ಕರ್ನಾಟಕ
ಹಳದಿ ಕೆಂಪು ರಂಗಿನಲ್ಲಿ ಬಾವುಟವು ಏರುತಿಹುದು, ಹಾರುತಿಹುದು, ಬಾನೆತ್ತರದಲಿ, ಗಗನವ ಚುಂಬಿಸೋ ಕಾತುರದಲಿ..
ಬಾದಾಮಿಯ ಕಲ್ಲುಕಲ್ಲಿನಲಿ, ಹಂಪೆಯ ಗುಡಿಯಲ್ಲಿ, ಬೇಲೂರು ಹಳೆಬೀಡಿನ ಶಿಲ್ಪಕಲೆಗಳಲ್ಲಿ, ಹಲ್ಮಿಡಿಯ ಶಾಸನಗಳಲಿ…
ಮಸ್ಕಿ, ಬ್ರಹ್ಮಗಿರಿಯ ಉತ್ಕನನ ಗಳಲಿ ಕನ್ನಡದ ಕಂಪಿಹುದು, ಮಯೂರ ವರ್ಮನ ಆಳ್ವಿಕೆಯಲ್ಲಿ ಕರ್ನಾಟಕವು ಎತ್ತರದಲ್ಲಿ ರಾರಾಜಿಸಿಹುದು..
ಪಂಪ, ರನ್ನ, ಜನ್ನ, ರತ್ನಾಕರ ವರ್ಣಿಯಂತ ಕವಿಗಳ ಕೃತಿಗಳ ರಾಶಿಯಿಹುದು, ಕನ್ನಡದ ಬರಹಗಳು ಇಂದಿಗೂ ಅಜರಾಮರವಾಗಿಹುದು…
ಕನ್ನಡಾಂಬೆಯ ಮಕ್ಕಳು ನಾವು, ಒಂದೇ ಎಂಬ ಭಾವನೆ ಇಹುದು, ನಮ್ಮೂರಿಗೆ ಬಂದವರಿಗೆ ಆತ್ಮಿಯತೆಯ ಸ್ವಾಗತವಿಹುದು..
ರಂಗದಲ್ಲಿ ಮಿಂಚೋ ನಟರಿಂದ ಕಸ್ತೂರಿ ನಿವಾಸದಿಂದ ಕಾಂತಾರ ತನಕ ಕನ್ನಡದ ಶಕ್ತಿ ಎಲ್ಲೆಲ್ಲೂ ಪರಿಮಳವ ಬೀರುತಿಹುದು…
ವಿವಿಧ ಬಗೆಯ ರೂಪಗಳಿಹುದು
ಎನ್ನ ಭಾಷೆ ಕನ್ನಡಕ್ಕೆ, ಪರಶುರಾಮ ಸೃಷ್ಟಿಯಲ್ಲಿ ವಿರಾಜಿಸುತಿಹಳು ಎನ್ನ ಕನ್ನಡ ಮಾತೆ..
✍️ ನಾಗಶ್ರೀ. ಎಸ್