷೇತ್ರವೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ಅತ್ಯಂತ ವೈಭವದ ಕ್ಷೇತ್ರವಾಗಿರುವ ಕುದ್ರೋಳಿಯು ದಸರಾ ಸಂದರ್ಭ ತನ್ನ ಮೆರುಗನ್ನು ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಹೀಗಾಗಿಯೇ ದಸರಾ ಸಂದರ್ಭದಲ್ಲಿ ಕುದ್ರೋಳಿಗೆ ಆಗಮಿಸುವ ಭಕ್ತಾಧಿಗಳು, ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.
       ಕ್ಷೇತ್ರವು ಒಂದೆಡೆ ವಿದ್ಯುತ್ ದೀಪಗಳಿಂದ, ಮತ್ತೊಂದೆಡೆ ಸಾಂಸ್ಕೃತಿಕ ವೈಭವದಿಂದ ಕಂಗೊಳಿಸುತ್ತಿರುತ್ತದೆ. ದೇವಳದ ಒಳಗಿನಿಂದ ನವದುರ್ಗೆಯರ ಆರಾಧನೆಯ ಜತೆಗೆ ಗಣೇಶನ ವಿಗ್ರಹದ ಆರಾಧನೆಯೂ ನಡೆಯುತ್ತದೆ. ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಗಣ್ಯಾತಿಗಣ್ಯರ ದಂಡು ದಸರಾ ವೈಭವಕ್ಕೆ ಹೆಚ್ಚಿನ ರಂಗನ್ನು ನೀಡುತ್ತದೆ.
ಅದ್ದೂರಿಯ ಶೋಭಾಯಾತ್ರೆ
          ಮಂಗಳೂರು ದಸರಾದ ಪ್ರಮುಖ ಆಕರ್ಷಣೆಯೇ  ಅದ್ದೂರಿಯ ಶೋಭಾಯಾತ್ರೆ. ನವರಾತ್ರಿಯ ಉತ್ಸವದಲ್ಲಿ ಆರಾಧಿಸಲ್ಪಟ್ಟ ಗಣೇಶ ಸಹಿತ ನವದುರ್ಗೆಯರನ್ನು ಹತ್ತನೇ ದಿನ ಮೆರವಣಿಗೆ ಮೂಲಕ ಕೊಂಡಿಯ್ಯಲಾಗುತ್ತದೆ. ಇದನ್ನು ಕಣ್ತುಂಬಿ ಕೊಳ್ಳುವುದಕ್ಕೆ ಲಕ್ಷಾಂತರ ಮಂದಿ ಸೇರುತ್ತಾರೆ. ಮೆರವಣಿಗೆಯಲ್ಲಿ ಸಾಗುವ ಸ್ತಬ್ದಚಿತ್ರಗಳು, ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಸೌಂದರ್ಯಕ್ಕೆ ಸಾಕ್ಷಿಯಾಗುತ್ತದೆ.
          ಈ ರೀತಿಯಲ್ಲಿ ವಿಗ್ರಹಗಳನ್ನು ಮೆರವಣಿಗೆಯಲ್ಲಿ ನಗರ ಪ್ರದಕ್ಷಿಣೆ ಮಾಡಿಸಿ ಕುದ್ರೋಳಿ ಕ್ಷೇತ್ರದ ಕೆರೆಯಲ್ಲಿ ಜಲಸ್ತಂಬನ ಮಾಡಲಾಗುತ್ತದೆ. ಇಂತಹ ಸೌಂದರ್ಯಕ್ಕೆ ಸಾಕ್ಷಿಯಾಗಲು ನೀವೂ ಬರಬೇಲ್ಲವೆ..ಬನ್ಬಿ ಮಂಗಳೂರಿನತ್ತ…
 
✍: ಕಿರಣ್ ಸರಪಾಡಿ

Leave a Reply

Your email address will not be published. Required fields are marked *