September 20, 2024

ಸಾಕ್ಷಿ .ಪಿ.ಭಂಡಾರಿ ಇವರು ಅಕ್ಟೋಬರ್ 28 ಮತ್ತು 29 ರಂದು ಹುಬ್ಬಳ್ಳಿಯ ಶ್ರೀ ಆರ್. ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನೆಡೆದ ದಕ್ಷಿಣ ವಿಭಾಗೀಯ ಬೂಡೋ ಮಾರ್ಷಿಯಲ್ ಆರ್ಟ್ಸ್ ಚಾಂಪಿಯನ್‌ಷಿಪ್‌-2017 ರಲ್ಲಿ Katta ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ Kamite ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರು ಉಡುಪಿಯ ಟಿ.ಎ.ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಎರಡ್ಮೂರು ವರ್ಷಗಳಿಂದೀಚೆಗೆ ಸಾಕ್ಷಿ ನೂರಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಘಟನೆಗಳನ್ನು ಅವರ ತಾಯಿಯವರು ಮತ್ತು ಅಜ್ಜಿ ಸುನಂದಾ ಭಂಡಾರಿ ಕರಂಬಳ್ಳಿ ಯವರು ಭಂಡಾರಿವಾರ್ತೆ ಯೊಂದಿಗೆ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ಸಾಕ್ಷಿ.ಪಿ.ಭಂಡಾರಿ ಯವರು ಕರಾಟೆಯಲ್ಲಿ ಇನ್ನಷ್ಟು ಸಾಧನೆ ಮಾಡಲಿ.ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

ವರದಿ: ಭಾಸ್ಕರ್ ಭಂಡಾರಿ. ಸಿ.ಆರ್. ಶಿರಾಳಕೊಪ್ಪ

Leave a Reply

Your email address will not be published. Required fields are marked *