ದೀಪಾವಳಿಯ ದಿನದಂದು ಎಲ್ಲರೂ ದೀಪಾವಳಿಯ ಸಂಭ್ರಮದಲ್ಲಿ ಇರುವಾಗ ಬಂಟ್ವಾಳ ತಾಲ್ಲೂಕಿನ ರಾಯಿಗ್ರಾಮದ ಗೋಪಿ ಭಂಡಾರಿ ಯವರ ಮನೆಯಲ್ಲಿ ಮಾತ್ರ ದುಃಖದ ಕರಿ ನೆರಳು. ಈ ಮನೆಯ ಕೂಲಿ ಕೆಲಸ ಮಾಡಿ ಮನೆಯನ್ನು ನಡೆಸುವ ಜವಾಬ್ದಾರಿ ಯನ್ನು ಹೊಂದಿರುವ ಮಗಳು ಪುಷ್ಪ (52 ವರ್ಷ )ಅಸೌಖ್ಯದಿಂದ ನಿಧನರಾದರು ಮೊದಲೇ ಈ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಅಂದು ಇವರ ಮಳೆಯ ನಂದಾ ದೀಪವೇ ಕಳಚಿ ಹೋಯಿತು ಅಂದು ಇವರ ಶವ ಸಂಸ್ಕಾರ ಕ್ಕೆ ಸೇರಿದ್ಧು ಬೆರಳೆಣಿಕೆಯ ಹತ್ತು ಜನ ಮಾತ್ರ.
ಇವರ ಸಮಸ್ಯೆಯನ್ನು ಅರಿತು ಇವರ ಮನೆಗೆ ಬಂಟ್ವಾಳ ಎಸ್ . ವಿ. ಎಸ್ . ಕಾಲೇಜಿನ ಉಪನ್ಯಾಸಕ ಹಾಗೂ ಬಂಟ್ವಾಳ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಭಂಡಾರಿ ಯವರ ನೇತೃತ್ವದಲ್ಲಿ ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಲಾಯಿತು ಈ ಸಂದರ್ಭದಲ್ಲಿ ಬಂಟ್ವಾಳ ಭಂಡಾರಿ ಸಮಾಜ ಸಂಘದ ಮಾಜಿ ಕಾರ್ಯದರ್ಶಿ ಧನಂಜಯ ಕೂರಿಯಾಳ ಉಪಸ್ಥಿತರಿದ್ದರು.
—ಭಂಡಾರಿ ವಾರ್ತೆ