ಬೇಕುಗಳ ಬೆನ್ನಟ್ಟಿ…….
ಸ್ವಚ್ಛಂದ ಸುಂದರ ಪರಿಸರ
ನಮ್ಮೀ ಪ್ರಕೃತಿ ಮಂದಿರ
ಬಳುಕುವ ವೃಕ್ಷ ಉಯ್ಯಾಲೆ
ನಲಿದಾಡುವ ಪ್ರಾಣಿ ಮಾಲೆ
ಕಂಗೊಳಿಸುತಿಹ ಪಚ್ಚೆ ಸಾಲೆ
ಸಲಹುತಿದೆ ಅನೇಕ ಜೀವರಾಶಿಗಳ
ಅದೆಷ್ಟು ಸುಂದರ ತಾಣ
ಕಣ್ತಂಪುಗೊಳಿಸೋ ಹಸಿರು ವರ್ಣ
ಬಲಿಯಾಗುತ್ತಿದೆ ಮನುಷ್ಯರ ಸ್ವಾರ್ಥಕ್ಕೆ
ಧರೆಗುರಳಿವೆ ಮರಮುಟ್ಟುಗಳು
ತಲೆಯೆತ್ತಿವೆ ಬೃಹತ್ ಕಟ್ಟಡಗಳು
ಕಣ್ಮರೆಯಾಗುತ್ತಿವೆ ಪ್ರಾಣಿ ಸಂಕುಲಗಳು
ಮಾನವನ ಕೊಳಕು ಬುದ್ಧಿಗೆ
ಕಲುಷಿತಗೊಂಡವು ಪರಿಶುದ್ಧ ನದಿಗಳು
ಕಾಂಕ್ರೀಟಿಕರಣಗೊಂಡಿವೆ ಹಸಿರ ಹಾಸು
ಕಾವೇರಿದೆ ಈ ಮಣ್ಣ ನೆಲ
ಸ್ವಾರ್ಥ ಜನರ ಶೋಷಣೆಗೆ
ಬಲಿಯಾಗಿರುವಳು ಪ್ರಕೃತಿ ಮಾತೆ
ಎಚ್ಚೆತ್ತುಕೊಳ್ಳೋಣ ಭೂಮಿ ಬರಡಾಗುವ ಮುನ್ನ..
– ವೈಶಾಲಿ ಭಂಡಾರಿ