September 20, 2024

ತವಾದಲ್ಲಿಯೂ ರುಚಿಯಾದ ಪಿಜ್ಜಾ ಮಾಡಬಹುದು ನೋಡಿ

ಪಿಜ್ಜಾ… ನೋಡಿದ ತಕ್ಷಣ ಬಾಯಲ್ಲಿ ನೀರೂರುವುದು ಅಲ್ವಾ? ಮಕ್ಕಳಾಗಿರಲಿ-ದೊಡ್ಡವರಾಗಿರಲಿ ಪಿಜ್ಜಾ ಇಷ್ಟಪಟ್ಟು ಸವಿಯುತ್ತಾರೆ. ಈ ಪಿಜ್ಜಾವನ್ನು ಹೊರಗಡೆಯಿಂದ ತರಿಸಿ ಸವಿಯುವುದಕ್ಕಿಂತ ನೀವೇ ಮಾಡಿ ತಿನ್ನಬಹುದು. ನೀವು ಮನೆಯಲ್ಲಿ ಮಾಡುವ ಪಿಜ್ಜಾ ತುಂಬಾನೇ ರುಚಿಯಾಗಿರುತ್ತೆ.

ಹೌದು ನೀವು ಈ ರೆಸಿಪಿ ಫಾಲೋ ಮಾಡಿ ಪಿಜ್ಜಾ ಮಾಡಿದ್ದೇ ಆದರೆ ಸೂಪರ್‌ ರುಚಿಯ ಪಿಜ್ಜಾ ಸವಿಯಬಹುದು ನೋಡಿ:

how to make pizza at home, ಮನೆಯಲ್ಲಿಯೇ ಪಿಜ್ಜಾ ಮಾಡುವುದು ಹೇಗೆ?
w to make pizza at home, ಮನೆಯಲ್ಲಿಯೇ ಪಿಜ್ಜಾ ಮಾಡುವುದು ಹೇಗೆ?

PREP TIME 30 Mins COOK TIME 30M TOTAL TIME 30 Mins

Recipe Type: pizza Serves: 2 INGREDIENTS ಬೇಕಾಗುವ ಸಾಮಗ್ರಿ

* 11/4 ಕಪ್‌ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು

* 1/4 ಚಮಚ ಬೇಕಿಂಗ್‌ ಸೋಡಾ

1/2 ಚಮಚ ಸಕ್ಕರೆ

1/4 ಚಮಚ ಉಪ್ಪು

2 ಚಮಚ ಆಲೀವ್‌ ಎಣ್ಣೆ ಅಥವಾ ಸನ್‌ಪ್ಯೂರ್‌

1/3 ಕಪ್‌ ನೀರು + 2 ಚಮಚ 2 ಚಮಚ ಮೊಸರು ಟಾಪಿಂಗ್‌ಗೆ

* 1/2 ಕಪ್ ಕ್ಯಾಪ್ಸಿಕಂ

1/4 ಕಪ್‌ ಈರುಳ್ಳಿ

2 ಚಮಚ ಆಲೀವ್‌ ಮಿಕ್ಸ್ಡ್ ಹರ್ಬ್ಸ್

1/4 ಚಮಚ ಚಿಲ್ಲಿ ಫ್ಲೇಕ್ಸ್

3-4 ಸ್ಲೈಸ್ ಚೀಸ್ ಪಿಜ್ಜಾ

ಸಾಸ್‌ ಮಾಡಲು ಬೇಕಾಗುವ ಸಾಮಗ್ರಿ

* 300 ಗ್ರಾಂ ಟೊಮೆಟೊ ಅಥವಾ 3 ದೊಡ್ಡ ಗಾತ್ರದ ಟೊಮೆಟೋ

* ಚಿಕ್ಕ ಈರುಳ್ಳಿ 1/2

* 2 ಎಸಳು ಬೆಳ್ಳುಳ್ಳಿ ಎಸಳು (ಚಿಕ್ಕದಾಗಿ ಕತ್ತರಿಸಿದ್ದು)

* 11/2 ಚಮಚ ಆಲೀವ್‌ ಎಣ್ಣೆ

* 1/2ರಿಂದ 3/4 ಚಮಚ ಚಿಲ್ಲಿ ಫ್ಲೇಕ್ಸ್

* 1/4 ಚಮಚ ಕಾಳು ಮೆಣಸಿನ ಪುಡಿ

* ರುಚಿಗೆ ತಕ್ಕ ಉಪ್ಪು

*1/2 ಚಮಚ ಮಿಕ್ಸ್ಡ್ ಹರ್ಬ್ಸ್

* 1/2 ಚಮಚ ಮಿಕ್ಸ್ಡ್ ಹರ್ಬ್ಸ್ ಅಥವಾ ಒರೆಗ್ನೋ

HOW TO PREPARE

ಮಾಡುವ ವಿಧಾನ:

* ಮೈದಾ ಅಥವಾ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮಿಕ್ಸ್ ಮಾಡಿ.

* ಅದಕ್ಕೆ ನೀರು, ಎಣ್ಣೆ, ಮೊಸರು ಆಕಿ.

* ನಂತರ ಹಿಟ್ಟನ್ನು ಮೃದುವಾಗಿ ಕಲೆಸಿ.

* ನಂತರ ಅದನ್ನು ಕವರ್‌ ಮಾಡಿ ಒಂದು ಗಂಟೆ ಇಡಿ.

ಪಿಜ್ಜಾ ಸಾಸ್‌ ಮಾಡುವುದು ಹೇಗೆ?

*ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾದ ಮೇಲೆ ಉಳಿದ ಸಾಮ್ರಗ್ರಿ ಹಾಕಿಅದು ಪೇಸ್ಟ್‌ ರೀತಿ ಆದ ಮೇಲೆ ಸ್ಟೌವ್‌ ಆಫ್‌ ಮಾಡಿ.

ಓವನ್ ಇಲ್ಲದೆ ಪಿಜ್ಜಾ ಮಾಡುವುದು ಹೇಗೆ?

* ಪಿಜ್ಜಾವನ್ನು 2-3 ಭಾಗಗಳಾಗಿ ವಿಂಗಡಿಸಿ, ನೀವು ಚಪಾತಿಗೆ ತಟ್ಟುವ ರೀತಿ ತಟ್ಟಿ, ಆದರೆ ಚಪಾತಿಗಿಂತ ಸ್ವಲ್ಪ ದಪ್ಪವಿರಲಿ.

* ಈಗ ತವಾವನ್ನು ಬಿಸಿ ಮಾಡಿ, ತವಾ ಬಿಸಿಯಾದಾಗ ಅದಕ್ಕೆ ತಟ್ಟಿದ ಇಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಆಗಾಗ ತಿರುಗಿಸಿ-ಮಗುಚಿ ಹಾಕುತ್ತಾ ಬೇಯಿಸಿ.

* ಅದರ ಎರಡೂ ಬದಿ ಬೆಂದ ಮೇಲೆ ಒಂದು ಬದಿಗೆ ಸಾಸ್‌ ಸವರಿ, ನಂತರ ಕತ್ತರಿಸಿಟ್ಟ ತರಕಾರಿ ಹಾಕಿ, ಚೀಸ್‌ ಸ್ಪ್ರೆಡ್ ಮಾಡಿ, ಚೀಸ್‌ ಮೆಲ್ಟ್ ಆಗುವವರೆಗೆ ಬೇಯಿಸಿ.

* ನಂತರ ಬಿಸಿ-ಬಿಸಿ ಇರುವಾಗಲೇ ಸರ್ವ್‌ ಮಾಡಿ.

INSTRUCTIONS ತವಾದಲ್ಲಿ ಪಿಜ್ಜಾ ಮಾಡಿದರೆ ನೀವು ಓವನ್‌ನಲ್ಲಿ ಮಾಡಿದಷ್ಟೇ ಮೃದುವಾಗಿರುತ್ತೆ, ಬೇಸ್‌ ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ, ಬೇಸ್ ಮೃದುವಾಗಿರುತ್ತೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಬಿ ಎಸ್

Leave a Reply

Your email address will not be published. Required fields are marked *