ರಾಮ ನವಮಿಗೆ ಮಾಡುವ ಈ ಬೆಲ್ಲದ ಹಣ್ಣಿನ ಪಾನಕ ಬೇಸಿಗೆಯ ಕಾಯಿಲೆ ತಡೆಗಟ್ಟುವ ಸೂಪರ್ ಮದ್ದು
ಬೇಸಿಗೆ ಬಂತೆಂದರೆ ಪಾನಕ ಇರಲೇಬೇಕು, ಈ ಬಿರು ಬಿಸಿಲಿನಲ್ಲಿ ಓಡಾಡಿ ಬಂದು ಪಾನಕ ಕುಡಿದರೆ ಇದೆಯೆಲ್ಲಾ ಸುಸ್ತು ಹೇಳದೆ ಕೇಳದೆ ಓಡಿ ಹೋಗುವುದು.
ಕರ್ನಾಟಕದಲ್ಲಿ ತರಾವರಿ ಪಾನಕ ರೆಸಿಪಿ ತಯಾರು ಮಾಡುತ್ತಾರೆ. ರಾಮ ನವಮಿ ಪಾನಕ, ಬೆಲ್ಲದ ಹಣ್ಣಿನ ಪಾನಕ ಹೀಗೆ ವಿವಿಧ ರುಚಿಯ ಪಾನಕ ರೆಸಿಪಿ ತಯಾರಿಸುತ್ತಾರೆ.
ತುಂಬಾನೇ ಆರೋಗ್ಯಕರ
ಬೇಸಿಗೆಯಲ್ಲಿ ಈ ಪಾನಕ ಕುಡಿಯಲು ತುಂಬಾ ಹಿತವಾಗಿರುತ್ತದೆ, ಅಲ್ಲದೆ ದೇಹದ ಉಷ್ಣತೆ ಕಡಿಮೆ ಮಾಡುವುದು. ಈ ಪಾನಕ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಅಲ್ಲದೆ ಬೇಸಿಗೆಯಲ್ಲಿ ಕಾಡುವ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು.
ಕೆಲವರಿಗೆ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಮೈ ತುರಿಕೆ, ಮೈಯಲ್ಲಿ ಗುಳ್ಳೆಗಳು ಏಳುವುದು, ಮಲಬದ್ಧತೆ, ಸುಸ್ತು ಹೀಗೆ ಹಲವು ಸಮಸ್ಯೆ ಉಂಟಾಗುವುದು. ಅವುಗಳನ್ನು ಹೋಗಲಾಡಿಸಲು ಪಾನಕ ತುಂಬಾನೇ ಸಹಕಾರಿ.
ದೊಡ್ಡ-ದೊಡ್ಡ ಕಾಯಿಲೆ ಕೂಡ ತಡೆಗಟ್ಟುತ್ತದೆ
ಈ ಪಾನಕ ಎಂಥ ಅದ್ಭುತ ಪ್ರಯೋಜನವೆಂದರೆ ಅಲ್ಸರ್, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಅಸ್ತಮಾ, ಒಣ ಕೆಮ್ಮು ಇವುಗಳನ್ನು ತಡೆಗಟ್ಟುತ್ತದೆ. ಯಾವಾಗ ಸೂರ್ಯನ ತಾಪಮಾನ ಹೆಚ್ಚಾಗುತ್ತದೆ ಎಂದು ನಿಮಗಿಸುವುದೋ ಈ ಪಾನಕ ಮಾಡಿ ಕುಡಿಯಿರಿ ದೇಹ ತುಂಬಾನೇ ತಂಪಾಗಿರುತ್ತದೆ.
ಬೆಲ್ಲದ ಹಣ್ಣುನ ಪಾನಕ’
ಈ ಹಣ್ಣಿನಿಂದಲೂ ರಾಮನವಮಿಗೆ ಪಾನಕ ತಯಾರಿಸಬಹುದು. ಬರೀ ಹಬ್ಬದ ಸಮಯದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಯಾವ ಸಮಯದಲ್ಲಿ ಇದನ್ನು ಮಾಡಿ ಕುಡಿದರೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಬೆಲ್ಲದ ಹಣ್ಣಿನ ಪಾನಕ ಮಾಡುವ ವಿಧಾನ
1 ಬೆಲ್ಲದ ಹಣ್ಣು
80 ಗ್ರಾಂ ಬೆಲ್ಲ
ಅರ್ಧ ಲೀಟರ್ ನೀರು
ಚಿಟಿಕೆಯಷ್ಟು ಉಪ್ಪು ಸ್ವಲ್ಪ
ಏಲಕ್ಕಿ ಪುಡಿ
1/2 ಚಮಚ ಶುಂಠಿ ಪುಡಿ
1 ಚಮಚ ನಿಂಬೆರಸ
1/2 ಚಮಚ ಕಾಳು ಮೆಣಸಿನ ಪುಡಿ
* ನೀವು ಬೆಲ್ಲದ ಹಣ್ಣನ್ನು ಕಲ್ಲಿನಿಂದ ಜಜ್ಜಿ ಅಥವಾ ತೆಂಗಿನಕಾಯಿ ಒಡೆಯುವಂತೆ ಒಡೆಯಿರಿ. ನಂತರ ಅದರೊಳಗಿನ ತಿರುಳನ್ನು ಚಮಚದಲ್ಲಿ ತೆಗೆದು ಒಂದು ಬೌಲ್‌ಗೆ ಹಾಕಿ.
* ಈಗ ಒಂದು ಕಪ್ ನೀರು ಹಾಕಿ ಹುಣಸೆ ಹಣ್ಣನ್ನು ಕಿವುಚಿ ಹಿಂಡುತ್ತೇವೆ ಅಲ್ವಾ ಆ ರೀತಿ ಹಿಂಡಬೇಕು, ಆಗ ಇದರ ರಸ ನೀರಿಗೆ ಬಿಡುತ್ತದೆ. ಆ ನೀರನ್ನು ಸೋಸಿ ಒಂದು ಪಾತ್ರೆಯಲ್ಲಿ ಹಾಕಿ. ಈಗ ಅದೇ ಬೆಲ್ಲದ ಹಣ್ಣಿನ ತಿರುಳಿಗೆ ಮತ್ತೆ ಸ್ವಲ್ಪ ನೀರು ಹಾಕಿ ಹಿಂಡಿ ರಸ ತೆಗೆಯಿರಿ. ಈ ರೀತಿ 3-4 ಬಾರಿ ಮಾಡಿ.
* ನಂತರ ಬೆಲ್ಲದ ಹಣ್ಣಿನ ರಸಬಿಟ್ಟ ನೀರಿಗೆ ಬೆಲ್ಲ ಹಾಕಿ ಕರಗಲು ಬಿಡಿ.
* ಈಗ ಶುಂಠಿ ಪುಡಿ, ಕಾಳು ಮೆಣಸಿನ ಪುಡಿ, ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ, ಚಿಟಿಕೆಯಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಬೆಲ್ಲದ ಹಣ್ಣಿನ ಪಾನಕ ರೆಡಿ.
ಬೆಲ್ಲದ ಹಣ್ಣಿನ ಪಾನಕ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
* ಬೇಸಿಗೆಯಲ್ಲಿ ಕಾಡುವ ಬೇಧಿ, ಕಾಲರ ಈ ಬಗೆಯ ಕಾಯಿಲೆಗೆ ಕಾರಣವಾಗುವ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ.
* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
* ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿ
* ರಕ್ತವನ್ನುಬಶುದ್ಧೀಕರಿಸುತ್ತದೆ
* ತ್ವಚೆ ಅಲರ್ಜಿ ತಡೆಗಟ್ಟುತ್ತದೆ
* ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
* ಕ್ಯಾನ್ಸರ್ ಅಪಾಯ ಕೂಡ ಕಡಿಮೆ ಮಾಡುತ್ತದೆ
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: BS