January 18, 2025
sharathchandra kuppepadavu

ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಹಿರಿಯರಾದ ಶರತ್ ಚಂದ್ರ ಕುಪ್ಪೆ ಪದವು ಇವರು ತಾರೀಕು 26 ರ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು.

  ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿ 2010 ರಲ್ಲಿ ನಿವೃತ್ತಿ ಹೊಂದಿದರು. 

ದಿವಂಗತರು ಪತ್ನಿ ನಳಿನಿ ಶರತ್ ಚಂದ್ರ ಇಬ್ಬರು ಮಕ್ಕಳಾದ ನಿತೀಶ್ ಮತ್ತು ನಿಶ್ಚಿತ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಬೆಂಗಳೂರಿನ ಸಮಾಜ ಸಂಘದಲ್ಲಿ ಕಳೆದ 30 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ , ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಸಂಘದ ಕಾರ್ಯಕ್ರಮಗಳಿಗೆ ದೇಣಿಗೆಗಳನ್ನು ನೀಡುತ್ತಾ ನಿರಂತರವಾಗಿ ವಿವಿಧ ಸ್ಥಾನಗಳಲ್ಲಿ ಸೇವೆ ಮಾಡಿ, ಅವಿರತವಾಗಿ ದುಡಿದಿದ್ದಾರೆ. 

ಮೃತರ ಅಂತ್ಯ ಸಂಸ್ಕಾರವು ಅಕ್ಟೋಬರ್ 27 ರ ಶುಕ್ರವಾರ ಬೆಳಿಗ್ಗೆ ಸ್ವಗೃಹ ಬೆಂಗಳೂರಿನಲ್ಲಿ ನಡೆಸುವುದೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.  ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ದಯಪಾಲಿಸಲಿ ಎಂದು  ಭಂಡಾರಿ ವಾರ್ತೆ ದೇವರಲ್ಲಿ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *