September 20, 2024

ಬೇಕಾಗುವ ಸಾಮಗ್ರಿಗಳು
• ಹಾಲು ೧/೪ ಕಪ್
• ಬಟಾಣಿ 400 ಗ್ರಾಂ
• ಬೆಣ್ಣೆ 2 ಚಮಚ
• ಪನೀರ್ 100 ಗ್ರಾಂ
• ತುಪ್ಪ 2 ಚಮಚ
• ಅರಿಶಿನ ಪುಡಿ 1/4 ಟೀಚಮಚ
• ಕೆಂಪು ಮೆಣಸಿನ ಪುಡಿ 2 ಟೀ ಚಮಚ
• ಕಾಳು ಮೆಣಸಿನ ಹುಡಿ ೧/೪ ಟೀ ಚಮಚ
• ಧನಿಯಾ ಪುಡಿ 1 ಟೀ ಚಮಚ
• ಕಸೂರಿ ಮೇಥಿ 1-2 ಟೀಚಮಚ
• ದಪ್ಪ ಕ್ರೀಮ್ 3 ಚಮಚ.
• ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಕೊಚ್ಚಿದ)
• ಸಕ್ಕರೆ ೧/೪ ಟೀ ಚಮಚ (ಬೇಕಾದಲ್ಲಿ)
• ಗರಮ್ ಮಸಾಲಾ ಪುಡಿ 1 ಟೀಚಮಚ
• ಉಪ್ಪು ರುಚಿಗೆ

ಮಸಾಲಾ ಪೇಸ್ಟಿಗೆ
• 2 ದೊಡ್ಡ ಈರುಳ್ಳಿ (ತುಂಡರಿಸಿದ್ದು)
• ಟೊಮೆಟೊ 1-1 / 2(ತುಂಡರಿಸಿದ್ದು)
• ಶುಂಠಿ 1 ತುಂಡು
• ಗೋಡಂಬಿ ಬೀಜಗಳು 7-8
• ಮೆಣಸಿನ ಕಾಯಿ 4-5
• ಕೆಂಪು ಮೆಣಸು 2
• ಬೆಳ್ಳುಳ್ಳಿ 6-7
• ಶುಂಠಿ ೧/೨ ಇಂಚು
• ಲವಂಗ 2-3
• ದಾಲ್ಚಿನ್ನಿ ೧/೨ ಇಂಚು

ತಯಾರಿಸುವ ವಿಧಾನ
• ಒಂದು ಪಾತ್ರೆಗೆ ಮಸಾಲಾ ಪೇಸ್ಟ್ ಗೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಸಾಕಷ್ಟು ನೀರು ಸೇರಿಸಿ ಕುದಿಯಲು ಬಿಡಿ.
• ಬಳಿಕ ಅದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಬೇಯಿಸಿದ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ಮೃದುವಾದ ಪೇಸ್ಟ್ ಅನ್ನು ತಯಾರಿಸಿ. (ರುಬ್ಬುವ ಸಮಯದಲ್ಲಿ ನೀರನ್ನು ಸೇರಿಸಬೇಡಿ)
• ರುಬ್ಬಿದ ಪೇಸ್ಟನ್ನು ಪಕ್ಕಕ್ಕೆ ಇಡಿ
• ಒಂದು ಕಡಾಯಿಯನ್ನು ಬಿಸಿ ಮಾಡಿ ಅದಕ್ಕೆ 1-2 ಟೀ ಚಮಚ ತುಪ್ಪ / ಬೆಣ್ಣೆ ಸೇರಿಸಿ, ಬಳಿಕ ಅದಕ್ಕೆ ರುಬ್ಬಿದ ಮಸಾಲಾ ಪೇಸ್ಟ್ ಅನ್ನು ಸೇರಿಸಿ, ಮಸಾಲೆಯಿಂದ ತುಪ್ಪ ಬೇರ್ಪಡುವವರೆಗೆ ಅಂದರೆ 10 -12 ನಿಮಿಷ ಕದಡಿಸಿ.
• ಈಗ ಅದಕ್ಕೆ ಅರಿಶಿನ ಪುಡಿ, ಮೆಣಸಿನ ಪುಡಿ, ಧನಿಯಾ ಪುಡಿ, ಕಾಳು ಮೆಣಸಿನ ಹುಡಿ, ಉಪ್ಪು, ಕ್ರೀಮ್ ಮತ್ತು ಹಾಲು ಸೇರಿಸಿ ಕೂಡಲೇ ಮಿಕ್ಸ್ ಮಾಡಿ. ನಂತರ ಹಸಿರು ಬಟಾಣಿ ಸೇರಿಸಿ, ಮುಚ್ಚಳವನ್ನು ಮುಚ್ಚಿ ಬೇಯಲು ಬಿಡಿ.
• ಇನ್ನೊಂದೆಡೆ ಪ್ಯಾನ್ ಬಿಸಿಗಿಟ್ಟು ಅದಕ್ಕೆ ಬೆಣ್ಣೆ ಹಾಕಿ, ಬಳಿಕ ಪನೀರ್ ಸೇರಿಸಿ, ಕಾಳು ಮೆಣಸಿನ ಹುಡಿ ಹಾಗೂ ಗರಮ್ ಮಸಾಲ ಹುಡಿಯನ್ನು ಅದಕ್ಕೆ ಚಿಮುಕಿಸಿ, ಕಂದು ಬಣ್ಣ ಬರುವವರೆಗೆ ೩ರಿಂದ ೪ ನಿಮಿಷ ಫ್ರೈ ಮಾಡಿ ಬದಿಗಿಡಿ. ಜಾಸ್ತಿ ಬೇಯಿಸಲು ಹೋಗಬೇಡಿ.
.       ಈಗ ತೆಗಿದಿರಿಸಿದ ಪನೀರನ್ನು ಮಟರ್ ಗ್ರೇವಿಗೆ ಸೇರಿಸಿ ೧ರಿಂದ ೨ ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ ಅದಕ್ಕೆ ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಸೇರಿಸಿ ಗ್ಯಾಸ್ ಆರಿಸಿ.
(ಕ್ರೀಮ್ ಹಾಗೂ ಕೊತ್ತಂಬಾರಿ ಸೊಪ್ಪಿನಿಂದ ಅಲಂಕರಿಸಿ)

✍ : ತೃಪ್ತಿ ಭಂಡಾರಿ

 

Leave a Reply

Your email address will not be published. Required fields are marked *