November 22, 2024
1

ಬಿಕ್ಕಳಿಕೆ ಬಂದಾಗ ಇಂತಹ ಸರಳ, ಮನೆಮದ್ದುಗಳನ್ನು ಒಮ್ಮೆ ಮಾಡಿ ನೋಡಿ

ಸಡನ್ ಆಗಿ ಬಿಕ್ಕಳಿಕೆ ಸಮಸ್ಯೆ ಕಾಣಿಸಿಕೊಂಡರೆ, ಈ ಲೇಖನದಲ್ಲಿ ನೀಡಿರುವ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ… ಒಂದು ವೇಳೆ ಇದರಿಂದ ಕಡಿಮೆಯಾಗದೆ ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಅವರಿಂದ ಚಿಕಿತ್ಸೆ ಪಡೆದುಕೊಳ್ಳಿ…

ಸಡನ್ ಆಗಿ ಬಿಕ್ಕಳಿಕೆ ಶರುವಾಗಿ ಬಿಟ್ಟರೆ, ಯಾರೋ ನಿನ್ನನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಮನೆಯಲ್ಲಿ ಅಮ್ಮ ಹೇಳಿದ ಮಾತು ನೆನಪಿಗೆ ಬರುತ್ತದೆ… ಇದು ಹಳೆಯ ಕಾಲದವರ ನಂಬಿಕೆ, ಯಾರಿಗೆ ಗೊತ್ತು? ಇದ್ದರೂ ಇರಬಹುದು ಅಲ್ಲವೇ? ಅದು ಏನೇ ಇರಲಿ ಆದರೆ, ಬಿಕ್ಕಳಿಕೆ ಸಮಸ್ಯೆಗೆ ವೈಜ್ಞಾನಿಕ ಕಾರಣವೇ ಬೇರೆ ಇದೆ.

ಸಾಮಾನ್ಯವಾಗಿ ನಮಗೆಲ್ಲಾ ಗೊತ್ತೇ ಇರುವ ಹಾಗೆ, ಬಿಕ್ಕಳಿಕೆ ಸಮಸ್ಯೆ ಎನ್ನುವುದು ತಾತ್ಕಾಲಿಕ ವಾಗಿ ಕಂಡುಬರುತ್ತದೆ, ಸ್ವಲ್ಪ ಹೊತ್ತು ಮಾತ್ರ, ಕಾಡುತ್ತದೆ, ಆ ಬಳಿಕ ತನ್ನಷ್ಟಕ್ಕೆ ನಿಂತು ಹೋಗುತ್ತದೆ. ಆದರೆ ಕೆಲವರಿಗೆ, ಎರಡು ಮೂರು ದಿನಗಳು ಕಳೆದರೂ ಕೂಡ, ಈ ಸಮಸ್ಯೆ ಹಾಗೆ ಇರುತ್ತದೆ. ಅಂತಹವರು ಮೊದಲು ವೈದ್ಯರ ಬಳಿ ತೋರಿಸಿಕೊಂಡರೆ ಒಳ್ಳೆಯದು… ಬನ್ನಿ ಇಂದಿನ ಲೇಖನದಲ್ಲಿ ನೈಸರ್ಗಿಕ ಮನೆ ಮದ್ದಿನ ಮೂಲಕ ಬಿಕ್ಕಳಿಕೆ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ ಎನ್ನುವುದನ್ನು ನೋಡೋಣ…

ಏಲಕ್ಕಿ ನೀರು

  • ಮೊದಲು ಸರಿಸುಮಾರು ಐದಾರು ಏಲಕ್ಕಿ ಬೀಜಗಳನ್ನು ತೆಗೆದುಕೊಂಡು ಅದರ ಮೇಲ್ಭಾಗದ ಸಿಪ್ಪೆ ತೆಗೆದು ಒಳಗಿನ ಬೀಜಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ, ಪೌಡರ್ ರೀತಿ ಮಾಡಿಕೊಳ್ಳಿ.
  • ಆ ಬಳಿಕ ಒಂದು ದೊಡ್ಡ ಲೋಟ ಆಗುವಷ್ಟು ನೀರನ್ನು ಕುದಿಯಲು ಬಿಡಿ…
  • ಇದು ಚೆನ್ನಾಗಿ ಕುದಿಯುತ್ತಾ ಇರುವ ಹಾಗೆ, ಏಲಕ್ಕಿ ಪಡರ್ ಅನ್ನು ಬೆರೆಸಿ, ಹಾಗೂ ಈ ಮಿಶ್ರಣಕ್ಕೆ, ಮೂರು-ನಾಲ್ಕು ಪುದೀನಾ ಎಲೆಗಳನ್ನು ಹಾಕಿ, ಉರಿ ಸಣ್ಣಗೆ ಮಾಡಿ, ಸ್ವಲ್ ಹೊತ್ತು ಕುದಿಯಲು ಬಿಡಿ…
  • ಆ ಮೇಲೆ ಗ್ಯಾಸ್ ಒಲೆ ಆಫ್ ಮಾಡಿ, ಸೋಸಿಕೊಂಡು, ಬೆಚ್ಚಗೆ ಇರುವಾಗ ಇದನ್ನು ಸೇವನೆ ಮಾಡಿ.

ಸಕ್ಕರೆ

 

  • ದಿನಾ ಟೀ- ಕಾಫಿಗೆ ಬಳಸುವ ಸಕ್ಕರೆಯ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಸಕ್ಕರೆ ಬಗ್ಗೆ ಹೇಳುವುದಾದರೆ, ಆರೋಗ್ಯದ ವಿಷ್ಯದಲ್ಲಿ ನೋಡುವುದಾದರೆ, ಇದರಿಂದ ದೂರ ಉಳಿದರೆ ಒಳ್ಳೆಯದು… ಅದು ಏನೇ ಇರಲಿ, ಆದ್ರೆ ಬಿಕ್ಕಳಿಗೆ ಸಮಸ್ಯೆಗೆ, ಇದು ಒಳ್ಳೆಯ ಮನೆಮದ್ದು…
  • ಪ್ರಮುಖವಾಗಿ ಸಕ್ಕರೆಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ಕಂಡು ಬರುವು ದರಿಂದ ಬಿಕ್ಕಳಿಕೆ ಸಮಸ್ಯೆಯನ್ನು ಪರಿಣಾಮಕಾರಿ ನಿವಾರಿಸಲು ನೆರವಾಗುತ್ತದೆ.
  • ಹೀಗಾಗಿ ಒಂದು ವೇಳೆ ಸಡನ್ ಆಗಿ, ಬಿಕ್ಕಳಿಗೆ ಕಾಣಿಸಿಕೊಂಡರೆ, ಒಂದು ಟೀ ಚಮಚ ಸಕ್ಕರೆ ಬಾಯಿಗೆ ಹಾಕಿಕೊಂಡು, ಚೆನ್ನಾಗಿ ಜಿಗಿದು, ನುಂಗಿ, ಆ ಬಳಿಕ ಒಂದು ಲೋಟ ನೀರು ಕುಡಿಯಿರಿ. ಹೀಗೆ ಮಾಡು ವುದರಿಂದ ಬಿಕ್ಕಳಿಗೆ ಸಮಸ್ಯೆ ಕೂಡಲೇ ಕಡಿಮೆ ಆಗುತ್ತದೆ.

ಮೊಸರು ಸೇವನೆ ಮಾಡಿ

  • ಹಾಲಿನ ಉಪಉತ್ಪನ್ನವಾದ ಮೊಸರು, ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ.
  • ಅಂತೆಯೇ ಒಂದು ವೇಳೆ, ಸಡನ್ ಆಗಿ ಬಿಕ್ಕಳಿಕೆ ಕಾಣಿಸಿಕೊಂಡರೆ, ಒಂದು ಕಪ್ ಮೊಸರು ಸೇವನೆ ಮಾಡಿದರೆ, ಬಿಕ್ಕಳಿಕೆ ಸಮಸ್ಯೆ ಕಡಿಮೆ ಆಗಿಬಿಡುತ್ತದೆ. ಇದಕ್ಕೆ ಪ್ರಮುಖ ಕಾರಣ, ಮೊಸರಿನಲ್ಲಿ ಆಲ್ಕಲೈನ್ ಎನ್ನುವ ನೈಸರ್ಗಿಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದ ಪಿಹೆಚ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ, ಹಾಗೂ ಜೀರ್ಣಾಂಗ ವ್ಯವಸ್ಥೆಯ ಆಮ್ಲೀಯತೆಯನ್ನು ನಿಯಂತ್ರಿಸುತ್ತದೆ.

ಕರಿಮೆಣಸು

ಖ್ಯಾತ ಆಯುರ್ವೇದ ತಜ್ಞರಾದ ಡಾ. NK ಅವರು ಹೇಳುವ ಪ್ರಕಾರ, ಒಂದು ಟೇಬಲ್ ಚಮಚ ಆಗುವಷ್ಟು ಕರಿಮೆಣಸು ಅಥವಾ ಕಾಳುಮೆಣಸು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಂಡು ಸಣ್ಣಗೆ ಪೌಡರ್ ರೀತಿ ಮಾಡಿಕೊಳ್ಳಿ. ಆ ಬಳಿಕ, ಇದನ್ನು ಚಿಟಿಕೆ ಯಷ್ಟು ಮೂಗಿನಿಂದ ನಶೆಯ ರೀತಿ ತೆಗೆದು ಕೊಳ್ಳಿ. ಇದರಿಂದ ಖಂಡಿತ ಸೀನು ಬರುತ್ತದೆ, ಜೊತೆಗೆ ಬಿಕ್ಕಳಿಗೆ ಸಮಸ್ಯೆ ದೂರವಾಗುತ್ತದೆ.

ಒಂದು ಲೋಟ ತಣ್ಣೀರು ನೀರು ಕುಡಿಯಿರಿ…

ಸಡನ್ ಆಗಿ ಬಿಕ್ಕಳಿಕೆ ಸಮಸ್ಯೆ ಎದುರಾದಾಗ ತಕ್ಷಣ ಒಂದು ಲೋಟ ನೀರು ಕುಡಿಯಬೇಕು ಎಂದು ಖ್ಯಾತ ಆಯುರ್ವೇದ ತಜ್ಞರಾದ ಡಾ. ನಿತಿಕಾ ಕೊಹ್ಲಿ ಅವರು ಹೇಳುತ್ತಾರೆ… ಹೀಗೆ ಮಾಡುವುದರಿಂದ ಬಿಕ್ಕಳಿಕೆ ಸಮಸ್ಯೆ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *