November 23, 2024
kalla laambu tulunadu (2)

ಕಲ್ಲ ಲಾಂಬು ಎಂದರೆ ತುಲುನಾಡಿನ ಒಂದು ವಿಧದ ಅಣಬೆ(Mushroom). ಅಂದಿನ ತುಲುವನಿಗೆ ಈ ಅಣಬೆಯನ್ನು ಕಂಡ ಮೊದಲ ನೋಟದಲ್ಲೇ ಮೊದಲ ಮೇಲ್ನೋಟಕ್ಕೆ ಇದರ ವಿನ್ಯಾಸವು ಬಿಳಿ ಕಲ್ಲಿನ ಹರಳುಗಳಂತೆ ಕಂಡಿದೆ.ಇಲ್ಲಿನ ವಿವಿಧ ಅಣಬೆಗಳಿಗೆ ಒಂದೊಂದು ಅರ್ಥಪೂರ್ಣ ಹೆಸರನ್ನು ಇಟ್ಟ ತುಲುವನು ಇದನ್ನು “ಕಲ್ಲ ಲಾಂಬು”ಎಂದು ಕರೆದ.

ಇಲ್ಲಿನ ಎಲ್ಲಾ ಅಣಬೆಗಳು ಬಲಹೀನವಾಗಿದ್ದು ದುರ್ಬಲತೆಯಿಂದ ಇರುತ್ತದೆ.ಮೃದುವಾಗಿ ಕಂಡುಬರುತ್ತದೆ.ಆದರೆ ಕಲ್ಲ ಲಾಂಬು ಹಾಗಿರದೆ ಗಟ್ಟಿಯಾಗಿ ಇರುತ್ತದೆ.ಈ ಅಣಬೆಯ ಮೃದುವಾದ ತಿರುಳು ಕವಚದ ಒಳಗೆ ಇರುತ್ತದೆ.ಕೋಣೆಯ ಒಳಗೆ ಅವಿತು ಕೂತಿರುತ್ತದೆ.ಬೇರೆ ಯಾವುದೇ ಅಣಬೆಗಳಿಗೆ ಹೊರ ಕವಚ ಇರುವುದಿಲ್ಲ.ಕಲ್ಲ ಲಾಂಬುವಿನ ಕವಚವು ರಬ್ಬರಿನಂತೆ ಗಟ್ಟಿಯಾಗಿ ಇರುತ್ತದೆ. ಕಲ್ಲ ಲಾಂಬುವನ್ನು ಅಗೆದಾಗ ಅದು ಮಣ್ಣು ಮಿಶ್ರಿತ ಉರುಟಾದ ಕಲ್ಲುಗಳಂತೆ ಕಂಡಿದೆ.ಇದನ್ನು ಎಲ್ಲಾ ಲಕ್ಷಿಸಿ ಗಮನಿಸಿ ಈ ಲಾಂಬುವನ್ನು ಕಲ್ಲ ಲಾಂಬು ಎಂದಿದ್ದಾರೆ.ಲಂಬು, ಅಲಂಬು, ಲಾಂಬು,ಲಬ್ಬೆ ಎಂಬ ಪದಗಳ ಅರ್ಥವು ಒಂದೇ ಆಗಿದ್ದು ಅದು ಬಲಹೀನ, ಎಳೆಯ, ಟೆಂಡರ್,ಗಟ್ಟಿ ಇಲ್ಲದ್ದು ,ಮೃದು,ನೀರಿನಂತೆ ಕರಗುವುದು ಎಂದಾಗುತ್ತದೆ. ಅಣಬೆಗಳಿಗೆ ಇದು ಅನ್ವಯ ಆಗುತ್ತದೆ.ಆದರೆ ಕಲ್ಲ ಲಾಂಬುವಿನ ಹೊರ ಭಾಗವು ಗಟ್ಟಿಯಾಗಿದೆ ಮತ್ತು ಒಳ ಭಾಗವು ಮೃದು ಮೆದುವಾಗಿದೆ ಎಂದಿದ್ದಾರೆ.ಕಲ್ಲು ಮತ್ತು ಲಾಂಬು ಎಂದಿದ್ದಾರೆ.ಅಂದರೆ ಗಟ್ಟಿಯಾಗಿದೆ ಮತ್ತು ಮೆದು ಆಗಿದೆ ಎಂದು ವಿಶ್ಲೇಷಿಸಿದ್ದಾರೆ.

 

ಮಾನವನು ಬಳಸಿದ್ದ ಹೊಲಗದ್ದೆ,ತೋಟ, ಜಮೀನು,ಶೇಡಿ ಮಣ್ಣಿನಲ್ಲಿ,ವರ್ಷಪೂರ್ತಿ ನೀರು ಇರುವ ಬಿಸಿಲು ಸೋಂಕದ ನೆರಳು ಪ್ರದೇಶದಲ್ಲಿ ಕಲ್ಲ ಲಾಂಬು ಇರುವುದು ಇಲ್ಲ .ಬಿಸಿಲು ಬಿದ್ದು ಕಾದ ಗಟ್ಟಿಯಾದ ಪಲ್ಕೆ(ತುಸು ಇಳಿಜಾರು-Slant)ಸ್ಥಳಗಳಲ್ಲಿ ಇದು ಕಾಣಬರುತ್ತದೆ.ಮಳೆಗಾಲದ ಮಳೆ ಬಿದ್ದಾಗ ನೆಲವೆಲ್ಲಾ ಮೃದುವಾದಾಗ ಬೇರೆ ಎಲ್ಲಾ ಗಿಡ,ಸಸಿ,ಗೆಡ್ಡೆ ಇತ್ಯಾದಿಗಳು ಮೊಳಕೆ ಬರುವಂತೆ ಕಲ್ಲ ಲಾಂಬು ಕೂಡಾ ಹಿಂದಿನ ವರ್ಷ ನೆಲದ ಅಡಿಯಲ್ಲಿ ಬೀಜ ಬಿದ್ದ ಜಾಗಗಳಲ್ಲಿ ಬೆಳೆಯುತ್ತದೆ.ಇದಕ್ಕೆ ಎಲೆ ಬಳ್ಳಿಗಳು ಇರುವುದಿಲ್ಲ.ಸೂಕ್ಷ್ಮವಾದ ಬೇರುಗಳಿಂದ ನೆಲದಡಿಯಲ್ಲೇ ಬೆಳೆಯುತ್ತದೆ.ಮುಖ್ಯವಾಗಿ ಇದಕ್ಕೆ ಮರುಳು ಸಹಿತ ಮಣ್ಣು ಇರಬೇಕು.ಪಾದೆ ಕಲ್ಲುಗಳ ಸನಿಹದಲ್ಲೂ ಸಂದುಗಳಲ್ಲೂ ಮರುಳು ಸಹಿತ ಮಣ್ಣು ಇದ್ದರೆ ಮಳೆ ನೀರಿಗೆ ಇದರ ಬೀಜಗಳು ಬಂದು ಸಂಗ್ರಹ ಆಗಿದ್ದರೆ ಇಲ್ಲೂ ಕಲ್ಲಲಾಂಬು ಆಗುತ್ತದೆ.

ಮಳೆಗಾಲದ ಆರಂಭದ ಸಿಡಿಲಿನ(Thunder) ಕಂಪನಕ್ಕೆ (Vibration)ಮೃದುವಾದ ನೆಲ ಅದುರುತ್ತದೆ.ನೆಲ ಸಡಿಲ ಗೊಂಡಾಗ ನೆಲದಡಿಯಲ್ಲೇ ಅವಿತ ಕಲ್ಲ ಲಾಂಬು ಸಡಿಲ ಗೊಂಡು ಮೇಲೆ ಬರುತ್ತದೆ ಮತ್ತು ಗೋಚರಿಸುತ್ತದೆ. ಅವುಗಳ ಮೇಲೆ ಮಳೆ ಹನಿಗಳು ಬಿದ್ದಾಗ ಇನ್ನೂ ಸ್ಪಷ್ಟವಾಗಿ ಕಾಣುತ್ತದೆ ಮಣ್ಣಿನ ಒಳಗೆ ಇದ್ದರೆ ಕಲ್ಲಲಾಂಬು ಕೆಲವು ದಿನಗಳವರೆಗೆ ಚೆನ್ನಾಗಿ ಇರುತ್ತದೆ.ಆದರೆ ಮಣ್ಣಿನ ಸಂಪರ್ಕ ಕಳೆದು ಕೊಂಡರೆ ಅದರ ಸೂಕ್ಷ್ಮವಾದ ಬೇರು ನಾಶವಾಗಿ ಒಳಗಿನ ಬಿಳಿಯ ತಿರುಳು ಕೂಡಲೇ ಕರ್ರಗೆ ಆಗಿ ಬದಲಾಗುತ್ತದೆ.ಕೆಟ್ಟು ಹೋಗುತ್ತದೆ.

ಕಲ್ಲ ಲಾಂಬು ನೆಲದಲ್ಲೇ ಇದ್ದರೆ ಅದರ ಗಾತ್ರ ಬೆಳೆದು ದೊಡ್ಡದಾಗಿ ಇರುತ್ತದೆ.ಅದರ ಕವಚವು ಇನ್ನಷ್ಟು ದಪ್ಪಗೆ ಆಗುತ್ತದೆ.ರಬ್ಬರ್ ತರಹ ಆಗುವುದು.ಬಿಸಿಲು ಬಿದ್ದಾಗ ಒಡೆದು ಹೋಗುವುದು.ಒಳಗಿನ ಕರ್ರಗಿನ ಕಾಡಿಗೆ ತರಹದ ತಿರುಳು ಅಲ್ಲೇ ಬೀಳುವುದು.ಅದರಲ್ಲಿ ಬೀಜ ಇರುತ್ತದೆ. ಮಳೆ ನೀರಿನಲ್ಲಿ ಕೆಲವು ಬೀಜಗಳು ಪ್ರಸಾರ ಆಗಿ ಬೇರೆ ಕಡೆ ಸೇರುತ್ತದೆ.ಮರು ವರ್ಷದ ಮಳೆಯಲ್ಲಿ ಅಲ್ಲೂ ಕಲ್ಲ ಲಾಂಬು ಬೆಳೆಯುತ್ತದೆ.

ಕಲ್ಲ ಲಾಂಬು ತಿನ್ನುವವರು ಖಂಡಿತವಾಗಿಯೂ ಅದರಒಳ ತಿರುಳು ಒಡನೆ ಹೊರ ಕವಚವನ್ನೂ ಬಳಸಬೇಕು.ಅದರಲ್ಲಿ ಪೂರ್ಣಪ್ರಮಾಣದ ಶಕ್ತಿ ಇದೆ.ಕಟ್ಟು ನಿಟ್ಟಿನಲ್ಲಿ ಹೇಳುವುದಾದರೆ ಕಲ್ಲಲಾಂಬು ಇದು ಅಣಬೆ ಜಾತಿಗೆ ಸೇರಿಲ್ಲ.ಇದೊಂದು ಗೆಡ್ಡೆ (tumor)ವರ್ಗಕ್ಕೆ ಸೇರಿದೆ.ಎಲೆ ಬಳ್ಳಿ ಇಲ್ಲದ ಗೆಡ್ಡೆ ಇದನ್ನು ಅಗೆದು ತೆಗೆಯ ಬೇಕು ಹೊರತು ಹೆಕ್ಕಿ ತೆಗೆಯಲು ಬರೊಲ್ಲ.ಅಣಬೆ ಎಂದರೆ ಅವುಗಳನ್ನು ಅಗೆಯದೆ ಕೀಳಲು ಬರುತ್ತದೆ.

ತುಲುವನು ಇದರ ಲಕ್ಷಣಗಳನ್ನು ನೋಡಿ ಹೆಸರಿಟ್ಟು ಕರೆದಿದ್ದಾನೆ. ಗಟ್ಟಿಯಾಗಿದೆ ಮೆದುವಾಗಿದೆ ಅಂದಿದ್ದಾನೆ.ದೊಡ್ಡ ಗಾತ್ರದ ಅಣಬೆಯನ್ನು ಪೆರ್ಗೆಲ್ ಲಾಂಬು,ಬೈ ಹುಲ್ಲು ರಾಶಿಯಲ್ಲಿ ಬೆಳೆದ ಲಾಂಬುವನ್ನು ಬೈ ಲಾಂಬು, ಅಣಬೆಯ ತುದಿಯಲ್ಲಿ ಎಣ್ಣೆಯನ್ನು ಸವರಿದಂತೆ ಕಂಡ ಅಣಬೆಯನ್ನು ನೆಯಿ(ತುಪ್ಪ)ಲಾಂಬು ಇತ್ಯಾದಿ ಹೆಸರುಗಳಿಂದ ಕರೆದಿರುವನು.ಹೊರಮೈ ಗಟ್ಟಿಯಾಗಿ ಒಳಮೈ ಮೆದುವಾಗಿದೆ.ಗಟ್ಟಿಯಾದುದನ್ನು ಕಲ್ಲ್ ಎಂದೂ ಮೆದುವನ್ನು ಲಾಂಬು ಎಂದೂ ಕರೆದರು.

Leave a Reply

Your email address will not be published. Required fields are marked *