December 3, 2024
1

ಆರೋಗ್ಯದಲ್ಲಿ ಹೀಗೆಲ್ಲಾ ಲಕ್ಷಣಗಳು ಕಂಡುಬಂದರೆ, ಲಿವರ್‌ ಪ್ರಾಬ್ಲಮ್‌ನಲ್ಲಿದೆ ಎಂದರ್ಥ!

Symptoms of Cirrhosis of The Liver Disease: ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಲಿವರ್ ಪಾತ್ರವನ್ನು ಮರೆಯುವಂತಿಲ್ಲ. ಹೀಗಾಗಿ ಲಿವರ್‌ನಲ್ಲಿ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬೇಕು. ಒಂದು ವೇಳೆ ಈ ಸಮಸ್ಯೆಗಳು ಕಂಡು ಬಂದರೆ ಏನೆಲ್ಲಾ ಸಮಸ್ಯೆಗಳು ಕಂಡು ಬರುತ್ತದೆ ಎನ್ನುವುದನ್ನು ನೋಡೋಣ…

ದೇಹದಲ್ಲಿ ಇರುವಂತಹ ಬಹುತೇಕ ಅಂಗಾಂಗಗಳಲ್ಲಿ ನಮ್ಮ ಲಿವರ್ ಕೂಡ ಒಂದು. ದೇಹದಲ್ಲಿ ಕಂಡು ಬರುವ ಇತರ ಅಂಗಾಂಗಗಳಿಗೆ ಹೋಲಿಸಿದರೆ, ಇದೊಂದು ಪ್ರಮುಖವಾದ ಅಂಗ ಮಾತ್ರವಲ್ಲದೆ, ಗಾತ್ರದಲ್ಲಿಯೂ ಕೂಡ ತುಂಬಾನೇ ದೊಡ್ಡದಾಗಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ದಿನದ 24 ಗಂಟೆಯೂ ಸಹ ಬಿಡುವಿಲ್ಲದೆ ದುಡಿಯುವ, ಅಂಗಾಂಗಗಳಲ್ಲಿ ಲಿವರ್ ಕೂಡ ಪ್ರಮುಖ ಸ್ಥಾನಗಳಲ್ಲಿ ನಿಲ್ಲುತ್ತದೆ. ಹೀಗಾಗಿ ಮನುಷ್ಯನ ಲಿವರ್ ನಲ್ಲಿ ಸಮಸ್ಯೆಗಳು ಕಂಡು ಬಂದರೆ ಅದರಿಂದ ಹಲವು ಬಗೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ! ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ಇಡೀ ದೇಹದ ಕಾರ್ಯ ಚಟುವಟಿಕೆ ಯನ್ನು ಸಮತೋಲನದಲ್ಲಿಡಲು ಲಿವರ್‌ ಕೂಡ ಬಹುಮುಖ್ಯ ಅಂಗ ಎಂದರೆ ತಪ್ಪಾಗಲಾರದು..

ಲಿವರ್‌ ಹೇಗೆ ಕೆಲಸ ಮಾಡುತ್ತದೆ?

  • ದೇಹದ ಇತರ ಅಂಗಾಂಗಗಳಂತೆ ಲಿವರ್ ಒಂದು ಪ್ರಮುಖ ಅಂಗಾಂಗವಾಗಿದ್ದು, ನಮಗೆ ಅದರ ಆರೈಕೆ ಬಹಳ ಮುಖ್ಯವಾಗುತ್ತದೆ
  • ಏಕೆಂದರೆ ನಮ್ಮ ದೇಹದಲ್ಲಿ ಶೇಖರಣೆ ಗೊಳ್ಳುವ ವಿಷಕಾರಿ ಅಂಶಗಳನ್ನು ಹೊರ ಹಾಕುವ ಕೆಲಸದಿಂದ ಹಿಡಿದು, ಕೊಬ್ಬಿ ನಾಂಶಗಳನ್ನು ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಅಂಶವನ್ನು ಮೆಟಬಾಲಿಸಂ ಪ್ರಕ್ರಿಯೆಗೆ ಒಳಪಡಿಸುತ್ತದೆ.
  • ಇವೆಲ್ಲದರ ಜೊತೆಗೆ ಬೈಲ್ ಜ್ಯೂಸ್ ಉತ್ಪತ್ತಿ ಮಾಡುವ ಲ್ಲಿಯೂ ಇದರ ಕಾರ್ಯವನ್ನು ಮರೆಯುವ ಹಾಗಿಲ್ಲ.

ಲಿವರ್ ಸಮಸ್ಯೆ ಹೇಗೆ ಕಾಣಿಸಿಕೊಳ್ಳುತ್ತದೆ

ಮಧ್ಯಪಾನ ಹೆಚ್ಚಾಗಿ ಮಾಡಿದರೆ ಲಿವರ್ ಹಾಳಾಗುತ್ತದೆ ಎಂದು ಕೇಳಿದ್ದೇವೆ. ಹೌದು ಇದು ನಿಜ ಕೂಡ ಅತಿಯಾಗಿ ಮದ್ಯಪಾನ ಹಾಗೂ ಧೂಮಪಾನ ಹಾಗೂ ಎಣ್ಣೆಯಾಂಶ ಹೆಚ್ಚಿರುವ ಫಾಸ್ಟ್ ಫುಡ್ ಸೇವನೆ ಮಾಡುವವರಲ್ಲಿ, ಲಿವರ್ ಸಮಸ್ಯೆ ಕಾಣಿಸಿಕೊಳ್ಳು ವುದರ ಜೊತೆಗೆ ಲಿವರ್ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ.

ಲಿವರ್ ಕಾಯಿಲೆಯ ಲಕ್ಷಣಗಳು

  • ವಾಕರಿಕೆ, ವಾಂತಿ, ಹೊಟ್ಟೆನೋವು, ಹೊಟ್ಟೆ ಹಸಿವು ಇಲ್ಲದಾಗುವುದು ಜೊತೆಗೆ ಇದ್ದಕ್ಕಿದಂತೆ ದೇಹದ ತೂಕ ಕಡಿಮೆ ಆಗಿಬಿಡುವುದು!
  • ದೇಹದೊಳಗಿನ ಲಿವರ್‌ನಲ್ಲಿ ಸಮಸ್ಯೆಗಳು ಕಂಡು ಬಂದಾಗಲೂ ಕೂಡ ಬಾಯಿಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆಯಂತೆ!
  • ಬೆಳಗ್ಗೆ ಎದ್ದಾಗ ಕಣ್ಣು- ಉಗುರುಗಳ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದ್ದರೆ, ದೇಹದ ಲಿವರ್ ಭಾಗಕ್ಕೆ ಏನೋ ಸಮಸ್ಯೆ ಆಗಿದೆ ಎಂದರ್ಥ
  • ಮೂತ್ರ ಬಣ್ಣದಲ್ಲಿ ಬದಲಾವಣೆಗಳು ಕಂಡು ಬರುವುದು ಪದೇ ಪದೇ ಸುಸ್ತು, ಆಯಾಸ ಕಾಣಿಸಿಕೊಳ್ಳುವುದು

ಹಾಗಾದ್ರೆ ಲಿವರ್ ಸಮಸ್ಯೆ ಬರದೇ ಇರುವ ಹಾಗೆ ಏನು ಮಾಡಬೇಕು?

  • ಹಸಿರೆಲೆ ಸೊಪ್ಪು-ತರಕಾರಿಗಳನ್ನು ಆದಷ್ಟು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕೆಲವೊಂದು ತರಕಾರಿಗಳಲ್ಲಿ ಯಥೇಚ್ಛವಾಗಿ ಸೋಡಿಯಂ, ಸಲ್ಪರ್, ನಯಾಸಿನ್, ಖನಿಜಾಂಶ ಗಳು, ಪ್ರೋಟೀನ್ ಅಂಶಗಳು ಕಂಡುಬರುತ್ತವೆ.
  • ಇವು ನಮ್ಮ ದೇಹದ ಪ್ರಮುಖ ಅಂಗವಾದ ಲಿವರ್ ಭಾಗವನ್ನು ಆರೋಗ್ಯಕರವಾಗಿ ಇರಿಸಲು ನೆರವಾಗುತ್ತದೆ. ಇದಕ್ಕೆ ಉದಾಹರ ಣೆ ಎಂದರೆ ಎಲೆಕೋಸು, ಬೀನ್ಸ್, ಕ್ಯಾರೆಟ್, ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳು ಎಂದು ಹೇಳಬಹುದು

ಒಣಫಲಗಳನ್ನು ಸೇವನೆ ಮಾಡಿ

  • ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಪ್ರತಿದಿನ ಸುಮಾರು ನಾಲ್ಕು ಬಾದಾಮಿ ಬೀಜಗಳನ್ನು ಸಿಪ್ಪೆ ತೆಗೆದು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಬಹಳ ಒಳ್ಳೆಯದು.
  • ಯಾಕೆಂದ್ರೆ ಇದರಲ್ಲಿ ಕಂಡು ಬರುವ ಕೆಲವೊಂದು ಪೌಷ್ಟಿಕ ಸತ್ವಗಳು ಲಿವರ್ ಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ನಾವು ಸೇವನೆ ಮಾಡಿದ ಆಹಾರದಿಂದ ಕಂಡು ಬರುವ ವಿಷಕಾರಿ ತ್ಯಾಜ್ಯಗಳು ಸಂಪೂರ್ಣವಾಗಿ ಬಿಡುಗಡೆಯಾಗುವಂತೆ ಮಾಡುತ್ತವೆ.
  • ಇದರ ಜೊತೆಗೆ ಆಗಾಗ ದಿನದಲ್ಲಿ ಮಿತ ಪ್ರಮಾಣದಲ್ಲಿ ಒಣದ್ರಾಕ್ಷಿ, ಒಣಖರ್ಜೂರ, ಒಣಅಂಜೂರ, ವಾಲ್ನಟ್, ಪಿಸ್ತಾ ಇತ್ಯಾದಿಗಳನ್ನು ಸೇವನೆ ಮಾಡುತ್ತಾ ಬಂದರೆ ಆರೋಗ್ಯ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ! ​

ಆರೋಗ್ಯಕಾರಿ ಜೀವನಶೈಲಿ ಅನುಸರಿಸಿ

  • ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನ ಶೈಲಿಯಿಂದ ದೂರವಿರಬೇಕು. ಮುಖ್ಯವಾಗಿ ಮಧ್ಯಪಾನ ಹಾಗು ಧೂಮಪಾನವನ್ನು ಕೈಬಿಡಬೇಕು.
  • ಇವೆಲ್ಲದರ ಜೊತೆಗೆ ದೇಹದ ತೂಕ ಹೆಚ್ಚಾಗದಂತೆ ನೋಡಿ ಕೊಂಡರೆ ಒಳ್ಳೆಯದು. ಇದಕ್ಕಾಗಿ ಪ್ರತಿದಿನ ವ್ಯಾಯಾಮ, ವಾಕಿಂಗ್, ಯೋಗಾಭ್ಯಾಸಗಳನ್ನು ಮಾಡುವುದ ರಿಂದ,ಇಂತಹ ಆರೋಗ್ಯ ಸಮಸ್ಯೆಗಳಿಂದ ದೂರವಿರ ಬಹುದು

ವೈದ್ಯರ ಮಾತು

  • ಲಿವರ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಾಗ ವ್ಯಕ್ತಿಯಲ್ಲಿ ಅಷ್ಟು ಬೇಗನೇ ಇದರ ಲಕ್ಷಣಗಳು ಗೋಚರಿಸುವುದಿಲ್ಲ. ಸುಮಾರು 80% ಕ್ಕಿಂತ ಹೆಚ್ಚು ಈ ಲಿವರ್ ಭಾಗ ಹಾನಿ ಗೊಳಗಾದಾಗ ಮಾತ್ರ ರೋಗಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ.
  • ಸಾಮಾನ್ಯವಾಗಿ ಲಿವರ್ ಕಾಯಿಲೆ ಕಾಣಿಸಿಕಂಡಾಗ ಆರಂಭದಲ್ಲಿ ಮನುಷ್ಯನಿಗೆ ಸುಸ್ತು, ಆಯಾಸದಂತಹ ಲಕ್ಷಣಗಳು ಕಂಡು ಬರುತ್ತದೆ.
  • ನಂತರದ ದಿನಗಳಲ್ಲಿ ಕಾಮಾಲೆ, ಪಾದಗಳಲ್ಲಿ ಊತ, ಹೊಟ್ಟೆ ಯಲ್ಲಿ ನೋವು ಇಂತಹ ಸಮಸ್ಯೆಗಳು ಕಾಣಿಸಿ ಕೊಳ್ಳುವ ಅಪಾಯ ಹೆಚ್ಚಿರುತ್ತದೆ.
  • ಒಂದು ವೇಳೆ ಇಂತಹ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದರೆ, ಮುಂದಿನ ದಿನಗಳಲ್ಲಿ ವಾಕರಿಕೆ, ರಕ್ತ ವಾಂತಿಯಾವುದು ಹಾಗೂ ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ.
  • ಅಷ್ಟೇ ಅಲ್ಲದೆ ಉಸಿರಾಟದ ತೊಂದರೆಗಳು ಉಂಟಾಗ ಬಹುದು. ಹೀಗಾಗಿ ಇಂತಹ ರೋಗಲಕ್ಷಣಗಳು ಕಾಣಿಸಿ ಕೊಳ್ಳದ ಸಮಯದಲ್ಲಿ ಸ್ಕ್ರೀನಿಂಗ್ ಪರೀಕ್ಷೆಯ ಮೂಲಕ ಲಿವರ್ ಕಾಯಿಲೆಯ ರೋಗವನ್ನು ಪತ್ತೆಹಚ್ಚುವುದು ಒಳ್ಳೆಯದು.

 

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: VK

Leave a Reply

Your email address will not be published. Required fields are marked *