November 24, 2024
4

ಬೆಳಗಾವಿ ಕುಂದದ ಇತಿಹಾಸ ಗೊತ್ತೇ? ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು ಗೊತ್ತಾ?

ನೀವು ಬೆಳಗಾವಿಗೆ ಹೋದಾಗ ಅಲ್ಲಿಯ ಪ್ರಸಿದ್ಧ ಸಿಹಿತಿಂಡಿ ಯಾವುದು ಎಂದು ಕೇಳಿದರೆ ಬೇಕರಿಯವರು ಕುಂದ ಹಾಗೂ ಕರದಂಟು ಎಂದು ಹೇಳುತ್ತಾರೆ, ಈ ಸ್ವೀಟ್‌ಗಳ ರುಚಿ ಇಷ್ಟವಾಗದವರೇ ಇರಲ್ಲ ಅಷ್ಟೊಂದು ರುಚಿಯಾಗಿರುತ್ತದೆ.

ಅದರಲ್ಲೂ ಕುಂದ ಸ್ವೀಟ್‌ ಬಾಯಿಗೆ ಹಾಕಿದರೆ ಅದರ ರುಚಿಗೆ ಕರಗಿ ಹೋಗಿಬಿಡುವಿರಿ. ನೀವು ಇದುವರೆಗೆ ಟೇಸ್ಟ್‌ ಮಾಡಿಲ್ಲ ಎಂದಾದರೆ ಬೆಳಗಾವಿ ಕಡೆ ಹೋದಾಗ ಅಥವಾ ಅಲ್ಲಿಯ ಫ್ರೆಂಡ್‌ ಇದ್ದರೆ ತಪ್ಪದೆ ತರಿಸಿ ಸವಿಯಿರಿ. ಇಲ್ಲದಿದ್ದರೆ ನಾವು ಇಲ್ಲಿ ನೀಡಿರುವ ರೆಸಿಪಿಯಂತೆ ಟ್ರೈ ಮಾಡಿ ನೋಡಿ.

ಈ ಸಿಹಿ ತಿಂಡಿ ಯಾವಾಗ ಮೊದಲು ಕಂಡು ಹಿಡಿಯಲಾಯಿತು?

ಈ ಸಿಹಿ ತಿಂಡಿಯನ್ನು ಬೇಕರಿಯವರು ಸೇರಿ 19ನೇ ಶತಮಾನದಲ್ಲಿ ಕಂಡು ಹಿಡಿದರು ಎಂದು ಹೇಳಲಾಗುವುದು. ಈ ಸಿಹಿತಿಂಡಿ ಬೇಗನೆ ಪ್ರಸಿದ್ಧಿ ಪಡೆಯಿತಿ. ಬೆಳಗಾವಿಯಲ್ಲಿ ಯಾವುದೇ ವಿಶೇಷ ಸಮಾರಂಭವಿರಲಿ ಈ ಕುಂದ ಇದ್ದೇ ಇರುತ್ತದೆ, ಕುಂದ ಎಂಬುವುದು ಬೆಳಗಾವಿಯ ಸಿಹಿ ತಿಂಡಿ ಎಂಬುವುದಾಗಿ ಗುರುತಿಸಲ್ಪಟ್ಟಿದೆ.

ಮಣ್ಣಿನ ಮಡಿಕೆಯಲ್ಲಿ ನೀಡಲಾಗುವುದು’

ಈ ಸಿಹಿ ತಿಂಡಿಯನ್ನು ಸಾಮಾನ್ಯವಾಗಿ ಮಣ್ಣಿನ ಮಡಿಕೆಯಲ್ಲಿ ನೀಡಲಾಗುವುದು. ಬೆಳಗಾವಿಗೆ ಯಾರಾದರೂ ಹೋದರೆ ಅಲ್ಲಿಯ ವಿಶೇಷ ಸ್ವೀಟ್‌ ಆಗಿ ಇದನ್ನು ನೀಡುತ್ತಾರೆ. ಕುಂದ ಬೆಳಗಾವಿಯಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆಯುತ್ತಿದೆ, ಹೊರದೇಶದಲ್ಲಿರುವ ಕೆಲವು ಭಾರತೀಯ ರೆಸ್ಟೋರೆಂಟ್‌ಗಳಲ್ಲಿಯೂ ಕುಂದ ಸಿಗುವುದು.

ಕುಂದ ರೆಸಿಪಿ ನೀವು ಮನೆಯಲ್ಲಿ ತಯಾರಿಸುವುದಾದರೆ ಈ ರೀತಿ ಟ್ರೈ ಮಾಡಿ

Kunda Recipe, ಕುಂದ ರೆಸಿಪಿ
Kunda Recipe, ಕುಂದ ರೆಸಿಪಿ PREP TIME 20 Mins

COOK TIME 1H0M

TOTAL TIME 1 Hours20

Mins Recipe

INGREDIENTS ಬೇಕಾಗುವ ಸಾಮಗ್ರಿ 4 ಕಪ್ ಹಾಲು 1 ಕಪ್ ಸಕ್ಕರೆ 3 ಚಮಚ ಜೋಳದ ಹಿಟ್ಟು 1 ಚಮಚ ಏಲಕ್ಕಿ ಪುಡಿ ಚಿಟಿಕೆಯಷ್ಟು ಕೇಸರಿ

HOW TO PREPARE ಮಾಡುವ ವಿಧಾನ

* ದಪ್ಪವಾದ ತಳದ ಬಾಣಲೆಗೆ ಹಾಲನ್ನು ಹಾಕಿ ಸಾಧಾರಣ ಉರಿಯಲ್ಲಿ ಕುದಿಸಿ. ಹಾಲು ಮಂದವಾಗಬೇಕು.

* ಒಂದು ಚಿಕ್ಕ ಬೌಲ್‌ನಲ್ಲಿ ಜೋಳದ ಹಿಟ್ಟಿಗೆ 1/4 ಕಪ್‌ ನೀರು ಹಾಕಿ ಪೇಸ್ಟ್‌ ರೀತಿ ಮಾಡಿ

* ಈಗ ಕುದಿಯುತ್ತಿರುವ ಮಂದ ಹಾಲಿಗೆ ಪೇಸ್ಟ್‌ ರೀತಿ ಮಾಡಿದ ಜೋಳದ ಹಿಟ್ಟು ಸೇರಿಸಿ, ಆದರೆ ಗಂಟು-ಗಂಟಾಗದಂತೆ ಎಚ್ಚರವಹಿಸಿ.

* ಈಗ ಉರಿಯನ್ನು ಕಡಿಮೆ ಮಾಡಿ ಮತ್ತಷ್ಟು ಕುದಿಸಿ. ಆಗಾಗ ತಿರುಗಿಸುತ್ತಲೇ ಇರಬೇಕು. ಪ್ಯಾನ್‌ನಿಂದ ಬಿಟ್ಟು ಬರಬೇಕು, ಅಷ್ಟು ಹೊತ್ತು ತಿರುಗಿಸುತ್ತಲೇ ಬೇಯಿಸಿ

* ಈಗ ಸಕ್ಕರೆ ಹಾಗೂ ಏಲಕ್ಕಿ ಸೇರಿಸಿ ಮತ್ತೊಮ್ಮೆ ತಿರುಗಿಸಿ. *ಈಗ ಕೇಸರಿ ಸೇರಿಸಿ ತಿರುಗಿಸಿ.

*ಈಗ ಒಂದು ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಮಿಶ್ರಣ ಸುರಿಯಿರಿ, ನಂತರ ತಣ್ಣಗಾದ ಮೇಲೆ ಇದನ್ನು ಕಟ್‌ ಮಾಡಿ ಸವಿಯಲು ನೀಡಬಹುದು.

INSTRUCTIONS ಹಾಲನ್ನು ಸಾಧಾರಣ ಉರಿಯಲ್ಲಿ ಕುದಿಸಿ ಹಾಲು ತುಂಬಾ ಮಂದವಾದ ಬಳಿಕವಷ್ಟೇ ಜೋಳದ ಹಿಟ್ಟು ಬಳಸಿ

NUTRITIONAL INFORMATION 50g – ಕ್ಯಾಲೋರಿ – 338 ಕೊಬ್ಬು – 14ಗ್ರಾಂ ಪ್ರೊಟೀನ್ – 11 ಗ್ರಾಂ ಕಾರ್ಬ್ಸ್ – 42ಗ್ರಾಂ

 

SB

Leave a Reply

Your email address will not be published. Required fields are marked *