September 20, 2024

 

ವೃತ್ತಿ ಜೀವನದಲ್ಲಿನ ವಿಶೇಷ ಸಾಧನೆಗಾಗಿ ಡಾ. ಸುಮತಿ ಲಕ್ಷ್ಮಣ ಕರಾವಳಿಯವರಿಗೆ ಕರ್ನಾಟಕ ಸರ್ಕಾರದ ವೈದ್ಯರ ಸಂಘ ಬೆಂಗಳೂರು ಗ್ರಾಮೀಣ ಹಾಗೂ ನಗರ ವಿಭಾಗದ ವತಿಯಿಂದ ಉತ್ತಮ ವೈದ್ಯೆ’(ದ ಬೆಸ್ಟ್ ಡಾಕ್ಟರ್) ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಬೆಂಗಳೂರಿನ ಗೋಲ್ಡನ್ ಪಾಮ್ ರೆಸಾರ್ಟ್ ನಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಈ ಗೌರವವನ್ನು ನೀಡಲಾಯಿತು. ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸುಮತಿಯವರು ಬೆಂಗಳೂರಿನ ಉದ್ಯಮಿ ಲಕ್ಷ್ಮಣ್ ಕರಾವಳಿಯವರ ಪತ್ನಿ. ಇವರಿಗೆ ಭಂಡಾರಿ ವಾರ್ತಾ ತಂಡದ ಪರವಾಗಿಯೂ ಹಾರ್ದಿಕ ಅಭಿನಂದನೆಗಳು.

ದಿವ್ಯ ಉಜಿರೆ

 

1 thought on “ಡಾ , ಸುಮತಿ ಲಕ್ಷ್ಮಣ್ ಕರಾವಳಿಯವರಿಗೆ ಸಂದ ಉತ್ತಮ ವೈದ್ಯೆ ಪುರಸ್ಕಾರ

Leave a Reply

Your email address will not be published. Required fields are marked *