“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ”
ವರ್ಷವಿಡಿ ವಿದ್ಯೆಯ ಜೊತೆಗೆ ಸಂಸ್ಕೃತಿ ಶಿಸ್ತು ಆಚಾರ ವಿಚಾರಗಳನ್ನು ಕಲಿಸುವ ದೇವರ ಸಮಾನರಾದ ಗುರುವಿಗೆ ಗೌರವದ ಅಭಿನಂದನೆ ಸಲ್ಲಿಸುವ ಸಲ್ಲಿಸುವ ದಿನವೇ ಸೆಪ್ಟೆಂಬರ್ 5 ಶಿಕ್ಷಕರ ದಿನ. ಒಬ್ಬ ಗುರುಗಳು ಎಲ್ಲಾ ವಿದ್ಯಾರ್ಥಿಗಳನ್ನು ತಂದೆ ತಾಯಿಗಿಂತ ಹೆಚ್ಚು ಆಚಾರ ವಿಚಾರಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾ ತನ್ನ ಎಲ್ಲಾ ಜ್ಞಾನವನ್ನು ಮಕ್ಕಳಿಗೆ ನೀಡುತ್ತಾರೆ. ಆದರೆ 10 ವರ್ಷಗಳ ಹಿಂದಿನ ಶಿಕ್ಷಣ ವ್ಯವಸ್ಥೆಯನ್ನು ನೋಡಿದಾಗ ಈಗಿನ ಶಿಕ್ಷಣ ವ್ಯವಸ್ಥೆ ವಿದ್ಯೆಗಿಂತ ಹಣದ ಮೇಲೆ ನಿಂತಿದೆ ಎನ್ನುವುದು ವಿಪರ್ಯಾಸವೇ ಸರಿ. ಮೊದಲು ಅಧ್ಯಾಪಕರು ಏಟು ಕೊಟ್ಟರೆ ಪಾಲಕರು ಇನ್ನು ಎರಡು ಏಟು ಕೊಡಿ ಎನ್ನುತ್ತಿದ್ದರು. ಆಗ ಮಕ್ಕಳಿಗೆ ಹೆತ್ತವರ ಮತ್ತು ಶಿಕ್ಷಕರ ಭಯ ಎನ್ನುವುದು ಇತ್ತು. ಆ ಭಯ ಒಬ್ಬ ವಿದ್ಯಾರ್ಥಿಯನ್ನು ಒಳ್ಳೆಯ ಶಿಸ್ತು ಬದ್ಧ ಮತ್ತು ವಿದ್ಯಾವಂತ ವಿದ್ಯಾರ್ಥಿಯನ್ನಾಗಿಸುತ್ತಿತ್ತು. ಆದರೆ ಇವತ್ತಿನ ಶಿಕ್ಷಣವು ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದರೆ ವಿದ್ಯಾರ್ಥಿಗಳೇ ಗುರುಗಳಿಗೆ ಹೊಡೆಯುವ ಮಟ್ಟಕ್ಕೆ ಶಿಕ್ಷಣ ಹದಗೆಟ್ಟಿದೆ. ಈಗಿನ ಶಿಕ್ಷಣ ಸಂಸ್ಥೆಗಳು ಹಣ ಮತ್ತು ಪ್ರತಿಷ್ಠೆಯ ಮೇಲೆ ನಿಂತಿದೆ. ಪ್ರಸ್ತುತ ಶಿಕ್ಷಣವು ಮಾರ್ಕುಗಳಿಗೆ ಮಾತ್ರ ಮಹತ್ವವನ್ನು ಕೊಡುತ್ತದೆ ಯಾವಾಗ ಶಿಕ್ಷಣವು ಜೀವನ ಪಾಠವನ್ನು ಶಿಕ್ಷಣದ ಜೊತೆಗೆ ಕಲಿಸುತ್ತದೆಯೋ ಅವಾಗ ಮಾತ್ರ ಶಿಕ್ಷಣಕ್ಕೆ ಮಹತ್ವ ಸಾಧ್ಯ. ಯಾವ ವ್ಯಕ್ತಿ ಗುರುವಿನ ಗುಲಾಮನಾಗುತ್ತಾನೆ ಅವಾಗ ಮಾತ್ರ ಶಿಕ್ಷಕರ ದಿನಾಚರಣೆಗೆ ಮಹತ್ವ ಬರುತ್ತದೆ ಖಾಸಗಿ ಶಾಲೆಗಳು ಲಕ್ಷ ಕಟ್ಟಲೆ ಫೀಸ್ ತೆಗೆದುಕೊಂಡು 89% 90% ತೆಗೆದುಕೊಂಡ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಹೆಸರು ತರುವ ಶಾಲೆಗಿಂತ 35% ತೆಗೆದುಕೊಂಡ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಸರಕಾರಿ ಶಾಲೆಯ ಶಿಕ್ಷಕರೇ ಗ್ರೇಟ್ ಅಲ್ಲವೇ. ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಬದಲಾಗಿದೆ ಎಂದರೆ ರೂ. 50,000 ವೇತನ ತೆಗೆದುಕೊಳ್ಳುವ ಸರಕಾರಿ ಶಾಲೆಯ ಶಿಕ್ಷಕ ಖಾಸಗಿ ಶಾಲೆಗೆ ಬಂದು ತಮ್ಮ ಮಗ ಹೇಗೆ ಕಲಿಯುತ್ತಾನೆ ಎಂದು ರೂ.8,000 ವೇತನ ತೆಗೆದುಕೊಂಡು ಶಿಕ್ಷಕಿಯನ್ನು ಕೇಳುವುದು ವಿಪರ್ಯಾಸವೇ ಸರಿ ನಮ್ಮ ಕನ್ನಡ ಭಾಷೆ ಉಳಿದಿದೆ ಎಂದರೆ ಅದಕ್ಕೆ ಸರಕಾರಿ ಶಾಲೆಗಳು ಕಾರಣ ಅಂತಹ ಸರಕಾರಿ ಶಾಲೆಯನ್ನು ಉಳಿಸೋಣ ಹತ್ತು ವರ್ಷಗಳ ಹಿಂದೆ ಹತ್ತನೇ ಕ್ಲಾಸಿನಲ್ಲಿ 50% ತೆಗೆದುಕೊಂಡು ವಿದ್ಯಾರ್ಥಿ ವಿದ್ಯಾವಂತನಾದರೆ ಈಗಿನ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ 80% 90% ಬಂದರೂ ಕಡಿಮೆಯಾಗುತ್ತದೆ. ಕಾರಣ ” ಹಿಂದೆ ಕಲಿಕೆಗೋಸ್ಕರ ಶಿಕ್ಷಣ, ಇಂದು ಪಾಸ್ ಆಗೋಕೆ ಇರುವಂತಹ ಶಿಕ್ಷಣ ಇದೆ”
✍️ ಅಶ್ವಿನಿ ಪ್ರವೀಣ್ ಭಂಡಾರಿ ಜಾರಿಗೆ ಕಟ್ಟೆ