“ಭಂಡಾರಿ ವಾರ್ತೆ” ಎಂಬ ಅಂತರ್ಜಾಲ ಪತ್ರಿಕೆಯನ್ನು ಮುನ್ನಡೆಸುತ್ತಿರುವವರ ಮೇಲೆ ‘ಕಚ್ಚೂರುವಾಣಿ’ ಎಂಬ ಕಚ್ಚೂರು ನಾಗೇಶ್ವರ ದೇವಸ್ಥಾನ ಟ್ರಸ್ಟ್ ಮತ್ತು ಭಂಡಾರಿ ಮಹಾಮಂಡಲ ದ ಪತ್ರಿಕೆಯಲ್ಲಿ “ಭಂಡಾರಿ ಸಮಾಜ ಭಾಂದವರ ಗಮನಕ್ಕೆ” ಎಂಬ ಶಿರ್ಷಿಕೆಯೊಂದಿಗೆ ಸಭೆಯ ನಿರ್ಣಯದಂತೆ ಹೇಳಿಕೆಯೊಂದನ್ನು ಪ್ರಕಟಿಸಿ, ಆಧಾರ ರಹಿತ, ವಿವೇಚನಾರಹಿತ ಸುಳ್ಳು ಆರೋಪವನ್ನು ಮಾಡಲಾಗಿದೆ. ಈ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ತಮ್ಮ ಸ್ವಾರ್ಥ ಸಾಧನೆಗಾಗಿ ಕಚ್ಚೂರು ನಾಗೇಶ್ವರ ದೇವಸ್ಥಾನ ಟ್ರಸ್ಟ್ ಮತ್ತು ಭಂಡಾರಿ ಮಹಾಮಂಡಲದ ಮುಖಂಡರು ಸಂಘವನ್ನಷ್ಟೇ ಅಲ್ಲದೆ ಕಚ್ಚೂರುವಾಣಿ ಪತ್ರಿಕೆಯನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ. ಈ ಅಪಾಧನೆಯನ್ನು ಭಂಡಾರಿವಾರ್ತೆ ತಂಡ ಖಂಡಿಸುತ್ತದೆ.
ಈ ಘಟನೆಯ ಬಗ್ಗೆ ನಮ್ಮ ಕಾನೂನು ಸಲಹೆಗಾರರಾದ ವಕೀಲ. ಮನೋರಾಜ್ ರಾಜೀವ ರವರು ವಿವರವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ- ಯಥಾಪ್ರತಿಯನ್ನು ಕೆಳಗೆ ನೀಡಲಾಗಿದೆ.
(ಕಚ್ಚೂರುವಾಣಿಯಲ್ಲಿ ಪ್ರಕಟವಾಗಿರುವ ಪ್ರಕಟಣೆಯ ಪ್ರತಿ)
ಭಂಡಾರಿ ವಾರ್ತೆ ಎಂಬ ಮಾಧ್ಯಮ ಸಂಸ್ಥೆಯ ಮೇಲೆ ವಿನಾಕಾರಣ ಆಧಾರ ರಹಿತ ಮತ್ತು ವಿವೇಚನಾ ರಹಿತ ಆರೋಪಗಳಿಗೆ ಕಚ್ಚೂರುವಾಣಿಯನ್ನು ಬಳಸಿದ್ದು ಅಚ್ಚರಿ ಮೂಡಿಸಿದೆ. ಭಂಡಾರಿ ವಾರ್ತೆ ಅಂತರ್ಜಾಲ (Web) ಪತ್ರಿಕೆ ಅಥವಾ ಇ ಪೇಪರ್ ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದ್ದು, ಯಾವುದೇ ಪರ ವಿರೋಧವಾಗಿ ಕೆಲಸ ಮಾಡದೇ, ವೃತ್ತಿಪರ ಪತ್ರಿಕೋಧ್ಯಮದಂತೆ ಕಾರ್ಯ ನಿರ್ವಹಿಸುತ್ತಾ ಭಂಡಾರಿ ಸಮಾಜದ ಮನೆ ಮನಗಳಿಗೆ ಸುದ್ದಿ ಮತ್ತು ಪ್ರತಿಭೆಗಳನ್ನು ದಿನನಿತ್ಯ ಪ್ರಕಟಿಸುತ್ತಾ ಬರುತ್ತಿದೆ. ಇಲ್ಲಿ ಯಾರೊಬ್ಬರ ಮಾನ ನಷ್ಟ ಮಾಡುವ ಕೆಲಸವನ್ನು ಭಂಡಾರಿ ವಾರ್ತೆ ಮುಖಂಡರಾಗಲಿ ತಂಡವಾಗಲಿ ಮಾಡಿಲ್ಲ. ಹೀಗಿದ್ದರೂ ಭಂಡಾರಿ ವಾರ್ತೆ ಮತ್ತು ಮುನ್ನಡೆಸುವವರ ಮೇಲೆ ಇಲ್ಲ- ಸಲ್ಲದ ಆರೋಪ ಮಾಡಿರುವ ಕಚ್ಚೂರು ನಾಗೇಶ್ವರ ದೇವಸ್ಥಾನ ಟ್ರಸ್ಟ್ ಮತ್ತು ಭಂಡಾರಿ ಮಹಾಮಂಡಲದ ಮುಖಂಡರಿಗೆ ಜಾತಿ ಸಂಘ ಹೊರತುಪಡಿಸಿ, ಭಂಡಾರಿ ಸಮಾಜದಲ್ಲಿ ಯಾರೊಬ್ಬರು ವೈಯಕ್ತಿಕವಾಗಿ ಸಮಾಜಕ್ಕೆ ಯಾವುದೇ ಕೊಡುಗೆ ನೀಡಬಾರದು ಎಂಬ ಉದ್ದೇಶ ಇರುವಂತಿದೆ.
ಯಾಕೆ ಹೀಗೆ? ಇದಕ್ಕಾಗಿ ಇಂತಹ ಅಸ್ತ್ರಗಳೇಕೆ? ಸಮಾಜ ಬಾಂಧವರ ದಿಕ್ಕು ತಪ್ಪಿಸುವ ಪ್ರಯತ್ನವೇ? ಆರೋಪ ಮಾಡಿದ ಕ್ಷಣ ಆರೋಪಿ ಅಪರಾಧಿಯಾಗುತ್ತಾನೆಯೇ? ಸಮಾಜಭಾಂದವರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಾ? ಈ ಎಲ್ಲ ಪ್ರಶ್ನೆಗಳು ಸಹಜವಾಗಿ ಹುಟ್ಟುತ್ತವೆ. ಇದಕ್ಕೆ ಭಂಡಾರಿ ಮಹಾಮಂಡಲ ಮತ್ತು ಕಚ್ಚೂರು ನಾಗೇಶ್ವರ ದೇವಸ್ಥಾನ ಟ್ರಸ್ಟ್ ಬಳಿ ಸ್ಪಷ್ಟತೆಯಿದೆಯೇ?
ಭಾರತದ ಕಾನೂನಿನಲ್ಲಿ ಸರ್ವಧಿಕಾರಕ್ಕೆ ಅವಕಾಶವೇ ಇಲ್ಲದಿದ್ದಾಗ ಪತ್ರಿಕೆ ನಡೆಸಬಾರದು ಅಥವಾ ವೈಯಕ್ತಿಕ ನೆಲೆಯಲ್ಲಿ ಸಮಾಜಕ್ಕೆ ಏನು ಸೇವೆ ಮಾಡಬಾರದು ಎಂದು ಹೇಳಲು ಅವಕಾಶವಿಲ್ಲ. ನಿಮಗೇನಾದರೂ ನಷ್ಟವಾಗುತ್ತದೆಂದು ಭಯದಲ್ಲಿ ಇಂತಹ ಆರೋಪ ಮಾಡುವ ಕೆಲಸಕ್ಕೆ ಕೈ ಹಾಕಿದ್ದರೆ ಇದು ಅಪರಾಧವಾಗುತ್ತದೆ.
ಕಚ್ಚೂರುವಾಣಿ ಮಾಡಿರುವ ಆರೋಪದ ಬಗ್ಗೆ ಹೇಳುವುದಾದರೆ
1) ಸಂಘದ ಪದಾಧಿಕಾರಿಗಳಿಗೆ ಕಾರರ್ಯಕರ್ತರಿಗೆ ಕೊಲೆ ಬೆದರಿಕೆ ,
2) ಭಂಡಾರಿ ವಾರ್ತೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಂಡಾರಿ ಸಂಘದ ಅವಹೇಳನ, ಅಪಪ್ರಚಾರ.
3) ಭಂಡಾರಿ ವಾರ್ತೆಯ ಮುಖಂಡರು ಸಮಾಜ ವಿರೋಧಿ ಮತ್ತು ಕಾರ್ಯಕರ್ತರಿಗೆ ದೈಹಿಕ ಹಿಂಸೆ, ಮಾನಸಿಕ ಹಿಂಸೆ ನೀಡುವರು ಎಂಬ ಭೀತಿ
ಈ ಮೂರು ಆರೋಪಗಳಿಗೂ ನಿಮ್ಮಲ್ಲಿ ಸಾಕ್ಷ್ಯ ವಿದ್ದರೆ ಸಮಾಜದ ಮುಂದೆ ಇಡಿ. ಇಂತಹ ಆಧಾರ ರಹಿತ ಸುಳ್ಳು ಆರೋಪ ಅಥವಾ ಗಾಳಿಸುದ್ದಿಯನ್ನು ನಂಬಿ ವಿವೇಚನಾರಹಿತ ಆರೋಪ ಮಾಡಿರುವ ಕಚ್ಚೂರು ನಾಗೇಶ್ವರ ದೇವಸ್ಥಾನ ಸೇವಾಟ್ರಸ್ಟ್ ಮತ್ತು ಭಂಡಾರಿ ಮಹಾಮಂಡಲ ಎಂಬ ಎರಡು ಸಂಸ್ಥೆಗಳ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಬಹುದಾಗಿದೆ. ಈ ಎರಡು ಸಂಸ್ಥೆಗಳ ಪರವಾಗಿ ಹೇಳಿಕೆಯಿರುವ ಕಾರಣ ಮತ್ತು ಹೇಳಿಕೆಯಲ್ಲಿ ಸಂಘದ ಸಭೆಯಲ್ಲಿ ಮಾಡಿರುವ ನಿರ್ಣಯವೆಂದು ಪ್ರಸ್ತಾಪಿಸಿರುವ ಕಾರಣ , ನಿರ್ಣಯ ಸಭೆಯಲ್ಲಿ ಹಾಜರಿದ್ದ ಜೊತೆಗೆ ನಿರ್ಣಯಕ್ಕೆ ಸಹಿ ಮಾಡಿರುವ ಎಲ್ಲರ ಮೇಲೂ ಕಾನೂನಿನಡಿ ಪ್ರಕರಣ ದಾಖಲಿಸಬಹುದಾಗಿದೆ. ಇಷ್ಟೇ ಅಲ್ಲದೆ ಈ ಹೇಳಿಕೆಯಲ್ಲಿ ಭಂಡಾರಿ ಸಂಘದ ಪದಾಧಿಕಾರಿ ಮತ್ತು ಸಮಾಜ ಭಾಂದವರು ದೂರು ನೀಡಿದ್ದಾರೆ. ಎಂಬುದಾಗಿದೆ. ಇಂತಹ ಸುಳ್ಳು ದೂರು ನೀಡಿರುವ ದೂರುದಾರರ ಮೇಲೂ ಕಾನೂನಿನ ಮೂಲಕ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಬಹುದಾಗಿದೆ.
ಎರಡಯನೆದಾಗಿ ಸರ್ಕಾರದಿಂದ ನೋಂದಾಯಿಸಲ್ಪಟ್ಟ ಸಂಸ್ಥೆಯಾಗಲಿ, ಸೇವಾ ಟ್ರಸ್ಟ್ ಗಳಾಗಲಿ ಕೆಲವು ನಿರ್ದಿಷ್ಟ ಕಾನೂನು – ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದು ದೇಶದ ಸಂವಿಧಾನಕ್ಕೆ ಹತ್ತಿರವಾಗಿರುತ್ತದೆ. ಜಾತಿ ಸಂಘಟನೆಗಳು ಜಾತಿ ಭಾಂದವರ ಕಲಹಗಳನ್ನು ಪಂಚಾಯತಿ ಮೂಲಕ ಬಗೆಹರಿಸಬಹುದು, ಕಾನೂನಿನಲ್ಲಿ ಇದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ಕಚ್ಚೂರು ನಾಗೇಶ್ವರ ದೇವಸ್ಥಾನ ಸೇವಾಟ್ರಸ್ಟ್ ಮತ್ತು ಭಂಡಾರಿ ಮಹಾಮಂಡಲ ಎಂಬ ಸಂಸ್ಥೆಗಳು ಪ್ರಪಂಚದ ಯಾವ ಸಂಸ್ಥೆಯೂ ಮಾಡದ ರೀತಿಯಲ್ಲಿ ವ್ಯಾಜ್ಯವೊಂದನ್ನು ಆಲಿಸಿ ಅಪರಾಧಿಗಳನ್ನು ಗುರುತಿಸಿದೆ. ಇದು ಪ್ರಪಂಚದಲ್ಲೆ ಪ್ರಥಮವೆನ್ನಬಹುದು. ಪ್ರಜಾಪ್ರಭುತ್ವ ದೇಶದಲ್ಲಿರುವ ನಾವು ಸಂಘದಲ್ಲಿ ಇಂತಹ ವಿಚಾರಗಳು ಬಂದಾಗ ಹೇಗೆ ನಿರ್ವಹಿಸಬೇಕೆಂಬ ವಿವೇಚನೆಯಿಲ್ಲದೆ ಕೇವಲ ದೂರುದಾರರ ದೂರನ್ನು ಆಲಿಸಿ ಸತ್ಯಾಸತ್ಯತೆ ಪರೀಕ್ಷಿಸದೇ, ಆರೋಪಿಗಳನ್ನು ಯಾರನ್ನೂ ವಿಚಾರಿಸದೇ ಅಪರಾಧಿ ಪಟ್ಟ ನೀಡುವುದರ ಜೊತೆಗೆ ಎಚ್ಚರಿಕೆ ನೀಡಲಾಗಿದೆ. ಇದು ಒಂದು ನೋಂದಾಯಿತ ಸಂಸ್ಥೆ ಮಾಡುವ ನಿರ್ಣಯಕ್ಕೆ ಸಂಪೂರ್ಣ ವಿರುದ್ದವಾಗಿದ್ದು, ಸಂಸ್ಥೆಯ ಮತ್ತು ಮುಂದಾಳುಗಳ ಮೇಲೆ ಕಾನೂನಿನ ಪ್ರಕಾರ ದೂರು ದಾಖಲಿಸಬಹುದಾಗಿದೆ.
ಭಂಡಾರಿ ವಾರ್ತೆಯ ಕಾನೂನು ಸಲಹೆಗಾರನಾಗಿ ತಾನು ಎಚ್ಚರಿಸುವುದೇನೆಂದರೆ, ಆರೋಪಗಳಿಗೆ ಸಾಕ್ಷ್ಯ ಒದಗಿಸಬೇಕು ಇಲ್ಲವೇ ಕಚ್ಚೂರುವಾಣಿ ಪತ್ರಿಕೆಯ ಮೂಲಕ ನಿಮ್ಮ ನಿರ್ಣಯದ ಸುಳ್ಳು ಹೇಳಿಕೆಗಳಿಗೆ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಕಾನೂನು ಹೋರಾಟಕ್ಕೆ ಭಂಡಾರಿ ವಾರ್ತೆ ಮಾಧ್ಯಮ ಸಂಸ್ಥೆ ಬದ್ದವಾಗಿದೆ.
ಮನೋರಾಜ್ ರಾಜೀವ್
District Government Pleader
(ಕಾನೂನು ಸಲಹೆಗಾರರು)
ಭಂಡಾರಿ ವಾರ್ತೆ