ಮಂಗಳೂರಿನ ಕಂಕನಾಡಿಯ ಬಿಪಿನ್ ಚಂದ್ ಮತ್ತು ಉಷಾಚಂದ್ ರವರ ಪುತ್ರನಾದ 25 ವರ್ಷದ ಯುವಕ ನಿಶಾಂತ್ ಚಂದ್ ಶಿಮ್ಲಾದಿಂದ ಕನ್ಯಾಕುಮಾರಿ ಗೆ ಬೈಸಿಕಲ್ ಮೂಲಕ ಯಾತ್ರೆ ಕೈಗೊಂಡಿದ್ದಾರೆ. ಸುಮಾರು 3600 ಕಿ.ಮೀ ಪ್ರಯಾಣಿಸುತ್ತಿದ್ದು ಶಿಮ್ಲಾ, ರಾಜಸ್ತಾನ್ ,ಗುಜರಾತ್ , ಮಹಾರಾಷ್ಟ್ರ, ಕರ್ನಾಟಕ, ಕೇರಳ ದ ಮೂಲಕ ಕ್ರಮಿಸಿ ಕನ್ಯಾಕುಮಾರಿ ತಲುಪಲಿದ್ದಾರೆ. ಇವರು ಸೆಪ್ಟೆಂಬರ್ 3 ರಂದು ಶಿಮ್ಲಾದಿಂದ ಪ್ರಯಾಣ ಆರಂಭಿಸಿದ್ದು ಅಕ್ಟೋಬರ್ 4 ರಂದು ಕನ್ಯಾಕುಮಾರಿಗೆ ತಲುಪಲಿದ್ದಾರೆ. ಇಂತಹ ಅದ್ಬುತ ಸಾಹಸಕ್ಕೆ ಕೈ ಹಾಕಿರುವ ನಿಶಾನ್ ಚಂದ್ ಭಂಡಾರಿಯವರು ಬೆಂಗಳೂರಿನ Decathlone ಎಂಬ ಸಂಸ್ಥೆಯಲ್ಲಿ ಕ್ರೀಡಾ ಸಲಹೆಗಾರರಾಗಿದ್ದಾರೆ. ಸ್ಟೇನ್ ಪಿಲಿಫ್ ಎಂಬವರ ಜೊತೆಗೆ ಈ ಸೈಕ್ಲಿಂಗ್ ಯಾತ್ರೆ ನಡೆಸುತ್ತಿದ್ದಾರೆ.
ಸೈಕ್ಲಿಂಗ್ ನಿಶಾಂತ್ ಚಂದ್ ರವರ ಹವ್ಯಾಸವಾಗಿದ್ದು, ಅತೀವ ಆಸಕ್ತಿಯಿಂದ ಕ್ರೀಡಾ ಸಂಸ್ಥೆಯಲ್ಲಿ ದುಡಿಯುತ್ತಾ ತನ್ನ ಹವ್ಯಾಸಿ ವೃತ್ತಿಯನ್ನು ಇಷ್ಟಪಟ್ಟು ಮಾಡುತ್ತಿದ್ದಾರೆ. ಇವರೊಬ್ಬ ಉತ್ಸಾಹಿ ಯುವಕನಾಗಿದ್ದು, ಸೈಕ್ಲಿಸ್ಟ್ , ಪೋಟೋಗ್ರಾಫರ್ ಆಗಿದ್ದಾರೆ. ಹೊಸತನಕ್ಕೆ ಮತ್ತು ಯಾವುದಾದರೂ ಹೊಸತನ್ನು ಸಾಧಿಸಬೇಕೆನ್ನುವ ಹಂಬಲ, ಹೊಸಗೆಳೆಯರನ್ನು ಮಾಡಿಕೊಳ್ಳುವುದು,ವಿವಿಧ ಸ್ಥಳ, ಸಂಸ್ಕೃತಿ ಭಾಷೆಗಳನ್ನು ಅರಿಯಲು ಪ್ರವಾಸ ಮಾಡುವುದು ಇವರ ಪ್ರಮುಖ ಆಸಕ್ತಿಯಾಗಿದೆ. ಸೈಕ್ಲಿಂಗ್ ಮೂಲಕ ದೇಶ ಸುತ್ತಿ ದೇಶದ ವೈವಿಧ್ಯತೆಯನ್ನು ಅರಿಯುವ ಸಾಹಸಕ್ಕೆ ಕೈಹಾಕಿರುವ ನಿಶಾಂತ್ ಚಂದ್ ತನ್ನ ಮೆಚ್ಚಿನ ಹವ್ಯಾಸವಾದ ಛಾಯಾಗ್ರಹಣಕ್ಕೂ ಸೈಕ್ಲಿಂಗ್ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಬಾಲ್ಯದಿಂದಲೇ ಇವರಿಗೆ ಸೈಕಲ್ ಎಂದರೆ ಪಂಚಪ್ರಾಣ. ಒಂದು ವರ್ಷವಿರುವಾಗಲೇ ಮೂರುಚಕ್ರದ ಸೈಕಲ್ ಬಗ್ಗೆ ಆಕರ್ಷಿತರಾಗಿದ್ದರು. ಅಂದು ಆರಂಭವಾದ ಸೈಕ್ಲಿಂಗ್ ನ ಆಸಕ್ತಿ ಇಂದು ಇವರೆಗೆ ತಂದು ನಿಲ್ಲಿಸಿದೆ ಎಂದು ತನ್ನ ಬಾಲ್ಯವನ್ನು ನೆನಪಿಸುತ್ತಾರೆ. ಇವರ ಸೈಕ್ಲಿಂಗ್ ಆಸಕ್ತಿ ಮುಂದುವರಿದು, ರಜಾದಿನಗಳಲ್ಲಿ ಮುಂಬೈಗೆ ಹೋಗುತ್ತಿದ್ದ ಇವರು ತನ್ನ ಸ್ನೇಹಿತರ ಸ್ಪೋರ್ಟ್ ಸೈಕಲ್ ನಲ್ಲಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದರು. ಅಲ್ಲದೇ long ride ಹೋಗುತ್ತಿದ್ದರು. ಇದು ಇವರ ಸೈಕ್ಲಿಂಗ್ ಆಸಕ್ತಿ ಇನ್ಬು ಹೆಚ್ಚಾಗುವಂತೆ ಮಾಡಿತು. ಮೊದಲು ಒಬ್ಬ ಉಪನ್ಯಾಸಕರಿಂದ ಹಳೆ ಸೈಕಲ್ ಖರೀದಿಸಿ ಅಭ್ಯಾಸ ಮುಂದುವರೆಸಿದರು.
ಇವರು ಕಾಲೇಜು ವಿದ್ಯಾಬ್ಯಾಸ ಮುಗಿದ ನಂತರ AIR India ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದ್ದರು. ಆದರೆ ಇವರ ಸೈಕ್ಲಿಂಗ್ ಹವ್ಯಾಸ ಮತ್ತು ಪೋಟೋಗ್ರಾಫಿಯಲ್ಲಿ ಏನಾನದ್ದರೂ ಸಾಧಿಸಬೇಕೆಂದು ವೃತ್ತಿ ತ್ಯಜಿಸಿ ಸೈಕ್ಲಿಸ್ಟ್ ಗಳ ಬಹುರಾಷ್ಟ್ರೀಯ ಕಂಪೆನಿಯಾದ Decathlone sports company ಗೆ Sports Advisor ಆಗಿ ಸೇರಿಕೊಂಡರು. ಜನರನ್ನು ಸೈಕ್ಲಿಂಗ್ ನತ್ತ ಹೆಚ್ಚು ಆಕರ್ಷಿಸಿ ತಮ್ಮ ಪ್ರಯಾಣಕ್ಕೆ ಸೈಕಲ್ ಬಳಕೆ ಹೆಚ್ಚಳವಾಗಬೇಕೆಂಬ ಆಶಯ ಹೊತ್ತು ತಮ್ಮ ಸೈಕ್ಲಿಂಗ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಇಷ್ಟೇ ಅಲ್ಲದೇ ತನಗೆ ಭಾರತದಂತ ವಿವಿಧ ಭೌಗೋಳಿಕತೆ ಮತ್ತು ಭಾಷೆ, ಸಂಸ್ಕೃತಿಯನ್ನು ಅರಿಯುವ ಉದ್ದೇಶ ಕೂಡಾ ಇವರಲ್ಲಿದೆ. ಇಂತಹ ಯಾತ್ರೆಗಳು ಮತ್ತು ವಿವಿಧ ಭಾಷೆ , ಸ್ಥಳ ಮತ್ತು ಸಂಸ್ಕೃತಿಯ ಜನರನ್ನು ಬೇಟಿಯಾಗುವುದರಿಂದ ವಿಶಿಷ್ಟ ಅನುಭವ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ಹಿಂಜರಿಕೆ ಮತ್ತು ಮುಜುಗರ ಎಂಬುದು ಅಳಿಸಿ ಹೋಗುತ್ತದೆ ಎಂಬುದು ಇವರ ಅಭಿಪ್ರಾಯವಾಗಿದೆ.
ಯಾವುದೇ ನಿರೀಕ್ಷೆಯಿಲ್ಲದೆ ತನ್ನ ಹವ್ಯಾಸಕ್ಕೆ ಪ್ರತಿಫಲದ ನಿರೀಕ್ಷೆ ಬಯಸದ ಇವರು ನನ್ನ ಈ ಯಾತ್ರೆ ಅನೇಕ ಸಿಹಿ ಕಹಿ ಅನುಭವ ನೀಡುತ್ತದೆ. ಮತ್ತು ಜೀವಮಾನವಿಡೀ ಮರೆಯಾಲಾಗದ ನೆನಪುಗಳನ್ನು ನೀಡುತ್ತದೆ ಎನ್ನುತ್ತಾರೆ. ಇವರು ಕಾಲೇಜು ಜೀವನದಲ್ಲಿ NCC ಯಲ್ಲಿ ತೊಡಗಿಸಿಕೊಂಡಿದ್ದು , ಹಲವಾರು ಪದಕಗಳನ್ನು ಪಡೆದಿದ್ದಾರೆ. ಪೋಟೋಗ್ರಫಿಯೂ ಇವರ ಉನ್ನತ ಹವ್ಯಾಸವಾಗಿದ್ದು ಅತ್ಯುತ್ತಮ ಛಾಯಾಗ್ರಹಣಕ್ಕೆ ಹಲವು ಬಹುಮಾನ ಪಡೆದಿರುತ್ತಾರೆ. ಇವರು ಇದೇ ಬರುವ ಅಕ್ಟೋಬರ್ 4 ರಂದು ಕನ್ಯಾಕುಮಾರಿ ತಲುಪಲಿದ್ದಾರೆ . ಈ ಶುಭ ಸಂದರ್ಭದಲ್ಲಿ ಇವರ ಯಾತ್ರೆ ಯಶಸ್ವಿಯಾಗಲಿ ಮತ್ತು ಮುಂದಿನ ಎಲ್ಲ ಸಾಹಸ ಪ್ರಯತ್ನಗಳು ಸಫಲವಾಗಲಿ ಎಂದು ಭಂಡಾರಿ ವಾರ್ತೆ ಹಾರೈಸುತ್ತದೆ.
-ಭಂಡಾರಿ ವಾರ್ತೆ
Dear Mr. Kishan Chand Bhandary,
you are perfectly right, you get to learn a lot by travelling our wonderful country INDIA.
Wishing you all the best, god speed my friend.
SAGARA MADHAVA BHANDARI.