ನನ್ನ ಬಾಲ್ಯದ 4-5 ನೇ ವಯಸ್ಸಿನಲ್ಲಿ (1979-80) ದೀಪಾವಳಿ ಅಂದ್ರೆ ಹೆಂಗಿತ್ತು ಗೊತ್ತಾ….. ನಮ್ಮಮ್ಮ ಇವತ್ತು ನೀರ್ ತುಂಬ್ಸೋ ಹಬ್ಬ ಅಂತ ಕೊಡ ತುಂಬ್ಸಿ ಪೂಜೆ ಮಾಡೊವಾಗ್ಲೆ ನಮ್ಗೆ (ಅಕ್ಕ, ನಾನು, ತಮ್ಮ) meter off ಆಗಿಬಿಡೋದು (ಈವಾಗ ನಾಯಿಗಳ್ಗೆ ಆಗ್ತದಲ್ಲಾ ಹಂಗೆ) ನಮ್ಮ್ ಮನೆ ಇದ್ದಿದ್ದು ಒಂತರಾ ಜನನಿಬಿಡ ಇರೋ ಇಕ್ಕಟ್ಟಾದ್ ಸ್ಥಳದಲ್ಲಿ (ರಾಜಾಜಿನಗರ ಬೆಂಗಳೂರು). Road ಲ್ಲಿ ಒಂದ್ ಪಟಾಕಿ ಢಂ ಅನ್ನೊ ಹಂಗಿಲ್ಲಾ … “ಅಮ್ಮೋ ನನ್ನ ಅಟ್ಟದ್ ಮೇಲ್ ಕೂರ್ಸು.. ಅಡುಗೆ ಮನೇಗ್ ಸೇರ್ಸು” ಅಂತಿದ್ವಿ…. ನಮ್ಮಮ್ಮ, ಅಪ್ಪ ಕ್ಯೆ ಹಿಡ್ಕೊಂಡ್ ಸುರ್ ಸುರ್ ಬತ್ತಿ ಬಿಡ್ಸೌರು ಪಾಪ. ಮೂರ್ನಾಲಕ್ ವರ್ಷ ಕಳದ್ ಮೇಲ್ ಕೇಳ್ತೀರಾ…??? ನೀರ್ ತುಂಬ್ಸೋ ಹಬ್ಬದ್ ದಿವ್ಸ ಅಪ್ಪಾ ರಾತ್ರಿ ಬರೋವಾಗ ಪಟಾಕಿ ತಂದಿಲ್ಲಾ ಅಂದ್ರೆ… ನಮ್ದು ಗಲಾಟೆ… ಅಮ್ಮಂದ್ ಛೊರೆ ಶುರು ಆಗಬಿಡೋದು. Daddy ಕರ್ಕೊಂಡ್ ಹೋಗಿ ಕೊಡಿಸ್ಬೇಕಿತ್ತು. ಪಟಾಕಿ ಹೊಡೆಯೋದ್ರಲ್ಲಿ Don ಗಳ್ ಆಗಿಬಿಟ್ಟಿದ್ವಿ ಪಟಾಕಿ List ಮಾಡೋ Level ಗೆ ಬಂದ್ ಬಿಟ್ಟಿದ್ವಿ….
ದೀಪಾವಳಿಗೆ ಒಂದ್ ದಿನ ಮುಂಚೆನೇ ಹತ್ತು ದಿನಕ್ ಆಗೋವಷ್ಟು ‘ಚಕ್ಲಿ’ ‘ಕರ್ಜಿಕಾಯಿ’ ನ ಮಾಡಿ ಇಡೋರು ಅಮ್ಮ ಅಪ್ಪ ಮಕ್ಳು ತಿನ್ಲೀ ಅಂತ. ನರಕ ಚತುರ್ದಶಿ ದಿವ್ಸ ನಮ್ ಮ್ಯೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸ್ತಿದ್ರು. ಆಯಾ ದಿನಗಳ ವಿಶೇಷತೆ ಹೇಳಿ ಪೂಜೆ ಮಾಡ್ತಿದ್ರು ಅಮ್ಮ. ಬಾಡಿಗೆ ಮನೆ, ಅಂಗ್ಡೀಲಿ ಒಬ್ರ ದುಡಿಮೆ, 50 ರೂ. ಪಟಾಕಿ ಅಂದ್ರೂನು ತುಂಬಾನೇ ಸಿಗ್ತಿತ್ತು. ಆದ್ರೆ ಆವಾಗ ಆ ಹಣಕ್ಕೆ ತುಂಬಾ ಬೆಲೆ ಇತ್ತು…ಕಣ್ರೀ. ಎಷ್ಟೇ ಕಷ್ಟ ಇದ್ರೂ ಪಟಾಕಿ ಕೊಡಿಸ್ತಿದ್ರು ಅಪ್ಪ. ರಸ್ತೆ, ವಠಾರ್ ದಲ್ಲಿ ಇರೋ ಮಕ್ಕಳು ಜೊತೆ ಸೇರಿ ಹಬ್ಬ Enjoy ಮಾಡ್ತಿದ್ವಿ ಆಡ್ತಿದ್ವಿ ಕುಣೀತಿದ್ವಿ…. ಅಮ್ಮನ್ ಜೊತೆ ಬಾಗ್ಲು ಮುಂದೆ ದೀಪ ಹಚ್ಚಿ ಸಂಭ್ರಮಿಸ್ತಿದ್ವಿ. ಅದೇ ನಮ್ ಬಾಲ್ಯದ್ ಬೆಂಗ್ಳೂರ್ ದೀಪಾವಳಿ.
ದೀಪಾವಳಿಯಲ್ಲಿ ಬಾಲ್ಯದ ದೀಪಾವಳಿಯೊಂದಿಗೆ ದಿವಂಗತರಾದ ಅಮ್ಮನನ್ನು, ಹಾಗೂ ಅಪ್ಪನವರು ನಿಭಾಯಿಸುತ್ತಿದ್ದ ಜವಾಬ್ಧಾರಿಯನ್ನು ನೆನಪಿಸಿಕೊಳ್ಳುವ ಸಂದರ್ಭ ಸೃಷ್ಟಿಸಿದ ಭಂಡಾರಿ ವಾರ್ತೆ ತಂಡಕ್ಕೆ ಕೃತಜ್ಞತೆಗಳು.
ರಾಜಶೇಖರ್ ಬೆಂಗಳೂರು.
super