September 20, 2024

ಶಿವಮೊಗ್ಗ ಜಿಲ್ಲೆಯಲ್ಲಿಯೇ ಶಿರಾಳಕೊಪ್ಪದ ದಸರಾ ಮೆರವಣಿಗೆ ಅತೀ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ದತಿ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಶಿರಾಳಕೊಪ್ಪದಲ್ಲಿ “ದಸರಾ ಮೆರವಣಿಗೆ” ಯನ್ನು ಆಯೋಜಿಸಿ,ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ,ಬನ್ನಿ ಮರದ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು,ಶುಭ ಹಾರೈಸುವುದು ನಮ್ಮೂರಿನ ಸಂಪ್ರದಾಯ.ಮೆರವಣಿಗೆಯಲ್ಲಿ ಪಟ್ಟಣದ ಇಪ್ಪತ್ತಕ್ಕೂ ಹೆಚ್ಚು ದೇವಸ್ಥಾನಗಳ ದೇವರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತರುತ್ತಾರೆ. ಊರಿನ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಕೀಲು ಕುದುರೆ,ನಂದೀಕೋಲು,ವೀರಗಾಸೆ, ಡೊಳ್ಳು, ಭಜನೆ, ಜಾಂಝ್ ಮುಂತಾದ ಜಾನಪದ ಕಲಾಪ್ರಕಾರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸುತ್ತವೆ.

ಈ ಬಾರಿಯ ದಸರಾ ಮೆರವಣಿಗೆಯ ಕೇಂದ್ರಬಿಂದು ಕಲಾವಿದ “ರತ್ನಾಕರ್ ಭಂಡಾರಿಯವರ ” ಕೈಚಳಕದಲ್ಲಿ ಮೂಡಿಬಂದ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ “ಹಂಪಿಯ ಕಲ್ಲಿನ ರಥ“.ಥರ್ಮಾಕೋಲ್ ನಿಂದ ನಿರ್ಮಿಸಲಾಗಿದ್ದರೂ ಜನ ನಿಬ್ಬೆರಗಾಗುವಷ್ಟು ನೈಜವಾಗಿ ಮೂಡಿಬಂದಿತ್ತು.ನೆರೆದಿದ್ದ ಜನಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಶಿರಾಳಕೊಪ್ಪದಲ್ಲಿ ಮದುವೆ ಮತ್ತು ಶುಭ ಸಮಾರಂಭಗಳಿಗೆ ಫ್ಲವರ್ ಡೆಕೋರೆಷನ್, ಸ್ಟೇಜ್ ಡೆಕೋರೆಷನ್, ಚಿತ್ರ ಬಿಡಿಸುವ ಕಲಾವಿದ, ಟ್ಯಾಟೂ ಕಲಾವಿದ, ವ್ಯಂಗ್ಯಚಿತ್ರ ಕಲಾವಿದ ಹೀಗೆ ಹಲವಾರು ಪ್ರತಿಭೆಗಳ ಸಂಗಮದಿಂದ ಹೆಸರಾಗಿರುವ ” ರತ್ನಾಕರ್ ಭಂಡಾರಿ “ಯವರು ನಮ್ಮ ಭಂಡಾರಿ ಕುಟುಂಬದ ಅಪ್ಪಟ ದೇಸಿ ಪ್ರತಿಭೆ.

ರತ್ನಾಕರ್ ಭಂಡಾರಿ“ಯವರ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಬೆನ್ನೆಲುಬಾಗಿ ನಿಂತವರು ಶಿರಾಳಕೊಪ್ಪದ ಗೆಳೆಯರಾದ ಶ್ರೀ ಕಣ್ಣನ್,ಶ್ರೀ ಕಿರಣ್, ಶ್ರೀ ಬಾಲಾಜಿ ನಾಯ್ಕ್,ಶ್ರೀ ಮಂಜುನಾಯ್ಕ್ ಮತ್ತು ಸಹೋದರ ಭಾಸ್ಕರ್ ಭಂಡಾರಿ. “ರತ್ನಾಕರ್ ಭಂಡಾರಿ” ಯವರಿಗೆ ಶುಭ ಕೋರಲು ಅವರ ವಾಟ್ಸ್ಯಾಪ್ ನಂಬರ್ “9964502744“.

ಈ ಸಂದರ್ಭದಲ್ಲಿ ” ತ್ನಾಕರ್ ಭಂಡಾರಿ “ಯವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ನಮ್ಮ”ಭಂಡಾರಿವಾರ್ತೆ” ತಂಡವು ಶುಭ ಹಾರೈಸುತ್ತದೆ.

ಭಾಸ್ಕರ್ ಭಂಡಾರಿ. ಸಿ.ಆರ್. ಶಿರಾಳಕೊಪ್ಪ.

Leave a Reply

Your email address will not be published. Required fields are marked *