November 10, 2024
Screenshot_20221222_180814

ಮಂಗಳೂರಿನಲ್ಲಿ ಭಂಡಾರಿ ಕ್ರೀಡಾ ಕೂಟ

ಭಂಡಾರಿ ಸ್ವಯಂ ಸೇವಕ ಸಂಘ ಮಂಗಳೂರು ಇದರ ನೇತೃತ್ವದಲ್ಲಿ ಭಂಡಾರಿ ಸಮಾಜ ಬಂಧುಗಳ ವಾರ್ಷಿಕ ಕ್ರೀಡಾಕೂಟ ಡಿಸೆಂಬರ್ 25 ನೇ ಭಾನುವಾರದಂದು ಮಂಗಳೂರಿನ ಕೆ.ಪಿ.ಟಿ. ಮೈದಾನದಲ್ಲಿ  ನಡೆಯಲಿದೆ.

ರಾಷ್ಟ್ರ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಅನ್ವಿತಾ ಕೊಡವೂರು ಉಡುಪಿ ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ , ರಾಜ್ಯ ಮಟ್ಟದ ಕರಾಟೆ ಪಟು ಅನಘ ಭಂಡಾರಿ ಪ್ರತಿಜ್ಞಾ ಸ್ವೀಕರಿಸಿ , ಸಂಘದ ಅಧ್ಯಕ್ಷೆ ಶ್ರೀಮತಿ ಬಬಿತಾ ಲತೀಶ್ ಅಧ್ಯಕ್ಷತೆ ವಹಿಸಿಲಿದ್ದಾರೆ , ಭಂಡಾರಿ ಯುವ ವೇದಿಕೆಯ ಮಾಜಿ ಅಧ್ಯಕ್ಷ ಶ್ರೀ ಕೃಷ್ಣಾನಂದ ಭಂಡಾರಿ ಧ್ವಜಾರೋಹಣ ಮಾಡಿ , ಎ.ಜೆ.ಆಸ್ಪತ್ರೆ ಮಂಗಳೂರು ಐ.ಎಂ.ಎಸ್.ತುರ್ತು ಚಿಕಿತ್ಸಾ ವಿಭಾಗದ ಮೇಲ್ವಿಚಾರಕಿ ಶ್ರೀಮತಿ ಲೀಲಾವತಿ ಭಾಸ್ಕರ್ ಭಂಡಾರಿ ಕೋಡಿಕಲ್ ಮುಖ್ಯ ಅತಿಥಿಯಾಗಿ ಅಗಮಿಸಲಿದ್ದಾರೆ. ಕ್ರಿಕೆಟ್, ತ್ರೋಬಾಲ್, ವಾಲಿಬಾಲ್ ,
ಹಗ್ಗಜಗ್ಗಾಟ,ಆಟೋಟ ಸ್ವರ್ಧೆಗಳು ಮಡಕೆ ಒಡೆಯುವುದು ಇನ್ನಿತರ ಸ್ವರ್ಧೆಗಳು ಹಾಗೂ ಭಂಡಾರಿ ಸಮಾಜದ ವಧು – ವರರ ನೊಂದಾವಣೆ ನಡೆಯಲಿದೆ.

ಅಂದು ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭ ಬಹುಮಾನ ವಿತರಣೆಯ ಮುಖ್ಯ ಅತಿಥಿಗಳಾಗಿ ಭಂಡಾರಿ ಮಹಾಮಂಡಳದ ಅಧ್ಯಕ್ಷ ಶ್ರೀ ಸದಾಶಿವ ಭಂಡಾರಿ ಸಕಲೇಶಪುರ,ಬೆಂಗಳೂರು ಬಿಜಿಎಸ್ . ಜಿಐಎಮ್ಎಸ್.ಆಸ್ಪತ್ರೆಯ ಸಹಾಯಕ ಪ್ರೊಫೆಸರ್ ಡಾ। ಮೇಜರ್ ರೋಹನ್ ಪಿ.ಜೆ (MD Radiodiagnosis), ಉಡುಪಿ ಪ್ರೊಬೆಷನರಿ ಸಬ್ಇನ್ಸ್ ಪೆಕ್ಟರ್ ನಿಧಿ ಬಿ.ಎನ್., ಭಂಡಾರಿ ಸಮಾಜ ಸಂಘ ಉಡುಪಿಯ ಅಧ್ಯಕ್ಷ ಶ್ರೀ ಗುರುದಾಸ್ ಭಂಡಾರಿ ಹಿರೇಬೆಟ್ಟು , ಭಂಡಾರಿ ಸಮಾಜ ಸಂಘ ಬೆಳ್ತಂಗಡಿಯ ಅಧ್ಯಕ್ಷ ಶ್ರೀ ಉಮೇಶ್ ಭಂಡಾರಿ ಉಜಿರೆ , ರಾಷ್ಟ್ರ ಮಟ್ಟದ ದೇಹದಾರ್ಡ್ಯ ಪಟು ಯಶಸ್ವಿನಿ ವಿ.ಭಂಡಾರಿ , ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶ್ರೀ ರಮಾನಾಥ ಭಂಡಾರಿ ಮತ್ತು ಮಂಗಳೂರು ಭಂಡಾರಿ ಯುವ ವೇದಿಕೆಯ ಅಧ್ಯಕ್ಷ ಶ್ರೀ ನಿತ್ಯಾನಂದ ಭಂಡಾರಿ ಆಗಮಿಸಲಿದ್ದಾರೆಎಂದು ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಇಂದಿನ ಯಾಂತ್ರಿಕ ಬದುಕಿನಲ್ಲಿ ಒಂದು ಕುಟುಂಬದವರು ಒಟ್ಟಾಗುವುದೇ ಕಷ್ಟವಾಗಿರುವಾಗ ಇಡೀ ಸಮಾಜದ ಬಂಧುಗಳೆಲ್ಲ ಒಗ್ಗೂಡಿ , ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಪರಸ್ಪರ ಬಾಂಧವ್ಯತೆಯನ್ನು ಹೆಚ್ಚಿಸುವಲ್ಲಿ ಈ ಕ್ರೀಡಾ ಕೂಟ ವೇದಿಕೆಯನ್ನು ಕಲ್ಪಿಸಿದೆ .ಭಂಡಾರಿ ಸ್ವಯಂ ಸೇವಕ ಸಂಘದ 26 ನೇ ವರ್ಷದ ಈ ಕ್ರೀಡಾ ಕೂಟದ ಸಂಭ್ರಮದಲ್ಲಿ ತಾವೂ ಭಾಗವಹಿಸಿ , ತಮ್ಮ ಕುಟುಂಬದವರನ್ನೂ ಭಾಗವಹಿಸುವಂತೆ ಪ್ರೇರೇಪಿಸಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *