ತುಳುನಾಡಿನ ತುಳುವರಿಗೆ ಬಲಿಚಕ್ರವರ್ತಿ ಅರಸನಾಗಿದ್ದು, ಆತನಿಗೆ ನಾಲ್ಕು ಕೈಯುಳ್ಳ ನಾರಾಯಣ ದೇವರು ವಾಮನ ರೂಪದಲ್ಲಿ ಕೊಟ್ಟ ಅಭಯ ಈ ರೀತಿ ಇದೆ. “ಕರ್ಗಲ್ಲ್ ಕಾಯನಗ, ಬೋರ್ಗಲ್ಲ್ ಪೂ ಪೋನಗ, ಉಪ್ಪು ಕರ್ಪೂರಾನಗ, ಜಾಲ್ ಪಾತೆ ಆನಗ, ಉರ್ದು ಮದ್ದೊಲಿ ಆನಗ, ಗೊಡ್ಡೆರ್ಮೆ ಗೋಣೆ ಆನಗ, ಎರು ದಡ್ಡೆ ಆನಗ, ತುಂಬೆದಡಿಟ್ ಕೂಟ ಆನಗ, ನೆಕ್ಕಿದಡಿಟ್ ಆಟ ಆನಗ, ದೆಂಬೆಲೆಗ್ ಪಾಪು ಪಾಡ್ನಗ, ಅಲೆಟ್ ಬೊಲ್ನೈ ಮೂರ್ಕುನಗ, ಗುರುಗುಂಜಿದ ಕಲೆ ಮಾಜಿನಗ, ಮಂಜಲಕ್ಕಿ ಮೈ ದೆಪ್ಪುನಗ, ಕೊಟ್ರುಂಞ ಕೊಡಿಜಾನಗ, ನಿನ್ನರಾಜ್ಯೊಗ್ ಈ ಬತ್ತುದ್ ನಿನ್ನ ರಾಜ್ಯ ಮಾಡೊಡು ಅರತ್ತಾನ ಆಳೊಡು” ಎಂಬ ನುಡಿಯಂತೆ, ಕೆಲವೊಂದು ಘಟನೆಗಳು ನಡೆದು ಕಲಿಯುಗಾಂತ್ಯ ವಾಗುವಕಾಲಕ್ಕೆ ಬಲಿಯು ಪ್ರವೇಶಿಸುವರೇ ಕೊಟ್ಟ ವರ ಇದಾಗಿದೆ.
ಜಂಬೂದ್ವೀಪದ ಭರತಖಂಡದ ದಕ್ಷಿಣದ ತುಳುನಾಡು ಬಲಿಚಕ್ರವರ್ತಿ ಆಳುತ್ತಿದ್ದ ರಾಜ್ಯವೆಂದು ತುಳುವರ ಅಭಿಪ್ರಾಯ. ಬಲಿಯನ್ನು ನೆತ್ತಿ ಮೇಲೆ ಪಾದವಿಟ್ಟು ಪಾತಾಳಕ್ಕೆ ಕಳುಹಿಸಿದ ಕತೆಯು ಪುರಾಣದಲ್ಲಿ ಇದ್ದರೆ. ತುಳುನಾಡ ಬಲಿಯೇಂದ್ರನನ್ನು ಆಫ್ರಿಕಾ ಖಂಡದ “ಪೋತಾಳ” ಎಂಬಲ್ಲಿಗೆ ಕಳುಹಿಸಿದನೆಂದು ಪಾಡ್ಡನ ಮೂಲದಿಂದ ತಿಳಿಯುತ್ತದೆ. ಏಳುಕಡಲಾಚೆ ಇರುವ ಸ್ಥಳ ಪೋತಾಳ ಈಗ ಆಫ್ರಿಕಾ ದೇಶದಲ್ಲಿ ಇದೆ. ತುಳುವರು ನಾಗಾರಾದಕರು ಅದರಂತೆ ಅಲ್ಲಿಯೂ ನಾಗರನ್ನು ಆರಾಧಿಸುತ್ತಿದ್ದಾರೆ. ಬಲೀಂದ್ರನು ದೋಣಿಯಲ್ಲಿ ಹೋಗುವ ವಿವರ ಪಾಡ್ದಾನದಲ್ಲಿ ಇದೆ. ಹಿಂದೆ ಯಾವುದೊ ಭೂಕಂಪನಕ್ಕೆ ಒಳಗಾಗಿ ಭಾರತಕ್ಕೆ ತಾಗಿಕೊಂಡಿರುವ ಆಫ್ರಿಕಾ ಖಂಡ, ದೂರವಾಗುವ ಸ್ಥಿತಿ ಬಂದು ತುಳುವರ ಕೆಲವು ಸಂಸ್ಕೃತಿ. ಅಲ್ಲಿ ಉಳಿದಿರಬೇಕು. ಬಲೀಂದ್ರನಿಗೆ ವಾಮನಮೂರ್ತಿ ಈ ರೀತಿ ಹೇಳುತ್ತಾನೆ. “ಆಟಿದ ಅಮಾಸೆಗ್ ಆಳ್ ಕಡಪುಡು, ಸೋಣದ ಸಂಕ್ರಾಂತಿಗ್ ಅಪ್ಪೆನ್ ಕಡಪುಡು, ಬೊಂತೆಲ್ ಅಮಾಸೆಗ್ ಆಜಿ ದಿನದ ಬಲಿ, ಮೂಜಿ ದಿನತ ಪೊಲಿ, ದೀಪೊಲೆ ಪರ್ಬೊಗು ಈ ಬಲ ಪಂದ್ ಕೊರ್ತಿ ಅಭಯದ ಲೆಕ್ಕ, ತುಳುವೆರ್ ಬಲಿನ ತಾದಿತೂವೊಂದು ಇಪ್ಪುಬೆರ್ ಪನ್ಪುನವು ಸತ್ಯ.” ಈ ಬಲಿಚಕ್ರವರ್ತಿ ಪರಮ ವೈಷ್ಣವ ನಾದಪ್ರಹ್ಲಾದನ ವಂಶದವ. ಆದುದರಿಂದ ಶ್ರೀಮನ್ನಾರಾಯಣನಿಂದ ಆತನಿಗೆ ಗದಿಪಾರು ಶಿಕ್ಷೆಯಾದರೂ, ಆತನ ಪಾತಾಳದ ದ್ವಾರ ಕಾಯುವ ಸೇವಕನಾಗಬೇಕಾಯಿತು. ತುಳುವರು ಬಲಿಪಾಡ್ಯದಂದು, ಕೃಷಿ ಉಪಕರಣಗಳಿಗೆ ಪೂಜೆ ಮಾಡುತ್ತಾರೆ. ದೈವ, ದೇವರ ಸ್ಥಾನಮಾನದಲ್ಲಿ, ಬೆಳಕಿನ ಮರಹಾಕಿ ದೀಪವಿಡುತ್ತಾರೆ. ನಾಗಜನಾಂಗದವರು ವಿಶೇಷವಾಗಿ ಬಲಿಯನ್ನು ದೇವರೆಂದೇ ಆರಾಧಿಸುತ್ತಾರೆ. ಬಲಿ ದಾನ ಮಾಡಿರುವುದರಿಂದ “ಬಲಿದಾನ” ಎಂಬ ಶಬ್ದ ಬರಲು ಕಾರಣವಾಗಿದೆ. ತುಳುನಾಡ ಬಲಿಯೇಂದ್ರ ತುಳುವರೆ ದೊರೆಯಾಗಿ ಇಂದಿಗೂ ಆರಾಧಿಸ್ಪಡುತ್ತಿದ್ದಾನೆ.