ರೈತ
ದೇಶಕೆಲ್ಲಾ ಅನ್ನದಾತ ಈ ನಮ್ಮ ರೈತ
ಬೆಳೆಯ ಬೆಳೆಯೊ ಜನ್ಮದಾತ
ಸಕಲ ಮನುಕುಲಕೆ ನೀನೆ ಅನ್ನದಾತ
ನೆಲದ ಮಣ್ಣಿನ ಮಗನು ನೀನು
ಹಸಿವ ನೀಗಿಸೋ ಅಮ್ಮನು ನೀನು
ನೀ ಸುರಿಸಿದ ಬೆವರ ಹನಿಯು
ನಮ್ಮೆಲ್ಲರ ಪಾಲಿಗೆ ಶಕ್ತಿಯು
ವರುಣನ ಆಗಮನಕೆ ಕಾಯಲು
ಕಪ್ಪು ಮೋಡವ ಕಂಡು ಆನಂದಿಸೋ ಭುವಿಪುತ್ರ
ನೇಗಿಲ ಹೊತ್ತ ಜೀವಗಳೆರಡು
ಹೆಜ್ಜೆಯ ಜೊತೆ ಹೆಜ್ಜೆಯನಿಕ್ಕುತ ಸಾಗಲು
ಮಣ್ಣನು ಹದಗೊಳಿಸುವ ನಿನ್ನ ಕಾಯಕ
ದೇಶದ ಪ್ರಗತಿಯ ಸಂಕೇತ
ನಿನ್ನ ದುಡಿಮೆಯ ಫಲವು
ಹಸಿರಾಗಿಹುದು ಮಣ್ಣ ಕಣ ಕಣವು
ಜೀವನವಿಡಿ ಸಾಲದ ಸಂಕೋಲೆಯಲ್ಲಿ ನೀ
ಬಂಧಿಯಾಗಿರಲು..
ಕೇಳುವವರಿಲ್ಲ ನಿನ್ನ ಕಷ್ಟವ
ಹಸಿವಿನಿಂದ ಕಂಗಲಾಗಿರಲು ನಿನ್ನ ಪರಿವಾರವು
ಬೇರೊಂದು ಉದರವ ತುಂಬಿಸಲು ಪರಿತಪಿಸುವ ನಿನ್ನ ಗುಣವು
ಆಗಲಿ ಎಲ್ಲರಿಗೂ ಆದರ್ಶವು…
ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ