November 22, 2024
f

ಆಯುರ್ವೇದದಲ್ಲಿ ಔಷಧಿಗಳ ರಾಜ ಯಾರು ಗೊತ್ತಾ? ಇದೇ ಜೇಷ್ಠಮಧು

ಸಣ್ಣ ಪುಟ್ಟ ಕಾಯಿಲೆಗಳಿಂದ ಮಾತ್ರವಲ್ಲ, ಮಾರಕ ಸಕ್ಕರೆ ಕಾಯಿಲೆ ಇರುವವರು ಕೂಡ ಸೇವಿಸಬಹುದಾದ ಜೇಷ್ಠ ಮಧು ಆರೋಗ್ಯ ಪ್ರಯೋಜನ ಗಳನ್ನು  ಇಲ್ಲಿ ತಿಳಿಸಿದೆ.

ಈಗಾಗಲೇ ಮಳೆಗಾಲ ಮತ್ತು ಚಳಿಗಾಲದ ಮಧ್ಯ ಭಾಗದಲ್ಲಿ ನಾವಿದ್ದೇವೆ. ಇದು ಹೇಳಿ ಕೇಳಿ ರೋಗಗಳು ಬರುವಂತಹ ಕಾಲ. ಹಾಗಾಗಿ ನಾವು ಈ ಸಂದರ್ಭದಲ್ಲಿ ಎಷ್ಟೇ ಜಾಗರೂಕತೆ ಯಿಂದ ಇದ್ದರೂ ಕೂಡ ಸಾಲದು.
ನಮ್ಮ ಉತ್ತಮ ಆರೋಗ್ಯಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ನಾವು ಆಯುರ್ವೇದ ಗಿಡಮೂಲಿಕೆಗಳ ಮೊರೆ ಹೋಗಬೇಕಾಗುತ್ತದೆ. ಅಂತಹ ಗಿಡಮೂಲಿಕೆಗಳಲ್ಲಿ ಜೇಷ್ಠ ಮಧು ಸಹ ಒಂದು. ಆಹಾರ ತಜ್ಞರಾದ ಲ.ಬಾ ಈ ವಿಚಾರವನ್ನು ಇಲ್ಲಿ ಉತ್ತಮ ಮಾಹಿತಿಯೊಂದಿಗೆ ತಿಳಿಸಿಕೊಟ್ಟಿದ್ದಾರೆ.

ಅತಿಮಧುರ ಅಥವಾ ಜೇಷ್ಠಮಧು, ಆರೋಗ್ಯಕಾರಿ ಗಿಡಮೂಲಿಕೆ

ಉತ್ತಮ ಜೀರ್ಣಾಂಗ ವ್ಯವಸ್ಥೆ ನಿಮ್ಮದಾಗುತ್ತದೆ

ಜೇಷ್ಠ ಮಧು ನಿಮ್ಮ ಹೊಟ್ಟೆಯ ಮತ್ತು ಜೀರ್ಣಾಂಗ ತೊಂದರೆಯನ್ನು ಸರಿಪಡಿಸುವ ಗುಣವನ್ನು ಹೊಂದಿದೆ. ಏಕೆಂದರೆ ಇದರಲ್ಲಿ carbenoxolone ಪ್ರಮಾಣ ಇರುವುದರಿಂದ ಇದು ನಿಮ್ಮ ಮಲಬದ್ಧತೆ, ಅಸಿಡಿಟಿ, ಎದೆಯಿರಿ, ಉರಿಯುತ, ಹೊಟ್ಟೆಯ ಅಸ್ವಸ್ಥತೆ ಇತ್ಯಾದಿಗಳನ್ನು ಸರಿಪಡಿಸುತ್ತದೆ.

ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು

ಆಯುರ್ವೇದ ತಜ್ಞರು ಹೇಳುವ ಹಾಗೆ ಜೇಷ್ಠ ಮಧು ತನ್ನಲ್ಲಿ glabridin ಪ್ರಮಾಣ ವನ್ನು ಅಧಿಕವಾಗಿ ಹೊಂದಿದೆ. ಹಾಗಾಗಿ ಇದು ನೈಸರ್ಗಿಕವಾಗಿ ಸಿಹಿ ಇದ್ದರೂ ಕೂಡ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ಸುಲಿನ್ ಉತ್ಪತ್ತಿ ಮಾಡುವ ಜೊತೆಗೆ ಪ್ಯಾಂಕ್ರಿಯಾಟಿಕ್ ಜೀವಕೋಶಗಳನ್ನು ಸಕ್ರಿಯಗೊಳಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಮಳೆಗಾಲ ಹಾಗೂ ಚಳಿಗಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳ ಸರಮಾಲೆಯಲ್ಲಿ ಸೋಂಕುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ವಿರುದ್ಧ ಹೋರಾಡಲು ನಮಗೆ ರೋಗ ನಿರೋಧಕ ಶಕ್ತಿಯ ಅವಶ್ಯಕತೆ ಇರುತ್ತದೆ. ಅಂತಹ ಅವಶ್ಯಕತೆಯನ್ನು ಜೇಷ್ಠ ಮಧು ಬೇರು ಕೊಡಬಲ್ಲದು. ಇದರಿಂದ ಅಲರ್ಜಿ ತೊಂದರೆಗಳು ಸಾಕಷ್ಟು ಕಡಿಮೆಯಾಗುತ್ತವೆ.

ಜೇಷ್ಠಮಧು ಸೇವನೆ ಹೇಗೆ?

ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು ಅದರಲ್ಲಿ ಮೂರರಿಂದ ನಾಲ್ಕು ಇಂಚು ಜೇಷ್ಠ ಮಧು ಪೀಸ್ ಗಳನ್ನು ಹಾಕಿ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಬಹುದು ಮತ್ತು ಆರೋಗ್ಯದಲ್ಲಿ ಆಗುವ ಉತ್ತಮ ಬದಲಾವಣೆಗಳನ್ನು ಕಂಡುಕೊಳ್ಳಬಹುದು.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *