ಕರ್ನಾಟಕ
ಬರಹ : ನಾಗಶ್ರೀ. ಎಸ್.
ನನ್ನ ರಾಜ್ಯ ಕರ್ನಾಟಕದ ಬಗ್ಗೆ ಏನೆಂದು ಬರೆಯಲಿ,ರನ್ನ ,ಜನ್ನ ಹರಿಹರರೆಂದು ಹಲವಾರು ಕವಿಗಳ ಜೊತೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳ ಮುಡಿಗೇರಿಸಿಕೊಂಡವರು ನನ್ನ ಭಾಷೆಯ ಕವಿಗಳು, ಕೆಂಪು, ಹಳದಿ ಬಾವುಟಕ್ಕೆ ಸಾಧನೆಯ ಗರಿಯನ್ನು ಇಟ್ಟವರು, ನನ್ನ ಕನ್ನಡ ಭಾಷೆಯ ಕವಿಗಳು, ಎರಡು ಸಾವಿರ ವರ್ಷಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕವನ್ನು ಹಲವು ಮಹಾ ರಾಜವಂಶಗಳು ಆಳಿದ್ದವು. ಗಂಗರು, ರಾಷ್ಟ್ರ ಕೂಟರು, ವೆಂಗಿ ಚಾಲುಕ್ಯರು, ದೇವಗಿರಿಯ ಯಾದವರು ಇವರೆಲ್ಲರೂ ಕನ್ನಡ ಮೂಲದವರೇ, ಕರ್ನಾಟಕಕ್ಕೆ ಮನಮೋಹಕ ಇತಿಹಾಸವಿದೆ, ಭಾರತದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಕರ್ನಾಟಕವು ವಿಶಿಷ್ಟ ಸಂಸ್ಕೃತಿ ಮತ್ತು ಮೌಲ್ಯಗಳಿಂದ ಸಮೃದ್ಧವಾಗಲು ಕಾರಣವಾಯಿತು. ಹಿಂದಿನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು ಎಂದು ಕರೆಯುತ್ತಿದ್ದರು, ಏಕೆಂದರೆ ಕರ್ನಾಟಕ ಎತ್ತರದ ಪ್ರದೇಶದಲ್ಲಿ ಇದ್ದ ಕಾರಣಕ್ಕೆ..
ಅಂತೆಯೇ ರಾಯಚೂರಿನ ಲಿಂಗಸಗೂರಿನಲ್ಲಿ, ರಾಯಚೂರಿನ ಮಸ್ಕಿಯಲ್ಲಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಕರ್ನಾಟಕಕ್ಕೆ ಸಂಬಂಧ ಪಟ್ಟ ಪುರಾವೆಗಳು ದೊರಕಿವೆ.
ಕರ್ನಾಟಕದ ಪೂರ್ವ ಇತಿಹಾಸ
ಕರ್ನಾಟಕದಲ್ಲಿ ನವಶಿಲಾ, ತಾಮ್ರ ಶಿಲಾಯುಗ ಅನಂತರ ತ್ವರಿತಗತಿಯಲ್ಲಿ ಪ್ರಭಾವಶಾಲಿಯಾಗಿ ಹಬ್ಬಿದ ಈ ಸಂಸ್ಕೃತಿಯ ಮುಖ್ಯ ಲಕ್ಷಣವೆಂದರೆ ಸತ್ತವರ ಅವಶೇಷಗಳನ್ನು ದೊಡ್ಡ ಕಲ್ಲುಗಳಿಂದ ರಚಿತವಾದ ಸಮಾಧಿಗಳಲ್ಲಿ ಹೂಳುವುದು, ಆ ಉಪಕರಣಗಳಿಗೆ ಕಬ್ಬಿಣವನ್ನು ಉಪಯೋಗಿಸುವುದು. ನನ್ನ ಅಜ್ಜ ಅಜ್ಜಿಯ ಗೋರಿಯನ್ನು ಸಹ ಇದೇ ಮಾದರಿಯಲ್ಲಿ ಕಟ್ಟಿಸಿದ್ದರು. ದಕ್ಷಿಣ ಭಾರತದಲ್ಲಿ ದ್ರಾವಿಡ ಭಾಷೆಯನ್ನು ಬಳಸುತ್ತಿದ್ದರು.ಕರ್ನಾಟಕದ ಪೂರ್ವ ಇತಿಹಾಸದ ಸಂಸ್ಕೃತಿ ಭಾರತದ ಉತ್ತರ ಭಾಗಕ್ಕಿಂತ ಬಹಳ ಭಿನ್ನವಾಗಿದೆ ಕರ್ನಾಟಕದ ಜನರು ಕೊಡಲಿಯನ್ನು ಹೆಚ್ಚಾಗಿ ಬಳಸುತಿದ್ದರು..
ಕರ್ನಾಟಕದ ಆರಂಭಿಕ ಇತಿಹಾಸ
ಕರ್ನಾಟಕದ ಆರಂಭದಲ್ಲಿ ಉತ್ತರ ಭಾಗದವರು ಕರ್ನಾಟಕವನ್ನು ಆಳುತ್ತಿದ್ದರು, ಮೌರ್ಯ ಮತ್ತು ನಂದರ ಆಳ್ವಿಕೆಯಲ್ಲಿತ್ತು.. ಕರ್ನಾಟಕವನ್ನು ಆಳಿದ ಮೊದಲ ರಾಜ ವಂಶ ಮತ್ತು ಕನ್ನಡದ ರಾಜವಂಶ ಎಂದರೆ ಕದಂಬರು. ನಮ್ಮ ಹೆಮ್ಮೆಯ ಕರ್ನಾಟಕವು ಹಲವು ರಾಜವಂಶಗಳ ಉದಯ ಮತ್ತು ಪತನಕ್ಕೆ ಕಾರಣವಾಗಿದೆ. ಕದಂಬರ ರಾಜ ಮಯೂರವರ್ಮನ ಕತೆಯನ್ನ ನಾವು ಮರೆಯಲು ಸಾಧ್ಯವೇ ಇಲ್ಲ, ಡಾ. ರಾಜಕುಮಾರ್ ರವರ ಅದ್ಭುತ ಅಭಿನಯದಲ್ಲಿ ಮಯೂರವರ್ಮ ನಮ್ಮ ಮುಂದೆ ಬಂದ ಅನುಭವವೇ ಆಗುತ್ತದೆ… ಕನ್ನಡಿಗರ ಬಗ್ಗೆ ಹೆಮ್ಮೆ ತನ್ನಿಂದ ತಾನೇ ಹೊರಬರುತ್ತದೆ.. ಕದಂಬರ ನಂತರ ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ರಾಷ್ಟ್ರಕೂಟರ ಆಳ್ವಿಕೆಯ ಯುಗವನ್ನು ” ಸಾಮ್ರಾಜ್ಯ ಶಾಹಿ ಕರ್ನಾಟಕದ ಯುಗ ” ಎಂದು ಪರಿಗಣಿಸಿದ್ದಾರೆ. ಮುಂದೆ ಚಾಲುಕ್ಯರು, ಸೆವುನಾ ರಾಜ ವಂಶ, ಹೊಯ್ಸಳ ರಾಜವಂಶದ ಕಾಲದಲ್ಲಿ ಕರ್ನಾಟಕದ ಅದ್ಭುತ ಶಿಲ್ಪ ಕಲೆ ಬೇಲೂರು, ಹಳೆಬೀಡಿನ ನಿರ್ಮಾಣವಾಯಿತು. ಈ ರಾಜವಂಶದಲ್ಲೇ ರಾಘವಾಂಕ, ರುದ್ರಭಟ್ಟ, ಹರಿ ಹರರೆಂಬ ಶ್ರೇಷ ಕನ್ನಡದ ಕವಿಗಳು ಹೊರ ಹೊಮ್ಮಿದ್ದರು.
ವಿಜಯ ನಗರ ಸಾಮ್ರಾಜ್ಯ
ಹರಿಹರ ಮತ್ತು ಬುಕ್ಕರಾಯನಿಂದ ಸ್ಥಾಪಿಸಲ್ಪಟ್ಟ ರಾಜವಂಶವೇ ವಿಜಯ ನಗರ.. ಕನ್ನಡದ ಕಂಪನ್ನು ಊರಗಲ ತಲುಪಿಸಿದ ಕೀರ್ತಿ ಈ ರಾಜವಂಶಕ್ಕೆ ಸಲ್ಲಬೇಕು. ಹಂಪೆಯೊಂದೆ ಸಾಕು ಕರ್ನಾಟಕದ ವೈಭವವ ವರ್ಣಿಸಲು, ಬಹಮನಿಯರು, ದೆಹಲಿ ಸುಲ್ತಾನರು ಕರ್ನಾಟಕದಲ್ಲಿ ಇಸ್ಲಾಮಿಕ್ ವಾಸ್ತು ಶೈಲಿಯನ್ನು ತೋರಿಸಿಕೊಟ್ಟಿದ್ದರು.
ಕರ್ನಾಟಕದಲ್ಲಿ ಕೆಳದಿಯ ಅರಸರು
ಕೆಳದಿಯು ವಿಜಯನಗರ ಸಾಮ್ರಾಜ್ಯದ ಗುತ್ತಿಗೆದಾರರು ಆಗಿದ್ದರು, ನಂತರ ಸ್ವತಂತ್ರರಾದರು. ಮುಂದೆ ಮೈಸೂರಿನ ಒಡೆಯರ ಆಳ್ವಿಕೆ ಬಂತು, ಟಿಪ್ಪು ಸುಲ್ತಾನ್ ಬಂದ, ಮೈಸೂರು ಬ್ರಿಟಿಷರ ಆಳ್ವಿಕೆಗೆ ಬಂತು.. ಮತ್ತೆ ಒಡೆಯರ್ ಆಳ್ವಿಕೆ… ಹೀಗೆ ಕರ್ನಾಟಕವನ್ನು ದೊಡ್ಡ ದೊಡ್ಡ ರಾಜಮನೆತನಗಳೇ ಆಳ್ವಿಕೆ ನಡೆಸಿದ್ದವು.ಯಾರ ಆಳ್ವಿಕೆ ಇರಲಿ, ಆಡಳಿತ ಇರಲಿ ಕರ್ನಾಟಕ ತನ್ನತನವನ್ನು ಉಳಿಸಿಕೊಂಡೇ ಬಂದಿತ್ತು, ಕಲೆ, ಸಾಹಿತ್ಯ, ಸಂಸ್ಕೃತಿಗೆ, ಶಿಕ್ಷಣಕ್ಕೆ ಆದ್ಯತೆಯನ್ನು ಕೊಡುವಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ..
ಕರ್ನಾಟಕದ ಏಕೀಕರಣ
ಭಾರತದ ಸ್ವಾತಂತ್ರ್ಯ ನಂತರ ಭಾಷೆಗಳ ಮೇಲೆ ರಾಜ್ಯಗಳನ್ನು ಮರು ಸಂಘಟಿಸಲಾಯಿತು. ಕನ್ನಡ ಮಾತನಾಡುವ ಜನರು ಮೈಸೂರು ಹೆಸರಿನಲ್ಲಿ ಇಂದಿನ ಕರ್ನಾಟಕವನ್ನು ಒಗ್ಗೂಡಿಸಿದರು.1973ರಲ್ಲಿ ಕರ್ನಾಟಕ ಎಂದು ನಾಮಕರಣ ಆಯಿತು…
‘ಕನ್ನಡವೇ ಸತ್ಯ ಕನ್ನಡವೇ ನಿತ್ಯ ‘ ಎಂಬ ನುಡಿಗಳೇ ಇಂದಿನ ಪೀಳಿಗೆಗೆ ಸ್ಫೂರ್ತಿ, ಕುವೆಂಪು, ಬೇಂದ್ರೆ, ಕಾರಂತರು, ಕಾರ್ನಾಡ್, ಅನಂತಮೂರ್ತಿ, ಡಾ. ರಾಜಕುಮಾರ್ ಹೀಗೆ ಹಲವು ಸಾಧಕರ ಪಟ್ಟಿಯೇ ಕನ್ನಡದಲ್ಲಿ ಇದೆ. ಕರ್ನಾಟಕಸಾಧಕರನ್ನು ಉಳಿಸಿ, ಬೆಳೆಸುದದರಲ್ಲಿ ಪ್ರಥಮವಾಗಿದೆ. ಆಧುನಿಕ ಕರ್ನಾಟಕ ಹಲವಾರು ಪ್ರತಿಭೆಗಳಿಂದ ಶ್ರೀಮಂತವಾಗಿದೆ
ಉಪಸಂಹಾರ
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಕುವೆಂಪುರವರು ಬರೆದ ಈ ಗೀತೆಯನ್ನು ಪ್ರತಿಯೊಬ್ಬ ಕನ್ನಡಿಗನು ಹಾಡಿಯೇ ಹಾಡುತ್ತಾನೆ, ಶಾಲಾ ದಿನಗಳಲ್ಲಿ ಬಾಯಿ ಪಾಠವಾಗಿದ್ದ ಈ ಹಾಡು ಇಂದಿಗೂ ಹೃದಯದಲ್ಲಿದೆ, ಕರ್ನಾಟಕದ ಬಗ್ಗೆ ಬರೆಯಲು ಬಹಳಷ್ಟಿದೆ.ಪುಟ್ಟದಾಗಿ ಬರೆದು ಇಷ್ಟಕ್ಕೆ ಮುಗಿಸಿರುವೆ, ಕರ್ನಾಟಕಕ್ಕೆ ಬಂದರೆ ಕಲಿಯುವವನಿಗೆ ಹಲವು ವಿಚಾರಗಳನ್ನು, ಚಿಂತನೆಗಳನ್ನು, ಕಲಿಸಿಕೊಡುತ್ತದೆ ಎಂದು ಹೇಳುತ್ತಾ..
ಜಯ ಕರ್ನಾಟಕ ಮಾತೆ.
ನಮ್ಮ ಕರ್ನಾಟಕದ ಬಗ್ಗೆ ತುಂಬಾ ಒಳ್ಕೆಯ ಲೇಖನ ಬರೆದ್ದೀರ. ಅಭಿನಂದನೆಗಳು ನಾಗಶ್ರೀಯವರೆ 👍👍👍