November 25, 2024
6B77C47E-983F-4CD9-9204-FC087F25BF34

ಮೀನು ಪ್ರಿಯರಿಗೆ-ಫ್ರೈ ಫಿಶ್ ಫಿಲೆಟ್ಸ್ ರೆಸಿಪಿ!

ಮೀನು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರವನ್ನು ನೀಡುತ್ತದೆ. ಮಾಂಸಹಾರಿಗಳು ಹೆಚ್ಚು ಕೆಂಪು ಮಾಂಸವನ್ನು ಸೇವಿಸುವ ಬದಲು ಮೀನನ್ನು ಹೆಚ್ಚಾಗಿ ಸೇವಿಸುವುದರಿಂದ ಹಲವಾರು ರೀತಿಯ ಪೋಷಕಾಂಶಗಳು ಮತ್ತು ಆರೋಗ್ಯಕ್ಕೆ ಉತ್ತಮವಾದ ಪ್ರಯೋಜನಗಳನ್ನು ನೀಡುವಂತಹ ಕೊಬ್ಬಿನ ಅಂಶ ದೊರೆಯುತ್ತದೆ.ಇದರಲ್ಲಿ ಮೆಗ್ನೀಷಿಯಂ, ಪಾಸ್ಪರಸ್, ಸೋಡಿಯಂ, ಸತು, ತಾಮ್ರ ಮತ್ತು ಸೆಲೆನಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರಮುಖವಾಗಿ ಮೀನಿನಲ್ಲಿರುವ ಒಮೆಗಾ – 3 ಚರ್ಮದ ಆರೈಕೆಯಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಚರ್ಮದ ಉರಿಯೂತವನ್ನು ಕಡಿಮೆ ಮಾಡಿ ಉತ್ತಮವಾದ ಚರ್ಮವನ್ನು ನೀಡುತ್ತದೆ.ಫ್ರೈಡ್ ಫಿಶ್ ಫಿಲೆಟ್ಸ್ ಅತ್ಯುತ್ತಮ ಸಂಜೆ ತಿಂಡಿಯಾಗಿದೆ. ಕೆಲವೇ ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಇದು ಮೀನು ಮತ್ತು ಮಸಾಲೆಗಳ ಸರಳ ಮಿಶ್ರಣವಾಗಿದೆ. ಇದಕ್ಕೆ ಉಪಯೋಗಿಸುವ ಮಸಾಲೆಗಳು ಮತ್ತು ತಯಾರಿಸುವ ವಿಧಾನವೂ ಬಾಯಲ್ಲಿ ನೀರೂರಿಸುತ್ತದೆ.

(ಬಡಿಸುವ ಪ್ರಮಾಣ: 2)
ಪ್ರಮುಖ ಸಾಮಗ್ರಿ
250 ಗ್ರಾಮ್ಸ್‌ ಮೀನು
ಮುಖ್ಯ ಅಡುಗೆಗೆ
ಅಗತ್ಯಕ್ಕೆ ತಕ್ಕಷ್ಟು ಉಪ್ಪು
1 ಚಮಚ ಬೆಳ್ಳುಳ್ಳಿ ಪುಡಿ
1 ಚಮಚ ಖಾರದ ಪುಡಿ
1/2 ಚಮಚ ಕರಿಮೆಣಸು
1/2 ಚಮಚ ನಿಂಬೆ ಜ್ಯೂಸ್
ಒಗ್ಗರಣೆೆ
ಅಗತ್ಯಕ್ಕೆ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ

ಹೇಗೆ ಮಾಡುವುದು: ಮೀನು ಪ್ರಿಯರಿಗೆ-ಫ್ರೈ ಫಿಶ್ ಫಿಲೆಟ್ಸ್ ರೆಸಿಪಿ!

  • 30mTotal Time
  • 15mPrep Time
  • 199Calories

Step 1:

ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಳ್ಳಿ, ಮೀನನ್ನು ಚೆನ್ನಾಗಿ ತೊಳೆದು ಕೊಂಡ ನಂತರ ಉಪ್ಪು, ನಿಂಬೆರಸ, ಬೆಳ್ಳುಳ್ಳಿ, ಕೆಂಪು ಮೆಣಸಿನ ಪುಡಿ, ಈ ಎಲ್ಲಾ ಪದಾರ್ಥಗಳನ್ನು ಇದಕ್ಕೆ ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಮೀನಿನ ಜೊತೆಗೆ ಸೇರಿಸಿದ ನಂತರ ಚೆನ್ನಾಗಿ ಮಿಶ್ರಣ ಮಾಡಿ . ಈ ರೀತಿ ಮಿಶ್ರಣ ಮಾಡಿದ ಇದನ್ನು ರೆಫ್ರಿಜರೇಟರ್ ನಲ್ಲಿ ಒಂದು ಗಂಟೆ ಮ್ಯಾರಿನೆಟ್ ಮಾಡಿ. ಈ ರೀತಿ ಮಿಶ್ರಣ ಮಾಡಿದ ಮೀನನ್ನು ರೆಫ್ರಿಜರೆಟ್ ಮಾಡುವುದರಿಂದ ನೀವು ತಯಾರಿಸುವ ಮೀನಿನ ರೆಸಿಪಿ ಹೆಚ್ಚು ಗರಿಗರಿಯಾಗಿರುತ್ತದೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *