November 24, 2024
1

Lahori Green Chicken: ಮನೆಯಲ್ಲಿಯೇ ಟ್ರೈ ಮಾಡಿ ಲಹೋರಿ ಗ್ರೀನ್ ಚಿಕನ್​!

ಸಾಮಾನ್ಯವಾಗಿ ಹೆಚ್ಚಿನ ಜನರು ಎಲ್ಲಾ ರೆಸಿಪಿಗಳ ಟೇಸ್ಟ್​ ಸವಿದಿರುತ್ತೀರಾ. ಆದರೆ ಇಂದು ಹೊಸ ರೆಸಿಪಿಯೊಂದನ್ನು ಹೇಳುತ್ತಿದ್ದೇವೆ. ಅದುವೇ ಲಹೋರಿ ಗ್ರೀನ್​ ಚಿಕನ್​ ರೆಸಿಪಿ. ಇದನ್ನು ಮಾಡೋದು ಹೇಗೆ ಗೊತ್ತಾ?.

ಕೋಳಿ ಮಾಂಸ ಬಳಸಿ ಅಡುಗೆ ಮಾಡಲು ಬರುತ್ತಾ? ಬಹುತೇಕರ ಮನೆಯಲ್ಲಿ ವಿಕನ್​ ಪುಲಿಮುಂಚಿ (Chicken Pulimunchi), ಚಿಕನ್​ ಸಾಂಬರ್​, ಚಿಕನ್​​ ಸುಕ್ಕ (Chicken Sukka), ಚಿಕನ್​ ಬಿರಿಯಾನಿ (Chicken Biriyani) ಮಾಡಿಯೇ ಮಾಡುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಜನರು ಈ ಎಲ್ಲಾ ರೆಸಿಪಿಗಳ ಟೇಸ್ಟ್​ ಸವಿದಿರುತ್ತೀರಾ. ಆದರೆ ಇಂದು ಹೊಸ ರೆಸಿಪಿಯೊಂದನ್ನು ಹೇಳುತ್ತಿದ್ದೇವೆ. ಅದುವೇ ಲಹೋರಿ ಗ್ರೀನ್​ ಚಿಕನ್ (Lahori Green Chicken)​ ರೆಸಿಪಿ. ಇದನ್ನು ಮಾಡೋದು ಹೇಗೆ ಗೊತ್ತಾ?.

ಹೊಸ  ಹೆಸರು ಕೇಳಿದಂತಿದೆ ಅನಿಸುತ್ತಿದ್ದೆಯಾ?. ಹೌದು. ಇದೊಂದು ಹೊಸ ರೆಸಿಪಿ. ಚಿಕನ್​​ ಬಳಸಿಕೊಂಡು ಲಹೋರಿ ಗ್ರೀನ್​ ರೆಸಿಪಿ ತಯಾರಿಸಲಾಗುತ್ತದೆ. ಅಂದಹಾಗೆಯೇ ಈ ರೆಸಿಪಿಯ ಟೇಸ್ಟ್​ ಅದ್ಭುತವಾಗಿದೆ. ಮಸಾಲೆಯೊಂದಿಗಿನ ಚಿಕನ್​ ಸವಿದಾಗ ಈ ರೆಸಿಪಿಯ ಟೇಸ್ಟ್​ ತಿಳಿಯುತ್ತದೆ. ಅಂದಹಾಗೆಯೇ ಲಹೋರಿ ಗ್ರೀನ್​ ಚಿಕನ್​ ರೆಸಿಪಿ ತಯಾರಿಸುವುದು ಹೇಗೆ ಗೊತ್ತಿದ್ಯಾ?. ಸುಲಭವಾಗಿ ಮತ್ತು ವೇಗವಾಗಿ ಲಹೋರಿ ಗ್ರೀನ್​ ಚಿಕನ್​ ರೆಸಿಪಿ ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಲಹೋರಿ ಗ್ರೀನ್ ಚಿಕನ್​ಗೆ ಬೇಕಾಗುವ ಸಾಮಗ್ರಿಗಳು:

1.6 ಕೆಜಿ ಚಿಕನ್, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಹಸಿ ಮೆಣಸು, ಎಣ್ಣೆ , ದನದ ತುಪ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಶಿನ ಪುಡಿ, 1 ಕಪ್ ಮೊಸರು, ಕಾಳು ಮೆಣಸಿನಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಫ್ರೆಶ್ ಕ್ರೀಮ್.

ಮಾಡುವ ವಿಧಾನ:

1 ಕಪ್ ಪುದೀನ ಸೊಪ್ಪು, 1 ಕಪ್ ಕೊತ್ತಂಬರಿಸೊಪ್ಪು, 4 ಹಸಿ ಮೆಣಸನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

ಒಂದು ಪಾತ್ರೆಗೆ ಒಂದು ಕಪ್ ಎಣ್ಣೆ ಹಾಕಿ, 2-3 ಚಮಚ ತುಪ್ಪ ಹಾಕಿ,2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ,1/2 ಚಮಚ ಮೆಣಸಿನ ಪುಡಿ,1/2 ಚಮಚ ಅರಶಿಣ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ತೊಳೆದಿಟ್ಟು ಕೊಂಡ ಚಿಕನ್,4 ಹಸಿ ಮೆಣಸು ತುಂಡರಿಸಿ ಹಾಕಿ, 10 ನಿಮಿಷಗಳ ಕಾಲ ಫ್ರೈ ಮಾಡಿ.

ನಂತರ ಮಿಕ್ಸಿ ಮಾಡಿಟ್ಟ ಮಿಶ್ರಣ ವನ್ನು ಸೇರಿಸಿ, 3 ನಿಮಿಷಗಳ ವರೆಗೆ ಬೇಯಲು ಇಡಿ.
ನಂತರ ಮೊಸರು ಸೇರಿಸಿ 3 ನಿಮಿಷಗಳ ಕಾಲ ಬೇಯಲು ಇಡಿ.
ನಂತರ 1 ಚಮಚ ಕಾಳುಮೆಣಸಿನ ಪುಡಿ,1 ಚಮಚ ಜೀರಿಗೆ ಪುಡಿ,ಕೊತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಬೇಯಲು ಬಿಡಿ.

ನಂತರ ಫ್ರೆಶ್ ಕ್ರೀಮ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ , ಸಣ್ಣ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಲಹೋರಿ ಗ್ರೀನ್ ಚಿಕನ್ ಸವಿಯಲು ಸಿದ್ದ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ನ್ 18

Leave a Reply

Your email address will not be published. Required fields are marked *