September 20, 2024

KFC ಚಿಕನ್​ ಮಾಡೋದು ಹೇಗೆ? ಮನೆಯಲ್ಲಿಯೇ ಈ ವಿಧಾನ ಟ್ರೈ ಮಾಡಿ ನೋಡಿ

ಕೆಎಫ್​ಸಿ ಚಿಕನ್ (KFC Chicken)​ ಸವಿದಿದ್ದೀರಾ?. ಸಾಮಾನ್ಯವಾಗಿ ನಗರದ ಕಡೆಗೆ ಹೆಜ್ಜೆ ಹಾಕಿದಾಗ ಅಲ್ಲಿರುವ ಕೆಎಫ್​ಸಿ ಮಳಿಗೆಗೆ ಭೇಟಿ ನೀಡಿ ಕೆಎಫ್​ಸಿ ಚಿಕನ್​ ಸವಿದದ್ದು ನೆನಪಿಗೆ ಬರಬಹುದು. ಆ ಮಳಿಗೆ ಬಳಿಗೆ ಹೋದಾಗಲೆಲ್ಲಾ ಕೆಎಫ್​ಸಿ ಚಿಕನ್​ನ ಟೇಸ್ಟ್(Taste)​ ಮತ್ತೆ ಮತ್ತೆ ನೆನಪಾಗಬಹುದು. ಆದರೆ ಮನೆಯಲ್ಲಿಯೇ ಕೆಎಫ್​ಸಿ ತಹರದ ಚಿಕನ್​ ಮಾಡಬಹುದಾಗಿದೆ. ಅದು ಹೇಗೆ ಎಂದು ತಿಳಿದಿದೆಯಾ?. ಸುಲಭವಾಗಿ ಮತ್ತು ವೇಗವಾಗಿ ಮನೆಯಲ್ಲಿರುವ ಮಸಾಲೆಯನ್ನು (Recipe) ಬಳಸಿಕೊಂಡು ಕೆಎಫ್​ಸಿ ತರಹದ ಚಿಕನ್​ ಅನ್ನು ಮಾಡಬಹುದಾಗಿದೆ. ಅಂದಹಾಗೆಯೇ, ಕೆಎಫ್​​ಸಿ ತಹರದ ಚಿಕನ್​ ಮಾಡಲು ಬೇಕಾಗುವ ಸಾಮಾಗ್ರಿ ಮತ್ತು ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

-ತೊಳೆದ 3.5 KG ಚಿಕನ್​

-300 ಗ್ರಾಂ ಮೈದಾ ಹಿಟ್ಟು

-100 ಗ್ರಾಂ ಕಾರ್ನ್​ ಪ್ಲವರ್

-ರುಚಿಗೆ ತಕ್ಕ ಗರಂ ಮಸಾಲೆ

-ಮೆಣಸಿನ ಹುಡಿ,

-ಅರಶಿನ ಹುಡಿ

-ಉಪ್ಪು

ಮಾಡುವ ವಿಧಾನ

ಮೊದಲಿಗೆ ಚಿಕನ್ ಶುಚಿ ಮಾಡಿ ಇಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆ ತೆಗೆದುಕೊಂಡು 300 ಗ್ರಾಂನಷ್ಟು ಮೈದಾವನ್ನು ಅದಕ್ಕೆ ಸುರಿಯಿರಿ. ಬಳಿಕ 100 ಗ್ರಾಂ ಕಾರ್ನ್​ ಪ್ಲವರ್​ ಹುಡಿಯನ್ನುಹಾಕಿ ಮಿಕ್ಸ್​ ಮಾಡಿ. ಇವಿಷ್ಟು  ಆದ ಬಳಿಕ ರುಚಿಗೆ ತಕ್ಕ ಗರಂ ಮಸಾಲೆ, ಮೆಣಸಿನ ಹುಡಿ ಮತ್ತು ಅರಶಿನ ಹುಡಿಯನ್ನು ಹಾಕಿ.  ಬಳಿಕ ಉಪ್ಪನ್ನು ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪನ್ನು ನೋಡಿಕೊಂಡು ಹಾಕಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹಸಿ ಚಿಕನ್​ ಅನ್ನು ಅದಕ್ಕೆ ಸೇರಿಸಿ ಮಿಶ್ರಣ ಮಾಡಿ.

ಮಿಶ್ರಣ ಮಾಡಿದಂತೆ, ಚಿಕನ್​ಗೆ ಮೈದಾ ಅಂಟಿಕೊಳ್ಳುತ್ತದೆ. ನಂತರ ಅದಕ್ಕೆ ಹಸಿ ಮೊಟ್ಟೆಯನ್ನು ಸೇರಿಸಬೇಕು. 4 ಮೊಟ್ಟೆಯನ್ನು ಹಾಕಿದರೆ ಸಾಕು. ಬಳಿಕ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಾದ ಬಳಿಕ ಬೆಳ್ಳುಳ್ಳಿ ಪೇಸ್ಟ್​​ ಅನ್ನು ಅದಕ್ಕೆ ಹಾಕಬೇಕು. ನಂತರ ಅದರೊಂದಿಗೆ ನೀರುಳ್ಳಿ ಪೇಸ್ಟ್​ ಸೇರಿಸಿ ಮಿಶ್ರಣ ಮಾಡಬೇಕು. ವಿನೇಗರ್​ ಬದಲಿಗೆ ಲಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ 30 ನಿಮಿಷಗಳ ಕಾಲ ಇಡಿ.

ನಂತರ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆಎಣ್ಣೆ ಸುರಿಯಿರಿ. ಗ್ಯಾಸ್​ ಉರಿಸಿ, ಎಣ್ಣೆ ಹದ ಬಿಸಿಗೆ ಬರುವವರೆಗೆ ನೋಡಿಕೊಳ್ಳಿ. ನಂತರ ಅರ್ಧ ನಿಮಿಷಗಳ ಕಾಲ ತೆಗೆದಿಟ್ಟ ಚಿಕನ್​ ಮಿಶ್ರಣವನ್ನು ಬಳಿ ಇಟ್ಟುಕೊಳ್ಳಿ. ಜೊತೆಗೆ ಮತ್ತೊಂದು ಪಾತ್ರೆಯಲ್ಲಿ ಓಟ್ಸ್​ ಇಟ್ಟುಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆಯೇ ಚಿಕನ್​ ತೆಗೆದುಕೊಂಡು, ಓಟ್ಸ್​ಗೆ ಮಿಶ್ರಣ ಮಾಡಿ ನೇರವಾಗಿ ಎಣ್ಣೆಗೆ ಬಿಡಿ. ಕೊಂಚ ಹೊತ್ತು ಕಾದ ಬಳಿಕ ಎಣ್ಣೆಯಿಂದ ಚಿಕನ್ ತೆಗೆಯಿರಿ. ಈಗ ಕೆಎಫ್​ಸಿ ಚಿಕನ್​ ಸವಿಯಲು ಸಿದ್ಧ.

ಅಂಗಡಿ ತೆರಳಿ ಸಾವಿರಾರು ರೂಪಾಯಿ ಹಣ ನೀಡಿ ಕೆಎಫ್​ಸಿ ಚಿಕನ್​ ಸವಿಯುವ ಬದಲು, ಮನೆಯಲ್ಲಿಯೇ ಮಾಡಿ ಸವಿಯಬಹುದಾಗಿದೆ. ಅಂದಹಾಗೆಯೇ ಈ ರೀತಿ ಚಿಕನ್​ ರೆಸಿಪಿ ತಯಾರಿಸಲು ಹೆಚ್ಚು ಹಣ ಖರ್ಚು ಮಾಡುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಇರುವ ಸಾಮಾಗ್ರಿ ಬಳಸಿ ಕೆಎಫ್​ಸಿ ಚಿಕನ್​ ರೆಸಿಪಿ ತಯಾರಿಸಬಹುದು. ಯಾವುದೇ ಅಡುಗೆಯನ್ನು ಮೊದಲ ಬಾರಿ ಪ್ರಯತ್ನಿಸಿದಾಗ ಮಾತ್ರ ಅದರ ರುಚಿಯ ಬಗ್ಗೆ ತಿಳಿಯುತ್ತದೆ. ಹಾಗೆಯೇ  ಕೆಎಫ್​ಸಿ ಚಿಕನ್​ ಅನ್ನು ಮನೆಯಲ್ಲಿಯೇ ಟ್ರೈ ಮಾಡಿ ನೋಡಿ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ನ್ 18

Leave a Reply

Your email address will not be published. Required fields are marked *